Advertisement

ಸಾವಿರ ಮಂದಿಗೆ ಉಚಿತ ರೈಲು ಪ್ರಯಾಣ!

06:55 AM Nov 02, 2017 | Team Udayavani |

ರಾಮೇಶ್ವರ: ಉಚಿತವಾಗಿ ರೈಲು ಪ್ರಯಾಣ ಮಾಡಲು ಅವಕಾಶ ಸಿಕ್ಕಿದರೆ ಹೇಗಿರುತ್ತದೆ? ಇದು ಯಾವುದೇ ಸರ್ಕಾರಿ ಯೋಜನೆಯ ಭಾಗವೂ ಅಲ್ಲ. ಮಂಗಳವಾರ ತಮಿಳುನಾಡಿನ ರಾಮೇಶ್ವರಲ್ಲಿ ನೈಜ ಘಟನೆ ಇದು. ರಾಮೇಶ್ವರ ದ್ವೀಪದಿಂದ 161 ಕಿಮೀ ದೂರದ ಮದುರೆಗೆ ಸುಮಾರು 1 ಸಾವಿರ ಮಂದಿ ಉಚಿತವಾಗಿ ಪ್ರಯಾಣಿಸಿದ್ದಾರೆ. ದ್ವೀಪದಲ್ಲಿ ಟಿಕೆಟ್‌ ಕೌಂಟರ್‌ನಲ್ಲಿ ಕರ್ತವ್ಯ ನಿರತನಾಗಿದ್ದ ವ್ಯಕ್ತಿ ಅನಾರೋಗ್ಯದಿಂದ ಹಾಜರಾಗಿರಲಿಲ್ಲ. ಅಗತ್ಯ ಕೆಲಸಕ್ಕೆ ತೆರಳುವವರಿಗೆ  ಹಾಗೂ ಪ್ರವಾಸಿಗರಿಗೆ ವಿಳಂಬವಾಗುತ್ತಿತ್ತು. 

Advertisement

ಹೀಗಾಗಿ ಬೆಳಗ್ಗೆ 5.30ಕ್ಕೆ ಬದಲಿ ವ್ಯವಸ್ಥೆಯಾಗಿ ಯಾರೂ ಬಂದಿರಲಿಲ್ಲ. ರೈಲು ಹೊರಡುವ ವೇಳೆಯಾಗಿದ್ದರಿಂದ ಪ್ರಯಾಣಿಕರು ಕೂಡ ಅವಸರ ಮಾಡಿದರು. ಹೀಗಾಗಿ ರೈಲು ಪ್ರಯಾಣ ಆರಂಭಿಸಿತು. ಕೌಂಟರ್‌ ಎದುರು ಪ್ರಯಾಣಿಕರು ಇದ್ದರೂ ಸಿಬ್ಬಂದಿ ಬರುತ್ತಾರೋ ಇಲ್ಲವೋ ಎಂಬ  ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯೇ ಇರಲಿಲ್ಲ. ಈ ಅಚಾತುರ್ಯದ ಬಗ್ಗೆ ಮದುರೆಯಲ್ಲಿರುವ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next