Advertisement

ತಾಂಡಾಗಳಲ್ಲಿ ಉಳಿದಿದೆ ಧರ್ಮ-ಸಂಸ್ಕೃತಿ

06:34 AM Feb 14, 2019 | Team Udayavani |

ಅಫಜಲಪುರ: ಆಧುನಿಕತೆ ದಿನಗಳಲ್ಲಿ ಬಹಳಷ್ಟು ಸಮಾಜಗಳು ಕೆಟ್ಟು ಹೋಗಿವೆ. ಆದರೆ ಬಂಜಾರಾ ಸಮಾಜ ಮಾತ್ರ ಧರ್ಮ, ಸಂಸ್ಕೃತಿ ಉಳಿಸಿಕೊಂಡು ಬಂದಿದ್ದು, ಭಾರತೀಯ ಸಂಸ್ಕೃತಿಯನ್ನು ಇಂದಿಗೂ ತಾಂಡಾಗಳಲ್ಲಿ ಕಾಣಬಹುದು ಎಂದು ಚಿನ್ಮಯಗಿರಿಯ ಶ್ರೀ ವೀರ ಮಹಾಂತ ಶಿವಾಚಾರ್ಯರು ನುಡಿದರು.

Advertisement

ತಾಲೂಕಿನ ಚವಡಾಪುರ ತಾಂಡಾದಲ್ಲಿ ನಡೆದ ಜಗದಂಬಾದೇವಿ 9ನೇ ಅಗ್ಗಿ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಚವಡಾಪುರ ತಾಂಡಾ ಈಗ ಪುಣ್ಯಕ್ಷೇತ್ರವಾಗಿ ಬೆಳೆಯುತ್ತಿದೆ. ಮುರಾಹರಿ ಮಹಾರಾಜರು ತಾಲೂಕಿನ ಸಮಸ್ತ ಬಂಜಾರಾ ಸಮಾಜ ಒಗ್ಗೂಡಿಸಿ ಎಲ್ಲ ಸಮಾಜಗಳೊಂದಿಗೆ ಬೆರೆತು ಸಮ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತಿದ್ದಾರೆ ಎಂದು ಹೇಳಿದರು. 

ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ಬಂಜಾರಾ ಸಮಾಜ ಸದಾ ಕಾಯಕ ತತ್ವ ಪಾಲಿಸಿಕೊಂಡು ಬಂದ ಸಮಾಜವಾಗಿದೆ. ಹೀಗಾಗಿ ಸರ್ಕಾರಗಳು ಬಂಜಾರಾ ಸಮಾಜವನ್ನು ಕಡೆಗಣಿಸಬಾರದು. ಬಡತನ, ಅನಕ್ಷರತೆ ತಾಂಡವವಾಡುತ್ತಿದೆ. ಹೀಗಾಗಿ ಸರ್ಕಾರಗಳು ತಾಂಡಾಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದರು.

ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ, ಅತನೂರಿನ ಗುರುಬಸವ ಶಿವಾಚಾರ್ಯರು, ಜಿಲಾನಿ ಮಠ ಕಲಬುರಗಿಯ ಶಮಶೋದ್ದೀನ್‌ ಖಾದ್ರಿ ಸಾಹೇಬ್‌ ಮಾತನಾಡಿ, ತಾಲೂಕಿನ ಚವಡಾಪುರ ತಾಂಡಾದ ಮುರಾಹರಿ ಮಹಾರಾಜ, ಗೊಬ್ಬೂರದ ಬಳಿರಾಮ ಮಹಾರಾಜರು ಬಂಜಾರಾ ಸಮಾಜದ ಕಣ್ಣುಗಳಾಗಿದ್ದಾರೆ. ತಪಸ್ವಿ ಮುರಾಹರಿ ಮಹಾರಾಜರಿಂದ ಬಂಜಾರಾ ಸಮಾಜ ಇನ್ನಷ್ಟು ಏಳಿಗೆಯಾಗಲಿ ಎಂದು ಹೇಳಿದರು. ನೇತೃತ್ವ ವಹಿಸಿದ್ದ ಮುರಾಹರಿ ಮಹಾರಾಜರು ಮಾತನಾಡಿ, ಮಾನವ ಧರ್ಮ ದೊಡ್ಡದು, ಯಾವುದೇ ಜಾತಿ, ಭೇದ ಮಾಡದೆ ಎಲ್ಲರನ್ನು ಒಂದಾಗಿ ಕಾಣುವುದೇ ಮನುಷ್ಯ ಧರ್ಮವಾಗಿದೆ ಎಂದರು.
 
ಪರ್ವತಲಿಂಗ ಮಹಾರಾಜ, ಸಿದ್ಧಲಿಂಗ ಮಹಾಸ್ವಾಮಿ, ಜೇಮಸಿಂಗ್‌ ಮಹಾರಾಜ್‌, ರೇವಣಸಿದ್ದೇಶ್ವರ ಶಿವಾಚಾರ್ಯರು, ಅನೀಲ ಸಾಹೇಬ, ಮಾತಾ ಕಲಾವತಿದೇವಿ, ಶಾಂತಾದೇವಿ ಹಾಗೂ ಇನ್ನಿತರರು ಭಾಗವಹಿಸಿದ್ದರು. ದೇವಸ್ಥಾನದ ಕಾರ್ಯದರ್ಶಿ ದತ್ತು ಪವಾರ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next