Advertisement

ಮಂಗಳೂರು ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ವೈಟ್ ಡೋವ್ಸ್ ಸಂಸ್ಥೆಯಿಂದ ಊಟದ ವ್ಯವಸ್ಥೆ

04:35 PM Mar 27, 2020 | keerthan |

ಮಂಗಳೂರು: ದೇಶದಾದ್ಯಂತ ಲಾಕ್ ಡೌನ್ ಆದೇಶವಿದ್ದು ಸಂಚಾರ ವ್ಯವಸ್ಥೆ, ಅಂಗಡಿ ಮುಂಗಟ್ಟು ಬಂದ್ ಆಗಿದೆ. ಇದಿರಿಂದ ಬಹಳಷ್ಟು ಜನರು ನಿರಾಶ್ರಿತರಾಗಿದ್ದಾರೆ. ಮಂಗಳೂರು ನಗರದಲ್ಲಿ ಹಲವರು ಊಟಕ್ಕೂ ಕಷ್ಟಪಡುತ್ತಿದ್ದು, ಹಲವು ಸಂಘ ಸಂಸ್ಥೆಗಳು ಊಟದ ವ್ಯವಸ್ಥೆ ಮಾಡಿ ಮಾದರಿಯಾಗಿದ್ದಾರೆ.

Advertisement

ಕಳೆದ 21 ವರ್ಷಗಳಿಂದ ಮಂಗಳೂರಿನ ವೈಟ್ ಡೋವ್ಸ್ ಎಂಬ ಸೇವಾ ಸಂಸ್ಥೆ ಸರಕಾರಿ ವೆನ್ ಲಾಕ್ ಆಸ್ಪತ್ರೆ ಆವರಣದಲ್ಲಿ ಆಹಾರ ಪೂರೈಕೆ ಮಾಡುತ್ತಿದ್ದರು. ಕೋವಿಡ್-19 ವೈರಸ್ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಮಾಡಿರುವ ಹಿನ್ನೆಯಲ್ಲಿ ವಸತಿ ಸೌಕರ್ಯ ಇಲ್ಲದ ಆಹಾರ ದೊರೆಯದವರಿಗೆ ವೈಟ್ ಡೋವ್ಸ್ ಸಂಸ್ಥೆ ಮೂರು ಹೊತ್ತಿನ ಆಹಾರ ಪೂರೈಕೆ ಮಾಡುತ್ತಿದೆ.

ಈ ಬಗ್ಗೆ  ವೈಟ್  ಡೋವ್ಸ್ ಸಂಸ್ಥೆಯ ಸಂಸ್ಥಾಪಕರಾದ ಕೊರಿನ್ ರಸ್ಕಿನಾ ಅವರು ಮಾಹಿತಿ ನೀಡಿದ್ದು, ಆಹಾರ ವಿತರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ಡುಕೊಳ್ಳಲು ಅವರಿಗೆ ಮನವರಿಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next