Advertisement

ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

04:29 PM Apr 10, 2021 | Team Udayavani |

ಬಾದಾಮಿ: ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀ ಸಿದ್ದೇಶ್ವರ ಪತ್ತಿನ ಸಹಕಾರಿಬ್ಯಾಂಕಿನ ಅಧ್ಯಕ್ಷ ಶಾಂತಗೌಡ ಪಾಟೀಲಅವರ ಆರ್ಥಿಕ ಸಹಾಯದಿಂದ ಪದವೀದರಪ್ರತಿಭಾವಂತ 100 ವಿದ್ಯಾರ್ಥಿಗಳಿಗೆಕೆಎಎಸ್‌, ಪಿಎಸ್‌ಐ, ಪೊಲೀಸ್‌, ಎಫ್‌ಡಿಎ, ಎಸ್‌ಡಿಎ ಮತ್ತು ಪಿಡಿಒ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದುಚಂದ್ರಶೇಖರ ಕಾಳನ್ನವರ, ಭೀಮನಗೌಡ ಪಾಟೀಲ ತಿಳಿಸಿದರು.

Advertisement

ನಗರದ ಕಾನಿಪ ಭವನದಲ್ಲಿಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರುಮಾತನಾಡಿದರು. ಬಾದಾಮಿ ಮತ್ತುಗುಳೇದಗುಡ್ಡ ತಾಲೂಕಿನ 100 ಅರ್ಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಅನುಕೂಲಕ್ಕಾಗಿ ಶಿಕ್ಷಣ ಕಾಶಿ ಧಾರವಾಡದಸಂಕಲ್ಪ ಕೋಚಿಂಗ್‌ ಸೆಂಟರ್‌ನಲ್ಲಿಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಉಚಿತತರಬೇತಿ ವ್ಯವಸ್ಥೆ ಮಾಡಲಾಗುವುದು.ಅರ್ಹ ಆಸಕ್ತ ಪ್ರತಿಭಾವಂತ ವಿದ್ಯಾರ್ಥಿಗಳುಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿಪಡೆಯಲು ತಮ್ಮ ಹೆಸರನ್ನು ಏ.10 ರೊಳಗೆವಿದ್ಯಾರ್ಥಿಗಳು ತಮ್ಮ ಹೆಸರನ್ನು ನಗರದಕಾಲೇಜ್‌ ರಸ್ತೆಯಲ್ಲಿರುವ ಪೂರ್ಣಿಮಾಸಿ.ಎಸ್‌.ಸಿ ಸೆಂಟರ್‌ ಮೊ:9964915488,9448446321 ಕರೆ ಮಾಡುವಮೂಲಕ ಅಥವಾ ಖುದ್ದಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಏ.11ರಂದು ರವಿವಾರಬೆಳಗ್ಗೆ 10ಗಂಟೆಗೆ ಕುಮಾರೇಶ್ವರಸಭಾಭವನದ ಅಕ್ಕಮಹಾದೇವಿಅನುಭಾವ ಮಂಟಪದಲ್ಲಿ ಪ್ರವೇಶ ಪರೀಕ್ಷೆಮತ್ತು ಕಾರ್ಯಾಗಾರ ನಡೆಯಲಿದೆ.ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉಚಿತಊಟದ ವ್ಯವಸ್ಥೆ ಮಾಡಲಾಗಿದೆ. ಈಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ,ಅತಿ ಹೆಚ್ಚು ಅಂಕವನ್ನು ಪಡೆದ 100ವಿದ್ಯಾರ್ಥಿಗಳಿಗೆ ಧಾರವಾಡದಲ್ಲಿರುವ ಸಂಕಲ್ಪ ಕೋಚಿಂಗ್‌ ಸೆಂಟರ್‌ ಅವರಲ್ಲಿ ಕೋಚಿಂಗ್‌ ಫೀ ಉಚಿತದೊಂದಿಗೆ ತರಬೇತಿ ಕೊಡಿಸಲಾಗುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜಭೂತಾಳಿ, ಬೆಲೂರಪ್ಪ ವಡ್ಡರ, ಪುಲಕೇಶಿ ಸೂಳಿಕೇರಿ, ಹುಚ್ಚಪ್ಪ ಬೆಳ್ಳಿಗುಂಡಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next