ಚಿಕ್ಕಬಳ್ಳಾಪುರ: ಮೇ 14, 15ರ ಉಚಿತ ಬೃಹತ್ ಆರೋಗ್ಯಮೇಳದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಯ ಎಲ್ಲ ಗ್ರಾಮಗಳು ಮತ್ತು ಚಿಕ್ಕಬಳ್ಳಾಪುರ ನಗರದ ವಾರ್ಡ್‌ಗಳಲ್ಲಿ 100 ಕ್ಕೂ ಹೆಚ್ಚು ತಂಡಗಳಿಂದ ರಕ್ತ ತಪಾಸಣಾ ಶಿಬಿರ ನಡೆಯುತ್ತಿದ್ದು, ಅಗತ್ಯ ವಿರುವ ಎಲ್ಲರೂ ರಕ್ತ ತಪಾಸಣೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಲತಾ ಮನವಿ ಮಾಡಿದರು.
ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಆಧಿಕಾರಿ ಗಳೊಂದಿಗೆ ಏರ್ಪಡಿಸಿದ್ದ ಆರೋಗ್ಯ ಮೇಳದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪೂರ್ವ ಸಿದ್ಧತೆಗಾಗಿ ಈಗಾಗಲೇ ರಚಿಸಿರುವ ಸಮಿತಿಗಳ ಕಾರ್ಯವೈಖರಿಯ ಪ್ರಗತಿ ಪರಿಶೀಲನೆ ನಡೆಸಿದರು. ಬƒಹತ್ ಆರೋಗ್ಯ ಮೇಳದಲ್ಲಿ ಆರೊಗ್ಯ ಚಿಕಿತ್ಸೆ ಪಡೆಯಲಿರುವವರಿಗೆ ರಕ್ತ ಪರೀಕ್ಷೆಗಾಗಿ ರಕ್ತವನ್ನು ಸಂಗ್ರಹಿಸುವ ಕಾರ್ಯವು ಚಿಕ್ಕಬಳ್ಳಾಪುರ ವಿಧಾನ ಸಭಾ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಮತ್ತು ವಾರ್ಡ್‌ಗಳಲ್ಲಿ ಈಗಾಗಲೇ ಚಾಲನೆಯಲ್ಲಿದ್ದು ಮುಂದಿನ ಕೆಲವು ದಿನಗಳಲ್ಲಿ ನಡೆಯಲಿದೆ. ಸದರಿ ರಕ್ತ ಪರೀಕ್ಷಾ ಶಿಬಿರಗಳಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾಗವಹಿಸಿ ರಕ್ತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸಹಕಾರ ನೀಡಬೇಕೆಂದು ಕೋರಿದರು.
ಗ್ರಾಪಂ ಮಟ್ಟದ ಆಧಿಕಾರಿಗಳು ಸಿಬ್ಬಂದಿ ಹಾಗೂ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಆಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ವ್ಯಾಪ್ತಿಯ ಗ್ರಾಮಗಳು ಮತ್ತು ವಾರ್ಡ್‌ಗಳಲ್ಲಿ ರಕ್ತ ಪರೀಕ್ಷಾ ಶಿಬಿರ ನಡೆಯುವ ಸ್ಥಳ ಹಾಗೂ ಇನ್ನಿತರ ಮಾಹಿತಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಮೇಳಕ್ಕೆ ವಾರ್ಡ್‌ಗಳಿಂದ ನೋಂದಣಿಯಾದ, ಇನ್ನೂ ನೋಂದಣಿ ಆಗಬೇಕಿರುವ ಜನರಿಂದ ಪ್ರತಿ ದಿನ 20 ಸಾವಿರ ಮಾದರಿ ರಕ್ತ ಸಂಗ್ರಹಣೆ ಮಾಡಿ ರಕ್ತ ತಪಾಸಣೆಗೊಳಪಡಿಸಿ ಮೇಳಕ್ಕೂ ಮುಂಚೆ ರಕ್ತಪರೀಕ್ಷೆ ವರದಿಗಳನ್ನು ಸಿದ್ಧಪಡಿಸಿಕೊಳ್ಳಬೇಕು.ಇದರಿಂದ ಮೇಳದಲ್ಲಿ ಶೀಘ್ರಗತಿಯಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು.
ಮೇಳಕ್ಕೆ ಎನ್‌ಎಸ್‌ಎಸ್ ಎನ್‌ಸಿಸಿ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಅವರನ್ನು ಹೆಚ್ಚಿನ ಮಟ್ಟದಲ್ಲಿ ನೇಮಿಸಬೇಕು ಎಂದು ಸಂಬಂಧಪಟ್ಟ ಆಧಿಕಾರಿಗಳಿಗೆ ತಿಳಿಸಿದರು.
ಮೇಳದ ಸಂಬಂಧ ಈಗಾಗಲೇ ರಚಿಸಿರುವ ಎಲ್ಲ ಸಮಿತಿಗಳ ಮುಖ್ಯಸ್ಥರಿಂದ ಪ್ರಸ್ತುತ ಸಿದ್ಧತೆಗಳ ಪ್ರಗತಿಯನ್ನು ಪರಿಶೀಲಿಸಿದರು ಹಾಗೂ ಮುಂದೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ವರಿಷ್ಠಾ ಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪಕಾರ್ಯ ದರ್ಶಿ ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಎಚ್. ಅಮರೇಶ್, ಉಪವಿಭಾಗ ಕಾರಿ ಸಂತೋಷ್ ಕುಮಾರ್ ಇತರರಿದ್ದರು.