Advertisement
ಉಚಿತ ತರಬೇತಿಡಿಸೆಂಬರ್ನಿಂದ ಇಲ್ಲಿ ಉಚಿತ ಹೊಲಿಗೆ ತರಬೇತಿ ಆರಂಭವಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 40 ಜನ ಮಹಿಳೆಯರು ತರಬೇತಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆಸಕ್ತಿ ತೋರಿಸಿದ್ದಾರೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಕೈ ಚೀಲಗಳ ತಯಾರಿಕೆಗೆ ಒತ್ತು ನೀಡಲಾಗುತ್ತದೆ. ತರಬೇತಿ ಪಡೆದ ನಂತರ ಹೊರಗಿನಿಂದ ಆರ್ಡರ್ ಪಡೆದು ಬಟ್ಟೆ ಹೊಲಿದು ಕೊಡುವ ಯೋಜನೆಯೂ ಇದೆ. ಬಂದ ಆದಾಯ ಎಸ್‌ಎಲ್‌ಆರ್‌ಎಂ ಘಟಕ ನಿರ್ವಹಣೆಗೆ ಬಳಸುವ ಯೋಜನೆ ಇದೆ. ಸ್ವಾವಲಂಬನಾ ಕೇಂದ್ರದಲ್ಲಿ ತರಬೇತಿ ಪಡೆದ ನಂತರ ಬಟ್ಟೆ ಬ್ಯಾಗ್ ತಯಾರಿಸಿ ದೇವಸ್ಥಾನ, ಅಂಗಡಿಗಳಿಗೆ ಸರಬರಾಜು ಮಾಡುವ ಯೋಜನೆಯೂ ಇದೆ. ತರಬೇತಿ ಬಳಿಕ ಪ್ರಮಾಣ ಪತ್ರ ನೀಡಲಾಗುತ್ತದೆ. ತರಬೇತಿಗೆ ವಂಡ್ಸೆ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮೊದಲ ತಂಡ ಭರ್ತಿಯಾಗಿದ್ದು ಉತ್ತಮವಾಗಿ ಮುನ್ನಡೆಯುತ್ತಿದೆ.
ಗ್ರಾಮ ಪಂಚಾಯತ್ ಸ್ವಾವಲಂಬನಾ ಕೇಂದ್ರದ ನಿರ್ಮಾಣಕ್ಕೆ ಸುಮಾರು 2.5ಲಕ್ಷ ವ್ಯಯಿಸಿದ್ದು, 10 ಟೈಲರಿಂಗ್ ಯಂತ್ರಗಳ ಖರೀದಿಸಿ ಸೂಕ್ತ ಪೀಠೊಪಕರಣಗಳ ಸೇರಿದಂತೆ ಸುಸಜ್ಜಿತ ತರಬೇತಿ ಕೇಂದ್ರವನ್ನಾಗಿ ನಿರ್ಮಾಣ ಮಾಡಲಾಗಿದೆ. ಆರು ತಿಂಗಳು ಇಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. 20 ಜನ ಅಭ್ಯರ್ಥಿಗಳ ಬ್ಯಾಚ್ ಮಾಡಿ ಬೆಳಗ್ಗೆ ಮತ್ತು ಮಧ್ಯಾಹ್ನ ತರಬೇತಿ ನೀಡಲಾಗುತ್ತಿದೆ. ಸ್ವಾವಲಂಬನೆಗೆ ಪ್ರೇರೇಪಣೆ
ನಿರುದ್ಯೋಗಿ ಆಸಕ್ತ ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬನೆಗೆ ಪ್ರೇರೆಪಿಸುವುದು, ಪ್ಲಾಸ್ಟಿಕ್ ನಿಷೇಧಕ್ಕೆ ಪರ್ಯಾಯವಾಗಿ ಪರಿಸರಸ್ನೇಹಿ ಬ್ಯಾಗ್‌ಗಳ ತಯಾರಿ, ಹೊರಗಿನ ಆರ್ಡರ್‌ಗಳನ್ನು ಪಡೆದು ಬಟ್ಟೆ ಹೊಲಿದು ಕೊಡುವುದು, ತರಬೇತಿ ಖರ್ಚುವೆಚ್ಚಗಳನ್ನು ದಾನಿಗಳ ನೆರವಿನಿಂದ ಭರಿಸುವ ಯೋಚನೆಯೂ ಇದೆ. ಇದರಿಂದ ಬಂದ ಲಾಭಾಂಶವನ್ನು ಎಸ್.ಎಲ್.ಆರ್.ಎಂ ಘಟಕದ ನಿರ್ವಹಣೆಗೆ ಬಳಸಲಾಗುವುದು.
ಉದಯ ಕುಮಾರ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷರು
Related Articles
Advertisement