Advertisement

ಉಚಿತ ಹಾಲು ಒಂದು ವಾರ ವಿಸ್ತರಣೆ

07:19 AM Apr 15, 2020 | mahesh |

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡವರಿಗೆ ಉಚಿತವಾಗಿ ನಿತ್ಯ ಅರ್ಧ ಲೀಟರ್‌ ಕೆಎಂಎಫ್‌ ಹಾಲು ವಿತರಣೆ ಇನ್ನೊಂದು ವಾರ ವಿಸ್ತರಣೆ ಸಂಬಂಧ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಹಿತ ಸಚಿವರು, ಅಧಿಕಾರಿಗಳ ಸಭೆ ಯಲ್ಲಿ ಉಚಿತ ಹಾಲು ವಿತರಣೆ ಯೋಜನೆಯನ್ನು ಇನ್ನೂ ಒಂದು ವಾರ ಅಂದರೆ ಎ. 21ರ ವರೆಗೆ ಮುಂದುವರಿಸಲು ತೀರ್ಮಾನಿಸಿ, ಆದೇಶ ಹೊರಡಿಸಲಾಗಿದೆ.

Advertisement

ರಾಜ್ಯದ 14 ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ನಿತ್ಯ 7.75 ಲಕ್ಷ ಲೀಟರ್‌ ಹಾಲನ್ನು ಬಡವರು, ನಿರ್ಗತಿಕರು, ನಿರಾಶ್ರಿತರಿಗೆ ಅರ್ಧ ಲೀಟರ್‌ ವಿತರಿಸಬೇಕು. ಮಹಾ ನಗರಪಾಲಿಕೆ ಹಾಗೂ ಜಿಲ್ಲಾಡಳಿತ ಇದರ ಉಸ್ತುವಾರಿ ವಹಿಸಬೇಕು.

ಉಚಿತ ಹಾಲು ವಿತರಣೆ ಪ್ರಕ್ರಿಯೆಯನ್ನು ಒಂದು ವಾರ ಮುಂದುವರಿಸಿರುವುದಕ್ಕೆ ಪಶು ಸಂಗೋಪನ ಸಚಿವ ಪ್ರಭು ಚೌಹಾಣ್‌ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next