ಚಿತ್ತಾಪುರ: ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತು 500ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರಿದ್ದಿರಿ. ನಿವೆಲ್ಲರೂ ಮೆ 12ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಂದು ಬೂತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಹಾಕಿಸುವ ಮೂಲಕ ಚಿತ್ತಾಪುರವನ್ನು ಕಾಂಗ್ರೆಸ್ ಮುಕ್ತವನ್ನಾಗಿಸಲು ಪಣ ತೋಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ಪಟ್ಟಣದ ಸೋಮಶೇಖರ ಪಾಟೀಲ ಬೆಂಳಗುಂಪಾ ದಾಲ್‌ಮಿಲ್‌ನಲ್ಲಿ ಬಿಜೆಪಿ ಚಿತ್ತಾಪುರ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಸಮಾನ ಮನಸ್ಕರ ಸಮಾನ ನಾಯಕತ್ವದಲ್ಲಿ ಬಿಜೆಪಿ ಸೇರ್ಪಡೆ ಸಮಾರಂಭ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿನಿಂದ ಚಿತ್ತಾಪುರ ಕ್ಷೇತ್ರದಲ್ಲಿ ಕೆಲವರು ಕಾಂಗ್ರೆಸ್ ತೊರೆಯಲು ಭಯ ಪಡುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಹಿರಿಯ ಮುಖಂಡರು ಹಾಗೂ ಯವ
ಕಾರ್ಯಕರ್ತರು ಕಾಂಗ್ರೆಸ್‌ನ್ನು ತೊರೆದು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಕಾಂಗ್ರೆಸ್ ಖಾಲಿಯಾಗಿದೆ ಎಂದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ಪ್ರಿಯಾಂಕ್ ಖರ್ಗೆ ಕ್ಷೇತ್ರದ ಅಭಿವೃದ್ಧಿಗೆ 2700 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಅದರಲ್ಲಿ ಒಂದೊಂದು ಗ್ರಾಮಕ್ಕೆ 2 ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದರೆ ಈ ಭಾಗದಲ್ಲಿ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಅವರು ಬರೀ ಕಾಗದದಲ್ಲಿ ಮಾತ್ರ ಅಭಿವೃದ್ಧಿ ಪಡಿಸಿದ್ದಾರೆ ಹೊರತು ಕ್ಷೇತ್ರದಲ್ಲಿ ಅಲ್ಲ ಎಂದು ಹೇಳಿದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ ಮಾತನಾಡಿ, ನಾನು ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ನನ್ನ ಹತ್ತಿರ ನಾಮಿನೇಶನ್‌ಗೆ ತುಂಬಲು ಹಣ ಇರಲಿಲ್ಲ. ಅಂತಹ ಸಂದರ್ಭದಲ್ಲಿ ನನ್ನನ್ನು ಬಹುಮತದಿಂದ ಆರಿಸಿದ್ದಿರಿ. ಈ ಋಣ ತೀರಿಸಬೇಕಾದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳಿದರು.
ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಶಶಿಕಲಾ ತೆಂಗಳಿ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ರಾಜು ಮುಕ್ಕಣ್ಣ, ದಶರಥ ನಾಮದಾರ, ನಾಗರಾಜ ಭಂಕಲಗಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ನಾಗರಾಜ ಭಂಕಲಗಿ ನೇತೃತ್ವದಲ್ಲಿ 500 ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಉದ್ಯಮಿಗಳಾದ ಲಿಂಗಾರೆಡ್ಡಿ ಭಾಸರೆಡ್ಡಿ, ಸೋಮಶೇಖರ ಪಾಟೀಲ ಬೆಳಗುಂಪಾ, ಶ್ರೀನಿವಾಸ ಸಗರ್, ಬಸವರಾಜ ಇಂಗಿನ್, ರೇವಣಸಿದ್ದಪ್ಪ ಮಾಸ್ತರ್, ಪುರಸಭೆ ಸದಸ್ಯರಾದ ರಾಮದಾಸ ಚವ್ಹಾಣ, ಸುರೇಶ ಬೆನಕನಳ್ಳಿ ಮುಖಂಡರಾದ ಶಂಕರ ಚವ್ಹಾಣ, ಶರಣಪ್ಪ ನಾಟೀಕಾರ, ಮುರಘೇಶ ಭಜಂತ್ರಿ, ಅಣ್ಣಾರಾವ್ ಬಾಳಿ, ಬಸವರಾಜ ಶಿವಗೋಳ, ಬಸವರಾಜ ಪಂಚಾಳ, ಅಕ್ಕಮಹಾದೇವಿ, ಮಹೇಶ ಬಟಗೇರಿ, ಶಿವಕುಮಾರ ಯಾಗಾಪುರ, ಶಿವಯ್ಯ ಗುತ್ತೇದಾರ, ಕುನಾಲ್ ಜೀತುರೆ, ರಮೇಶ ಕಾಳನೂರ್, ಪ್ರಭಾಕರ್ ತುರೆ ಇದ್ದರು. ನಾಗರಾಜ ಹೂಗಾರ ಸ್ವಾಗತಿಸಿದರು. ಶರಣು ಜ್ಯೋತಿ ನಿರೂಪಿಸಿದರು. ಶಾಂತಕುಮಾರ ಮಳಖೇಡ ವಂದಿಸಿದರು.