Advertisement

“ಸಪ್ತಪದಿ’ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿಯೇ ಇಲ್ಲ!

06:47 PM Mar 07, 2021 | Team Udayavani |

ಚಿಕ್ಕಮಗಳೂರು: ಸರಳ ವಿವಾಹ ಪ್ರೋತ್ಸಾಹಿಸುವ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ “ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ ವಿನೂತನ ಯೋಜನೆ ತಂದಿದ್ದು, ಯೋಜನೆಯಡಿ ಜಿಲ್ಲೆಯ ಮೂಡಿಗೆರೆ ತಾಲೂಕು ಕಳಸ ಹೋಬಳಿ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಪ್ತಪದಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

Advertisement

ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುವಂತೆ ಸರ್ಕಾರ ಏ.22, ಮೇ 30, ಜೂ.17 ಹಾಗೂ ಜು.7ರ ದಿನವನ್ನು ನಿಗದಿಪಡಿಸಲಾಗಿದೆ. ಆದರೆ, ಸಪ್ತಪದಿ ಯೋಜನೆಯಡಿಯಲ್ಲಿ ವಿವಾಹವಾಗಲು ಇದುವರೆಗೂ ಯಾರು ಕೂಡ ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಇಂದಿನ ದಿನದಲ್ಲಿ ವಿವಾಹ ಕಾರ್ಯಕ್ರಮ ನಡೆಸಲು ಲಕ್ಷಾಂತರ ರೂ. ವ್ಯಯಿಸಬೇಕಿದೆ. ವಧು, ವರನ ಮನೆಯವರು ಸಾಲದ ಸುಳಿಗೆ ಸಿಲುಕಿ ಕಷ್ಟ ಅನುಭವಿಸಬೇಕಾಗುತ್ತದೆ. ಮತ್ತು ಆಡಂಬರದ ಮದುವೆಗಿಂತ ಸರಳ ವಿವಾಹಕ್ಕೆ ಜನರು ಆದ್ಯತೆ ನೀಡಲಿ ಎಂಬ ಉದ್ದೇಶದಿಂದ ಸರ್ಕಾರ ಸಪ್ತಪದಿ ಯೋಜನೆ ತಂದಿದೆ.

ಸಪ್ತಪದಿ ಉಚಿತ ಸಾಮೂಹಿಕ ವಿವಾಹ ಯೋಜನೆಯಲ್ಲಿ ವರನಿಗೆ ಪ್ರೋತ್ಸಾಹಧನ 5 ಸಾವಿರ, ವಧುವಿಗೆ ಪ್ರೋತ್ಸಾಹಧನ 10 ಸಾವಿರ ರೂ. ನೀಡಲಾಗುತ್ತದೆ. ವಧು-ವರರು ಅವರ ಸಂಪ್ರದಾಯಕ್ಕೆ ತಕ್ಕಂತೆ ಅವಶ್ಯ ವಸ್ತುಗಳನ್ನು ಅವರೇ ವ್ಯವಸ್ಥೆ ಮಾಡಿ ಕೊಳ್ಳಬೇಕು. ನಂತರ ಈ ಪ್ರೋತ್ಸಾಹಧನವನ್ನು ವಧು-ವರರ ಬ್ಯಾಂಕ್‌ಖಾತೆಗೆ ಜಮೆ ಮಾಡಲಾಗುತ್ತದೆ. ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8ಗ್ರಾ. ತೂಕ) ಸೇರಿದಂತೆ 40 ಸಾ ವಿರ ರೂ. ದೇವಾಲಯದಿಂದ ನೀಡಲಾಗುತ್ತದೆ. ಸಪ್ತಪದಿ ಯೋಜನೆಯಡಿ ವಿವಾಹವಾಗುವ ಬಯಸುವ ವಧುವರರು ವಯಸ್ಸು ದೃಢೀಕರಣ ಪತ್ರ (ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಇತರೆ ದಾಖಲೆ) ಪೋಷಕರ ಒಪ್ಪಿಗೆ ಪತ್ರ, ಆಧಾರ ಕಾರ್ಡ್‌, ಎರಡನೇ ಮದುವೆಯಾಗಿಲ್ಲದ ಬಗ್ಗೆ ದೃಢೀಕರಣ ಪತ್ರ ಸಲ್ಲಿಸುವುದು ಕಡ್ಡಾ ಯವಾಗಿದೆ.

ಸರ್ಕಾರ ಮಾ.5ರಂದು ಸಪ್ತಪದಿ ಉಚಿತ ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿಪಡಿಸಿತ್ತು. ಆದರೆ, ಯಾವುದೇ ಜೋಡಿಗಳು ನೋಂದಣಿಯಾಗದ ಕಾರಣದಿಂದ ಕಾರ್ಯಕ್ರಮ ನಡೆದಿರಲಿಲ್ಲ, ಈಗ ಏ.22, ಮೇ.30, ಜೂ.17, ಜು.7 ಈ ದಿನಾಂಕಗಳಲ್ಲಿ ಸಪ್ತಪದಿ ಉಚಿತ ಸಾಮೂಹಿಕ ವಿವಾಹ ನಡೆಸಲು ದಿನಾಂಕ ನಿಗ ಪಡಿಸಿದ್ದು ಇದುವರೆಗೂ ಯಾವುದೇ ಜೋಡಿ ನೋಂದಣಿಯಾಗಿಲ್ಲ ಎಂದು ತಿಳಿದು  ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next