Advertisement
ಪ್ರಪಂಚದಾದ್ಯಂತ ನೂರಾರು ವಿದ್ಯಾರ್ಥಿಗಳು ಆನ್‌ಲೈನ್ ಲೈಬ್ರೆರಿಗಳನ್ನು ಉಪಯೋಗಿಸುತ್ತಿದ್ದಾರೆ. 1971 ರಲ್ಲಿ ಅಮೆರಿಕಾದ ಲೇಖಕ ಮೈಕೆಲ್ ಹಾರ್ಟ್ ಅವರಿಂದ ಪ್ರಾರಂಭವಾದ ಈ ಸೈಟ್ ನೂರಾರು ಪುಸ್ತಕಗಳನ್ನು ಹೊಂದಿದ್ದು, ಇದನ್ನು ಸ್ವಯಂ ಸೇವಕರು ಎಚ್ಚರಿಕೆಯಿಯಿಂದ ಡಿಜಿಟಲೀಕರಣಗೊಳಿಸಿದ್ದಾರೆ. ಇದು ಪೂರ್ವ ಮತ್ತು ವಿಶ್ವ ಯುದ್ದದ ನಂತರದ ಸಾಹಿತ್ಯದ ಅತ್ಯುತ್ತಮ ಸಂಪನ್ಮೂಲವಾಗಿದೆ. ಇಲ್ಲಿ ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ, ಔಷಧ ಇನ್ನಿತರ ವಿಭಾಗಗಳಲ್ಲಿ ಸುಮಾರು 62,000 ಪುಸ್ತಕಗಳು ಲಭ್ಯವಿದೆ.
ಇದೊಂದು ಉತ್ತಮ ಸಾಹಿತ್ಯಕ ಸಂಪನ್ಮೂಲವಾಗಿದ್ದು, ಇಲ್ಲಿ ಕವನಗಳು, ಲೇಖನಗಳು,ಸಣ್ಣ ಕಥೆಗಳು ಮತ್ತು ನಾಟಕಗಳಿವೆ. ಹಾಗೆಯೆ ಅಧ್ಯಯನ ಮಾರ್ಗದರ್ಶಿ, ಉಲ್ಲೇಖ ಪುಸ್ತಕಗಳನ್ನು ಹೊಂದಿದೆ. ಸ್ಟೇಟ್ ನಲ್ಲಿ ಚಾರ್ಲ್ಸ್ ಡಿಕನ್ಸ್, ಷೇಕ್ಸ್‌ಫಿಯರ್, ಇನ್ನಿತರ ಪುಸ್ತಕಗಳಿವೆ. ಇಂಟರ್‌ನೆಟ್ ಅರ್ಕಾಯಿವ್: ಅತೀ ಹೆಚ್ಚು ಪುಸ್ತಕ ಮತ್ತು ಪಠ್ಯಗಳನ್ನು ಒಳಗೊಂಡಿದೆ.ವಿಶ್ವದ 28 ಸ್ಥಳಗಳಲ್ಲಿ ದಿನಕ್ಕೆ 1000 ಕ್ಕೂ ಹೆಚ್ಚು ಪುಸ್ತಕಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ.
Related Articles
ಓಪನ್ ಲೈಬ್ರೆರಿ ಎಲ್ಲ ವಯಸ್ಸಿನವರಿಗೆ ಉತ್ತಮವಾದ ಕಾದಂಬರಿ ಸಂಗ್ರಹವನ್ನು ಹೊಂದಿದೆ. ಹದಿನೈದು ದಿನಗಳವರೆಗೆ ನೀವು ಪುಸ್ತಕವನ್ನು ಎರವಲು ಪಡೆಯಬಹುದಾಗಿದೆ.ಲಾಕ್‌ಡೌನ್ ನಿಂದ ಬೇಸರಗೊಂಡಿದ್ದರೆ ನೀವು ಈ ಆನ್‌ಲೈನ್ ಲೈಬ್ರೆರಿಗಳ ಸಹಾಯದಿಂದ ನಿಮ್ಮಿಷ್ಟದ ಪುಸ್ತಕಗಳನ್ನು ಓದಬಹುದು ಹಾಗೂ ಬೇಸರವನ್ನು ದೂರಗೊಳಿಸಬಹುದಾಗಿದೆ.
Advertisement
ಆನ್‌ಲೈನ್ ಬುಕ್ ಪೇಜ್:ಪ್ರಪಂಚದಾದ್ಯಂತ ಅನೇಕ ಪ್ರಸಿದ್ದ ವಿಶ್ವವಿದ್ಯಾಯಗಳು ತಮ್ಮ ಆನ್‌ಲೈನ್ ಗ್ರಂಥಾಲಯಗಳನ್ನು ತೆರೆದಿವೆ. ನೀವು ಉಪಯೋಗಿಸಬಹುದಾಗಿದೆ.ಇಲ್ಲಿ ಸಿಗುವ ಪುಸ್ತಕಗಳು ಓದುಗ ಸ್ನೇಹಿ, ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗೆ ಉಚಿತವಾಗಿದೆ. ಪಿಡಿಎಫ್ ಬುಕ್ ವರ್ಲ್ಡ್:
ಕಾದಂಬರಿ , ಶೈಕ್ಷಣಿಕ ಪಠ್ಯಗಳು ಮತ್ತು ಪತ್ರಿಕೆಗಳು, ಮಕ್ಕಳಿಗೆ ಬೇಕಾದ ಮಾಹಿತಿ ಪುಸ್ತಕಗಳ ಸಂಗ್ರಹವನ್ನು ಇಲ್ಲಿ ಕಾಣಬಹುದಾಗಿದೆ.