Advertisement

ಉಚಿತ ಆನ್‌ಲೈನ್‌ ಐಟಿ ಕೌಶಲ್ಯ ಅಭಿವೃದ್ಧಿ

06:38 AM Mar 29, 2019 | Vishnu Das |

ಬೆಂಗಳೂರು: ಎಜುಕೇಷನ್‌ ಆನ್‌ ಕ್ಲೌಡ್‌(ಇಒಸಿ) ಸಂಸ್ಥೆ ರಾಜ್ಯಾದ್ಯಂತ ಸ್ಕಿಲ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ (ಎಸ್‌ಡಿಪಿ)ನಡಿಯಲ್ಲಿ 35ಕ್ಕೂ ಹೆಚ್ಚು ಜಾಬ್‌ ಓರಿಯೆಂಟೆಡ್‌ ಐಟಿ ಸ್ಕಿಲ್‌ ಪ್ರೋಗ್ರಾಂ ಕೋರ್ಸ್‌ಗಳನ್ನು ಹಮ್ಮಿಕೊಂಡಿದೆ.

Advertisement

ಇಒಸಿ-ಎಸ್‌ಡಿಪಿ ತರಬೇತಿ ಪಡೆಯುವ ಕರ್ನಾಟಕದ ವಿದ್ಯಾರ್ಥಿಗಳಿಗೆಭಾರತದ ಮೊದಲ ಡಿಜಿಟಲ್‌ ಗ್ರಂಥಾಲಯ ಉಚಿತ ಸ್ಮಾರ್ಟ್‌ ಮೊಬೈಲ್‌ ಫೋನ್‌ಗಳನ್ನು ನೀಡಲು ಮುಂದಾಗಿದೆ. ರಾಜ್ಯದ ಗ್ರಾಮೀಣ ಮತ್ತು ಸೆಮಿ ಅರ್ಬನ್‌ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮವನ್ನು ಇಒಸಿ ಸಂಸ್ಥೆ ಪ್ರಾರಂಭಿಸಿದ್ದು, ಡಿಸೆಂಬರ್‌ 2019ರ ಒಳಗೆ ಸಂಸ್ಥೆ ಇದರ ಪ್ರಯೋಜನಗಳನ್ನು 1.50 ದಶಲಕ್ಷ ವಿದ್ಯಾರ್ಥಿಗಳಿಗೆ ಒದಗಿಸಲು ಗುರಿ ಹಾಕಿಕೊಂಡಿದೆ.

ವಿದ್ಯಾರ್ಥಿಗಳು ಮಾತ್ರವಲ್ಲದೆ ಕಂಪ್ಯೂಟರ್‌ ಕೋರ್ಸ್‌ಗಳನ್ನು ಕಲಿಯಲು ಬಯಸುವ ಇತರ ಅಭ್ಯರ್ಥಿಗಳು ಯೋಜನೆಯ ಎಲ್ಲ ಪ್ರಯೋಜನಗಳನ್ನುಪಡೆಯಲು ನೋಂದಾಯಿಸಿಕೊಳ್ಳಬಹುದಾಗಿದೆ. ಕೋರ್ಸ್‌ಗಳು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿದ್ದು, ಅಭ್ಯರ್ಥಿಗಳು ಜೀವಿತಾವಧಿವರೆಗೆ ಉಚಿತ ವೆಚ್ಚದಲ್ಲಿ ಕೋರ್ಸ್‌ ಕಂಟೆಂಟ್‌ಗಳನ್ನು ಪಡೆದುಕೊಳ್ಳಲಿದ್ದಾರೆ.

ಡಿಜಿಟಲ್‌ ಗ್ರಂಥಾಲಯ ಎಲ್ಲ ಇಒಸಿ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ ಮೊಬೈಲ್‌ ಫೋನ್‌ಗಳನ್ನು ಒದಗಿಸುವ ಮೂಲಕ ಕರ್ನಾಟಕದ ಗ್ರಾಮೀಣ ಮತ್ತು ಅರೆ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನದ ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಇದರಡಿ ಜೀವಿತಾವಧಿವರೆಗೆ ಲರ್ನ್ ಆ್ಯಂಡ್‌ ಅರ್ನ್ ಯೋಜನೆಯಡಿ ವಿದ್ಯಾರ್ಥಿಗಳು ಮಾಸಿಕ 300 ರೂ. ಪ್ರತಿಫಲ ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಸ್ಥಾನ ಮೀಸಲಾತಿಗೆ 9071760433ಗೆ ಕರೆ ಮಾಡಿ ಎಂದು ಇಒಸಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಕೌಶಿಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next