Advertisement
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಅವರು ಮಾತನಾಡಿ, ಇತ್ತೀಚೆಗೆ ತೋಟಗಾರಿಕೆ ಸಚಿವ ಮುನಿರತ್ನ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಅಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿರುವೆ. ಸದ್ಯದಲ್ಲೇ ಸುಳ್ಯಕ್ಕೆ ತೋಟಗಾರಿಕೆ ಸಚಿವರು ಬಂದು ರೈತರ ಅಭಿಪ್ರಾಯ ಸಂಗ್ರಹಿಸುವರು ಎಂದು ಅವರು ಹೇಳಿದರು. ಉಚಿತ ಔಷಧದೊಂದಿಗೆ ಬೆಳೆಗಾರರಿಗೆ ಬೇಕಾದ ದೋಟಿಯನ್ನು ಸಬ್ಸಿಡಿ ದರದಲ್ಲಿ ಒದಗಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಸರ ಕಾರ ಸಕಾ ರಾತ್ಮಕ ವಾಗಿ ಸ್ಪಂದಿಸಿದ್ದರೂ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಪ್ರಾಕೃತಿಕ ವಿಕೋಪ ದಿಂದ ಮನೆ ನಾಶಗೊಂಡಿದ್ದರೆ 40 ರಿಂದ 50 ಸಾವಿರ ರೂ. ಪರಿಹಾರ ನೀಡ ಲಾಗು ತ್ತಿತ್ತು. ಆದರೆ ಬಿಜೆಪಿ ಸರಕಾರ 5 ಲಕ್ಷ ರೂ. ನೀಡುತ್ತಿದೆ.