Advertisement

33 ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆಗೆ ಉಚಿತ ತರಬೇತಿ

02:44 PM Dec 03, 2019 | Suhan S |

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು 6 ಜಿಲ್ಲೆಗಳ 33 ತಾಲೂಕು ಕೇಂದ್ರಗಳಲ್ಲಿ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಯ ನೇಮಕಾತಿಗೆ ಪೂರ್ವಭಾವಿಯಾಗಿ ನಡೆಸುವ ಟಿಇಟಿ ಪರೀಕ್ಷೆಗೆ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ ಎಂದು ಕೆ.ಕೆ.ಆರ್‌.ಡಿ.ಬಿ. ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ತಿಳಿಸಿದರು.

Advertisement

ನಗರದ ಬಿ.ಎಡ್‌. ಕಾಲೇಜಿನಲ್ಲಿ ಕಲಬುರಗಿ ದಕ್ಷಿಣ ವಲಯ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ2019-20ನೇ ಸಾಲಿಗೆ ಶಿಕ್ಷಕರ ಅರ್ಹತಾಪರೀಕ್ಷೆಯ (ಟಿ..ಟಿ) ಪೂರ್ವಭಾವಿವಾಗಿ ನಡೆದ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಳಿಯು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಟ್ಟಿಬದ್ಧವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 371ಜೆ ಅನ್ವಯ ಇಲ್ಲಿನ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯವಿರುವುದರಿಂದ ಸ್ಥಳೀಯ ವಿದ್ಯಾರ್ಥಿಗಳು ಶಿಕ್ಷಕರ ಹುದ್ದೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿಯಾಗಲು ತರಬೇತಿ ನೀಡಲಾಗುತ್ತದೆ. ಮುಂದೆ ಸಿಇಟಿ ಪರೀಕ್ಷೆಗೂ ಉಚಿತ ತರಬೇತಿನೀಡುವ ಚಿಂತನೆ ನಡೆಯುತ್ತಿದೆ. ಹಿಂದುಳಿದ ಪ್ರದೇಶದ ಅಭ್ಯರ್ಥಿಗಳು ಬ್ಯಾಂಕಿಂಗ್‌, ಎಸ್‌.ಡಿ.., ಎಫ್‌.ಡಿ.. ಪರೀಕ್ಷೆ ಬರೆಯಲು ಅನುಕೂಲವಾಗುವ ನಿಟ್ಟಿನಲ್ಲಿಯೂ ತರಬೇತಿ ನೀಡಲಾಗುತ್ತಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನ್‌ ಅತುಲ್‌ ಮಾತನಾಡಿ, 33 ಉಚಿತ ತರಬೇತಿ ಕೇಂದ್ರಗಳಲ್ಲಿ ಇಂದಿನಿಂದ 45 ದಿನಗಳ ಕಾಲ ಪ್ರತಿದಿನ ಸಾಯಂಕಾಲ 4.30 ರಿಂದ 7.30ರ ವರೆಗೆ ನಡೆಯುವ ತರಬೇತಿಯಲ್ಲಿ ಆಂಗ್ಲ, ವಿಜ್ಞಾನ ಮತ್ತು ಗಣಿತವಿಷಯ ಬೋಧನೆ ಮಾಡಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳು ಬೋಧನೆ ಮಾಡಲಿದ್ದಾರೆ ಎಂದರು.

7 ವಾರಗಳ ಈ ತರಬೇತಿಯಲ್ಲಿ 6 ವಾರಗಳಲ್ಲಿಯೇ ಪ್ರತಿ ವಿಷಯದ ಎಲ್ಲಾ ಪಾಠಗಳನ್ನು ಮುಗಿಸುವ ಗುರಿ ಹೊಂದಲಾಗಿದೆ. ಕಲಿಕೆಯ ಗುಣಮಟ್ಟ ಪರಿಶೀಲಿಸಲು ಪ್ರತಿ ವಾರಕ್ಕೆ ಕಿರು ಪರೀಕ್ಷೆ ನಡೆಸಲಾಗುವುದಲ್ಲದೆ ಕೊನೆಯ ವಾರ ಪುನರ್‌ ಮನನ ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಉಚಿತ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಆಂಗ್ಲ, ವಿಜ್ಞಾನ, ಗಣಿತ ವಿಷಯದೊಂದಿಗೆ ಮನೋವಿಜ್ಞಾನ ವಿಷಯದತರಬೇತಿ ನಮಗೆ ಅಗತ್ಯವಿದೆ. ಸಿಇಟಿಯಲ್ಲಿ 50 ಅಂಕ ವಸ್ತುನಿಷ್ಠ ಪ್ರಕಾರ ಮತ್ತು 100 ಅಂಕ ವಿವರಣಾತ್ಮಕ ಪ್ರಕಾರ ಪರೀಕ್ಷೆ ಇರುವುದರಿಂದಅದಕ್ಕೆ ಪೂರ್ವಕವಾಗಿ ಬೋಧಿ ಸಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಹ ನಿರ್ದೇಶಕ ವಿಜಯಕುಮಾರ, ಅಪರ ಶಿಕ್ಷಣ ಆಯುಕ್ತಾಲಯದ ನಿರ್ದೇಶಕ ಟಿ. ನಾರಾಯಣಗೌಡ, ಮಂಡಳಿಯ ಶಿಕ್ಷಣ ತಜ್ಞ ಎನ್‌.ಬಿ. ಪಾಟೀಲ್‌ ಸೇರಿದಂತೆ ಸಂಪನ್ಮೂಲ ಶಿಕ್ಷಕರು, ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next