ಸುರಪುರ(ಯಾದಗಿರಿ): ಪ್ರಸ್ತುತ ಕೋವಿಡ್ ೨ನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು ಗ್ರಾಮೀಣ ಭಾಗದಲ್ಲಿ ರೋಗ ಹರಡದಂತೆ ಸ್ಯಾನಿಟೈಸ್ ಮಾಡುವ ಕಾರ್ಯವನ್ನು ಜಿಲ್ಲೆಯ ಸುರುಪುರ ತಾಲೂಕಿನ ದೇವಿಕೇರಾ ಗ್ರಾಮದ ಅನ್ನದಾನ ಪೌಂಡೇಶನ್ ಮತ್ತು ರಾಜುಗೌಡ ಅಭಿಮಾನಿ ಬಳಗದಿಂದ ಆರಂಭಿಸಲಾಗಿದೆ.
ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ದೇವರು ಕಾರ್ಯಕ್ಕೆ ಚಾಲನೆ ನೀಡಿ, ಗ್ರಾಮೀಣ ಭಾಗದ ಯುವಕರ ಸಾಮಾಜಿಕ ಸೇವೆ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಕೋವಿಡ್ ಮಹಾಮಾರಿ ಹಳ್ಳಿ ತಲುಪದಂತೆ ತಡೆಯುವುದು ನಮ್ಮ ಮುಖ್ಯ ಉದ್ದೇಶ. ವಾಹನದ ವ್ಯವಸ್ಥೆ ಸೇರಿದಂತೆ ಸ್ಯಾನಿಟೈಸರ್ ಸಿಂಪಡಣೆಗೆ 6 ಜನ ಸಿಬ್ಬಂದಿಯನ್ನು ನೇಮಿಸಿದ್ದು ಅವರಿಗೆ ತರಬೇತಿ ನೀಡಲಾಗಿದೆ. ಮಿಲಾಥಿನ್ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣ ಸಿಂಪಡಣೆ ಮಾಡಲಾಗುತ್ತಿದ್ದು, ಪ್ರತಿ ಗ್ರಾಮಕ್ಕೆ 10 ಲೀಟರ್ ದ್ರಾವಣ ಸಿಂಪರಣೆ ಮಾಡಲಾಗುವುದು. ಎಸ್‌ಹೆಚ್ ಖಾನಾಪುರ ಮತ್ತು ಪೇಠ ಅಮಾಪುರ 2 ಜಿಪಂ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಸ್ಯಾನಿಟೈಜರ್ ಮಾಡುವ ಗುರಿಯಿದೆ ಎಂದು ಪೌಂಡೇಶನ್ ಅಧ್ಯಕ್ಷ ರಂಗನಗೌಡ ಪಾಟೀಲ ಹೇಳಿದರು.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಮತ್ತೆ ಹತ್ತು ದಿನ ಲಾಕ್ ಡೌನ್ ವಿಸ್ತರಣೆ : ಯೋಗಿ
ಆಯಾ ಗ್ರಾಮಗಳಲ್ಲಿ ಸಂಬಂಧಪಟ್ಟ ಗ್ರಾ.ಪಂ ಸಿಬ್ಬಂದಿಗಳ ನೆರವು ಪಡೆಯಲಾಗುವುದು. ಬೇರೆ ಜಿಪಂ. ಕ್ಷೇತ್ರದವರು ಕರೆ ಮಾಡಿದಲ್ಲಿ ಆ ಗ್ರಾಮದವರಿಗೂ ನೆರವು ನೀಡಲಾಗುವುದು ಸೇವೆಗಾಗಿ 9901204050ಗೆ ಸಂಪರ್ಕಿಸಲು ಕೋರಿದರು.