Advertisement
ತಂದೆಯಿಂದ ಬಳುವಳಿ: ತಂದೆ ದಾಸಪ್ಪ ಅವರು ಈ ಹಿಂದಿನಿಂದಲೂ ನಾಟಿ ಔಷಧ ದಾಸಪ್ಪ ಎಂದೇ ಖ್ಯಾತಿಯಾಗಿದ್ದಾರೆ. ತಂದೆ ಕಲಿಸಿದ ವಿದ್ಯೆಯನ್ನು ಸ್ವಾಮಣ್ಣ ಮುಂದುವರಿಸಿದ್ದಾರೆ. ಅಲ್ಲದೇ, ತಾಯಿ ಅಂಕಮ್ಮ ಕೂಡ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿಸುವ ಕಾಯಕ ಮಾಡುತ್ತಿದ್ದರು.
Related Articles
Advertisement
ಕಬ್ಬು ಕಟಾವು ಮಾಡಿ ಜೀವನ: ಸ್ವಾಮಿ ಅವರಿಗೆ ಯಾವುದೇ ಜಮೀನಿಲ್ಲ. ಕಬ್ಬು ಕಟಾವು ಮಾಡಿ ಜೀವನ ನಡೆಸುತ್ತಾರೆ. ಅವರ ಮಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳನ್ನು ಮದುವೆ ಮಾಡಿಕೊಟ್ಟಿರುವ ಅವರು, ತಮ್ಮ ಮೊಮ್ಮಕ್ಕಳಿಗೂ ನಾಟಿ ಔಷಧ ನೀಡುವ ವಿದ್ಯೆ ಕಲಿಸುತ್ತಿದ್ದಾರೆ. ಶ್ರೀರಂಗಪಟ್ಟಣದ ಬನ್ನಿಮಂಟಪ ಕಿರಂಗೂರು ಗೇಟ್‌ನಿಂದ ಪಾಂಡವಪುರಕ್ಕೆ ತೆರಳುವ ಮಾರ್ಗಮಧ್ಯೆ ಸಿಗುವ ಗ್ರಾಮದ ಬೆಣ್ಣೆ ಇಡ್ಲಿ ಶಿವಣ್ಣ ಹೋಟೆಲ್‌ನಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಬಲಭಾಗದಲ್ಲಿಯೇ ಅವರ ಮನೆ ಸಿಗುತ್ತದೆ. ನಾಟಿ ಔಷಧ ನೀಡುವ ಸ್ವಾಮಣ್ಣ ಮನೆ ಎಂದರೆ ಯಾರಾದರೂ ತೋರಿಸುತ್ತಾರೆ.
ಕಸಾಪದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಇವರ ಸೇವೆಯನ್ನು ಕೆಲವು ಸಂಘ-ಸಂಸ್ಥೆಗಳು ಗುರುತಿಸಿ ಅಭಿನಂದಿಸಿವೆ. ಇತ್ತೀಚೆಗೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ತಮ್ಮ ತಂದೆಯಿಂದ ಕಲಿತ ವಿದ್ಯೆ ಮುಂದುವರಿಸಿದ್ದೇನೆ. ಬರುವ ಎಲ್ಲಾ ವರ್ಗದ ಜನರಿಗೂ ಉಚಿತವಾಗಿ ಔಷಧ ನೀಡುತ್ತಿದ್ದೇನೆ. ಪ್ರತಿದಿನ ಮನೆ ಬಳಿ ಬರುವ ರೋಗಿಗಳಿಗೆ ಔಷಧ ನೀಡುತ್ತಿದ್ದೇನೆ. ಇದುವರೆಗೂ ಸಾಕಷ್ಟು ಮಂದಿಗೆ ನಾಟಿ ಔಷಧ ನೀಡಿದ್ದು, ಗುಣಮುಖರಾಗಿದ್ದಾರೆ. ಹಾವು ಕಚ್ಚಿದ ಯಾರೇ ಬಡವರು ಇಲ್ಲಿಗೆ ಬಂದು ನಾಟಿ ಔಷಧ ಪಡೆಯಬಹುದು. – ಡಿ.ಸ್ವಾಮಿ, ನಾಟಿ ವೈದ್ಯ, ದರಸಗುಪ್ಪೆ, ಶ್ರೀರಂಗಪಟ್ಟಣ
-ಎಚ್.ಶಿವರಾಜು