Advertisement

ಮಾಸ ಪೂರ್ತಿ ಉಚಿತ ವೈದ್ಯಕೀಯ ಸೇವೆ

11:03 AM Nov 06, 2021 | Team Udayavani |

ಚಂದಾಪುರ: ಬೆಂಗಳೂರಿನಲ್ಲಿ ಕನ್ನಡ ಉಳಿಯಲು ಹಲವು ಕನ್ನಡಪರ ಹೋರಾಟ ಗಾರರು ಬೀದಿಗಿಳಿದು ಬಾವುಟ ಹಿಡಿದು ಹೋರಾಟ ನಡೆಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಕನ್ನಡ ಬಾರದ ಅನ್ಯಭಾಷಿಕರಿಗೆ ಕನ್ನಡ ಕಲಿಸುವುದು ಮತ್ತೂಂದು ಸೇವೆಯಾಗಿದೆ.

Advertisement

ಇನ್ನೂ ಕೆಲವರು ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ. ಹೌದು ನವೆಂಬರ್‌ ಬಂತೆಂದರೆ ರಾಜ್ಯದಲ್ಲಿ ಕನ್ನಡ ಹಬ್ಬದ ಸಂಭ್ರಮ ಎದ್ದುಕಾಣುತ್ತದೆ. ರಾಜ್ಯೋತ್ಸವ ಪ್ರಯುಕ್ತ ಕೆಲವರು ಅನ್ನದಾನ ಮಾಡುತ್ತಾರೆ. ಕವಿ,ಸಾಹಿತಿ,ಕನ್ನಡ ಹೋರಾಟಗಾರ, ಹಾಗೂ ಸಾಧಕರನ್ನು ಸನ್ಮಾನಿಸುತ್ತಾರೆ. ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಆದರೆ ಚಂದಾಪುರ ಮತ್ತು ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಬೆಸ್ಟ್ ಆಸ್ಪತ್ರೆಯು ಸ್ಥಾಪಕ ಡಾ. ವಿಜಯರಾಘವ ರೆಡ್ಡಿ ಅವರು ಐದು ವರ್ಷಗಳಿಂದ ಕನ್ನಡದ ಮೇಲಿನ ಅಭಿಮಾನ ಹಿನ್ನೆಲೆ ನವೆಂಬರ್‌ ತಿಂಗಳಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುತ್ತಾ ರಾಜ್ಯೋತ್ಸವಕ್ಕೆ ತಮ್ಮದೇ ಆದ ಅಳಿಲು ಸೇವೆಗೆ ಮುಂದಾಗಿದ್ದಾರೆ. ಡಾ.ವಿಜಯ ರಾಘವ ರೆಡ್ಡಿ ಪ್ರತಿಕ್ರಿಯಿಸಿ ನಾನು ಬಾಲ್ಯದಿಂದಲೂ ಕನ್ನಡ ಭಾಷೆ ಎಂದರೆ ಇಷ್ಟ ನಾನೂ ಸಹ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪೂರೈಸಿ ಬಳಿಕ ಉನ್ನತ ವ್ಯಾಸಂಗ ಮಾಡಿ ವೈದ್ಯನಾಗಿ ಈಗ ಆಸ್ಪತ್ರೆಯನ್ನು ಸ್ಥಾಪಿಸಿದ್ದೇನೆ. ‌

ಈ ವೇಳೆಯಲ್ಲಿಯೇ ಊರಿನ ಸ್ನೇಹಿತರೊಂದಿಗೆ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದೆ. ಇದೇ ಪ್ರೇರಣೆಯು ನನ್ನ ಆಸ್ಪತ್ರೆಯಲ್ಲಿ ಯಾಕೆ ನಾನು ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ರಾಜ್ಯೋತ್ಸವ ಆಚರಿಸಬಾರದು ಎಂಬ ಆಲೋಚನೆ ಬಂತು. ಕನ್ನಡ ಸೇವೆಯ ಸಂಕಲ್ಪ ತೊಟ್ಟು ಸುತ್ತ ಮುತ್ತಲಿನ ಬಡವರಿಗೆ, ಕಾರ್ಮಿಕರಿಗೆ, ಅನುಕೂಲವಾಗುವಂತೆ ಇಡೀ ನವೆಂಬರ್‌ ತಿಂಗಳು ಉಚಿತ ತಪಾಸಣಾ ಮಾಸವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ:- ಕಳಪೆ ರಸ ಗೊಬ್ಬರ ಕಳುಹಿಸಿದ ಚೀನಾ : ಶ್ರೀಲಂಕಾ ನೆರವಿಗೆ ನಿಂತ ಭಾರತ

Advertisement

ಕಣ್ಣು, ಕಿವಿ.ಮೂಗು, ಆಸ್ತಮಾ, ಬಿ.ಪಿ, ಶುಗರ್‌, ಚರ್ಮ ರೋಗ ಸೇರಿದಂತೆ ಎಲ್ಲ ಕಾಯಿಲೆಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಉತ್ತಮ ತಜ್ಞ ವೈದ್ಯರು ಆಸ್ಪತ್ರೆಯಲ್ಲಿದ್ದಾರೆ. ಕನ್ನಡ ಸೇವೆಯ ಸಂತೋಷ ಉಂಟಾಗುತ್ತದೆ ಇದು ಕೇವಲ ಕನ್ನಡಿಗರಿಗೆ ಮಾತ್ರ ವಲ್ಲ ಕನ್ನಡೇತರಿಗೂ ಸೇವೆ ಉಚಿತ ಈ ನವೆಂಬರ್‌ ತಿಂಗಳು ಮಾತ್ರ. ಈ ಅಳಿಲು ಸೇವೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

“ನನಗೆ ಅತ್ತಿಬೆಲೆ ವೃತ್ತ ವಿಭಾಗದಲ್ಲಿ ಸೇವೆಯ ಮಾಡುವ ಸಂದರ್ಭದಲ್ಲಿ ಚಂದಾಪುರದ ಬೆಸ್ಟ್ ಆಸ್ಪತ್ರೆಗೆ ಭೇಟಿ ನೀಡಿದ್ದೆ ಆಗ ಡಾ.ವಿಜಯ ರಾಘವ ರೆಡ್ಡಿ ಪರಿಚಯವಾದರು. ಅಪಾಘತಗಳ ರೋಗಿಗಳ ಚಿಕಿತ್ಸೆ ಮಾಡುವ ವಿಧಾನ, ಮತ್ತು ಅಲ್ಲಿನ ವೈದ್ಯಕೀಯ ವ್ಯವಸ್ಥೆ, ಸೇವೆ ಉತ್ತಮವಾಗಿರುವುದು ಸಂತಸ ತಂದಿದೆ. ಕನ್ನಡ ಸೇವೆಯನ್ನೂ ಮಾಡುತ್ತಿರುವುದು ಉತ್ತಮ ಕೆಲಸ.”

  • ಎಲ್‌.ವೈ.ರಾಜೇಶ್‌,ಬಂಡೆಪಾಳ್ಯದ ವೃತ್ತ ಪೊಲೀಸ್ನಿರೀಕ್ಷಕ.

 – ಮಹೇಶ್‌ ಊಗಿನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next