ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದನಾಗರಿಕರ ಅನುಕೂಲಕ್ಕಾಗಿ ಸುಜೀವ್‌ಫೌಂಡೇಷನ್ ಸಹಯೋಗದಲ್ಲಿ ಹೆಲ್ಪ್ಲೈನ್‌ಸ್ಥಾಪಿಸಿ, ರೋಗಿಗಳಿಗೆ ಆಕ್ಸಿಜನ್ ಬೆಡ್, ಔಷಧಿಕುರಿತಂತ ಮಾಹಿತಿ ನೀಡಲಾಗುವುದು.
ಜತೆಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಮಾಜಿಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು.ತಮ್ಮ ನಿವಾಸದಲ್ಲಿ ಭಾನುವಾರಸುದ್ದಿಗೋಷ್ಠಿ ನಡೆಸಿದ ಅವರು, ಕೋವಿಡ್‌ಪಾಸಿಟಿವ್ ವ್ಯಕ್ತಿಗಳಿಗೆ ಆರೋಗ್ಯ ಕಿಟ್
ವಿತರಿಸಲಾಗುವುದು. ಥರ್ಮೋಮೀಟರ್,ಸ್ಟೀಮ್ ಇನ್ಹೆಲೇಟರ್, ಮೆಡಿಸೆನ್ಸ್ 7ದಿನಗಳಿಗೆ, ಡೋಲೋ 650, ಡಾಕ್ಸಿಲಿನ್ 100ಲಿಮಿÕ , ಜಿಂಕೋವಿಟ್, ಸಿಟ್ರಿಜನ್ 4, ಬಯೋಡೀಗ್ರೇಡೆಬಲ್ ಕವರ್ 5, ಊಟದಅಲ್ಯೂಮಿನಿಯಂ ಬಾಕ್ಸ್ 6, ಮಾಸ್ಕ್ 7,ಸ್ಯಾನಿಟೈಸರ್ ಇರುವ ಕಿಟ್ ನೀಡಲಾಗುವುದು ಎಂದರು.
ಈಗಾಗಲೇ ಉಸಿರಾಟದ ತೊಂದರೆಯಿಂದಬಳಲುತ್ತಿದ್ದು ಕೋವಿಡ್ ಪಾಸಿಟಿವ್ ಆಗಿದ್ದು,ಮನೆಯಲ್ಲೇ ಐಸೋಲೇಟ್ ಆಗಿರುವಂತವರುಚಿಕ್ಕ ಆಕ್ಸಿಜನ್ ಸಿಲಿಂಡರ್ ಹೊಂದಿದ್ದರೆಅಂತಹ ವರಿಗೆ ಆಕ್ಸಿಜನ್ ತುಂಬಿಸಿಕೊಡಲುವ್ಯವಸ್ಥೆ ಮಾಡಲಾಗುವುದು ಎಂದರು.ಕೋವಿಡ್‌ಗೆ ಸಂಬಂಧಿಸಿದಂತೆ ಸಹಾಯವಾಣಿಯನ್ನು ಕಚೇರಿಯಲ್ಲಿ ತೆರೆದಿದ್ದು,ನಾಗಮಹದೇವ ಮೊ.988039060,ಮಹೇಂದ್ರ 8722339060, ಗುಣಶೇಖರ್9880390463 ಅವರನ್ನು ಸಂಪರ್ಕಿಸಿ ಸೂಕ್ತ ಸಹಾಯ, ಮಾರ್ಗದರ್ಶನ ಪಡೆಯುವಂತೆಮನವಿ ಮಾಡಿದರು.
2ನೇ ಡೋಸ್ ಲಸಿಕೆ ನೀಡಿ: ಎಲ್ಲರಿಗೂ ಲಸಿಕೆಕೊಡುವುದಾಗಿ ಆಶ್ವಾಶನೆ ಕೊಟ್ಟ ಸರ್ಕಾರ ತನ್ನಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ತಮ್ಮ ಕ್ಷೇತ್ರದ ಹಿರಿಯ ನಾಗರಿಕರುಮೊದಲನೇ ಲಸಿಕೆ ಪಡೆದು 50 ದಿನಗಳಾಗಿದೆ.2ನೇ ಲಸಿಕೆ ಇಲ್ಲ ಅನ್ನುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ತ್ವರಿತವಾಗಿಅರ್ಹರಿಗೆ ಎರಡನೇ ಡೋಸ್ ನೀಡಬೇಕುಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌ಉಪಾಧ್ಯಕ್ಷ ಡಾ. ರಾಜಾರಾಂ, ನಗರ ಪಾಲಿಕೆಸದಸ್ಯ ಜೆ.ಗೋಪಿ, ಮಾಜಿ ಸದಸ್ಯ ಸುನಿಲ್‌ಭಾಗವಹಿಸಿದ್ದರು.