Advertisement

ಮಂಗಳೂರು ನಗರದಲ್ಲಿ ಇನ್ನೂರಕ್ಕೂ ಹೆಚ್ಚು ನಿರಾಶ್ರಿತರಿಗೆ ಊಟದ ವ್ಯವಸ್ಥೆ

04:48 PM Mar 27, 2020 | keerthan |

ಮಂಗಳೂರು: ಇಲ್ಲಿನ ವೆಲ್ ಲಾಕ್ ಆಸ್ಪತ್ರೆ ಆವರಣದಲ್ಲಿ ರಾಮ ಸೇನೆ ವತಿಯಿಂದ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಗಂಜಿ ಊಟ ಉಪ್ಪಿನಕಾಯಿ ವಿತರಣೆ ಮಾಡಲಾಗುತ್ತಿದೆ. ರೈಲ್ವೇ ನಿಲ್ದಾಣ ಮತ್ತು ವೆನ್ ಲಾಕ್ ಆಸ್ಪತ್ರೆ ಆಸುಪಾಸಿನಲ್ಲಿ ಇನ್ನೂರಕ್ಕೂ ಹೆಚ್ಚಿನ ನಿರಾಶ್ರಿತರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ.

Advertisement

ಮಂಗಳೂರು ನಗರದಲ್ಲಿ 700 ಕ್ಕೂ ಹೆಚ್ಚು ಮಂದಿ ನಿರಾಶ್ರಿತರು, ಆಹಾರ ಸೌಲಭ್ಯ ಇಲ್ಲದಿರುವ ಕೂಲಿ ಕಾರ್ಮಿಕರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇಂತಹ ನಿರಾಶ್ರಿತರ ಸಾಮೂಹಿರ ಆರೋಗ್ಯ ತಪಾಸಣೆ ನಡೆಸಬೇಕು, ವಸತಿ ಮತ್ತು ಶೌಚಾಲಯ ಸೌಲಭ್ಯ ಇಲ್ಲದವರಿಗೆ ಮೂಲಭೂತ ವಸತಿ ಸೌಲಭ್ಯ ಒದಗಿಸುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ ಎಂದು ಸಮಾಜ ಸೇವಾ ಸಂಸ್ಥೆಗಳು ಅಭಿಪ್ರಾಯಪಟ್ಟಿದೆ.

ಕೋವಿಡ್-19 ವೈರಸ್ ಲಾಕ್ ಡೌನ್ ಆದನಂತರ ನಿರಾಶ್ರಿತರಿಗೆ, ವಲಸೆ ಕಾರ್ಮಿಕರಿಗೆ ಹಲವಷ್ಟು ಸಂಘ ಸಂಸ್ಥೆಗಳು ಊಟದ ಸಹಾಯ ನೀಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next