Advertisement

ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಮುಕ್ತ ಸಂಚಾರ: ಡಾ|ಜಯಮಾಲಾ

06:00 AM Sep 08, 2018 | Team Udayavani |

ಪಡುಬಿದ್ರಿ: ಜಿಲ್ಲೆಯ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ವಾಹನಗಳಿಗೆ ಮುಕ್ತ ಸಂಚಾರದ ಅವಕಾಶವನ್ನು ಕಲ್ಪಿಸಲಾಗುವುದೆಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ | ಜಯಮಾಲಾ ತಿಳಿಸಿದ್ದಾರೆ. 

Advertisement

ಅವರು ಸೆ. 7ರಂದು ಹೆಜಮಾಡಿ ಟೋಲ್‌ಗೇಟ್‌ ಸಮೀಪ ಜಿಲ್ಲೆಗೆ ಆಗಮಿಸುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ಈ ಟೋಲ್‌ಗೇಟನ್ನು ತಪ್ಪಿಸಿಕೊಂಡು ಸಾಗುವ ಹೊರ ಜಿಲ್ಲೆಗಳ ಘನವಾಹನಗಳು ಹಳೇ ಎಂಬಿಸಿ ರಸ್ತೆಯನ್ನು ಬಳಸಿ ಸಾಗುತ್ತಿದ್ದವು. ಅವುಗಳಿಗೆ ಕಡಿವಾಣ ಹಾಕಲು ಲೋಕೋಪಯೋಗಿ ರಸ್ತೆಗೆ ಟೋಲ್‌ ಹಾಕಲಾಗಿದೆ. ವಿನಹ ಸ್ಥಳೀಯರಿಗೆ ಯಾವುದೇ ಟೋಲ್‌ ವಸೂಲಿ ಮಾಡಲಾಗದು. ಹಾಗೇನಾದರೂ ಆದರೆ ಸಾರ್ವಜನಿಕರೊಂದಿಗೆ ನಾನಿದ್ದೇ ಇರುತ್ತೇನೆ. ಸ್ಥಳೀಯರ ಸಂಕಷ್ಟಕ್ಕೆ ನಾನೂ ಸ್ಪಂದಿಸುತ್ತೇನೆ ಎಂದೂ ಸಚಿವೆ ಡಾ| ಜಯಮಾಲಾ ತಿಳಿಸಿದರು. 

ಇದೇ ವೇಳೆ ಟೋಲ್‌ ಸಮೀಪದಲ್ಲೇ ಗೂಡಂಗಡಿಗಳನ್ನು ಹಾಕಿಕೊಂಡು ವ್ಯವಹಾರ ಮಾಡುತ್ತಿದ್ದ ಮಹಿಳೆಯರೀರ್ವರು ತಮ್ಮನ್ನು ಈ ಪ್ರದೇಶದಿಂದ ಎತ್ತಂಗಡಿ ಮಾಡಲು ನವಯುಗ ಸಂಸ್ಥೆಯು ಹುನ್ನಾರ ನಡೆಸಿದೆ ಎಂದು ಸಚಿವೆ ಜಯಮಾಲಾ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವೆ ಜಯಮಾಲಾ ಅವರನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಸನಿಹಕ್ಕೆ  ಅವರನ್ನು ಕರೆದೊಯ್ದು ಮಹಿಳಾ ಸಶಕ್ತೀಕರಣಕ್ಕೆ ತಮ್ಮ ಇಲಾಖೆಯ ವತಿಯಿಂದಲೂ ಸಹಾಯ ಮಾಡಬಹುದಾಗಿದೆ. 

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎನ್‌ಒಸಿಗೆ ಜಿಲ್ಲಾಡಳಿತವೇ ಪ್ರಯತ್ನ ನಡೆಸಿ ಮಹಿಳಾ ಸಶಕ್ತೀಕರಣಕ್ಕೆ ಅನುವು ಮಾಡಿಕೊಡಿ ಎಂದು ಸಚಿವೆ ಡಾ| ಜಯಮಾಲಾ  ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು. 

Advertisement

ಜಿಲ್ಲಾಧಿಕಾರಿ ಅದು ರಾಷ್ಟ್ರೀಯ ಹೆದ್ದಾರಿ ಜಾಗವೆಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೂ ಅದಕ್ಕೆ ತಲೆಯಾಡಿಸಿದರು. ಆದರೂ ಸಚಿವೆ ಜಯಮಾಲಾ ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡಿರಿ ಎಂದು ಪುನರುಚ್ಚರಿಸಿ ಮುನ್ನಡೆದರು. 

Advertisement

Udayavani is now on Telegram. Click here to join our channel and stay updated with the latest news.

Next