Advertisement

ಎಲ್ಲ ಬಡವರಿಗೂ ಉಚಿತ ಎಲ್‌ಪಿಜಿ

06:00 AM Dec 18, 2018 | Team Udayavani |

ಹೊಸದಿಲ್ಲಿ: ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುವ ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ ಎಲ್ಲ ಬಡ ಕುಟುಂಬಗಳಿಗೂ ನೀಡಲು ನಿರ್ಧರಿಸಿದೆ. 2016ರಲ್ಲಿ ಪರಿ ಚಯಿಸಲಾದ ಈ ಯೋಜನೆ ಅಡಿಯಲ್ಲಿ ಬಡತನ ರೇಖೆ ಗಿಂತ ಕೆಳಗಿರುವ ಆಯ್ದ ಕುಟುಂಬಗಳ ಮಹಿಳಾ ಸದಸ್ಯರಿಗೆ ಮಾತ್ರ ನೀಡಲಾಗುತ್ತಿತ್ತು. ಇನ್ನು ದೇಶದ ಎಲ್ಲ ಬಡ ಕುಟುಂಬಗಳಿಗೂ ಅಡುಗೆ ಅನಿಲ ಸಂಪರ್ಕ ಸಿಗಲಿದೆ. 

Advertisement

ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸೋಮವಾರ ಈ ನಿರ್ಧಾರ ಕೈಗೊಂಡಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.ಸಿಲಿಂಡರ್‌ನ ಠೇವಣಿ ಮೊತ್ತವನ್ನು ಸರ್ಕಾರ ಭರಿಸಲಿದ್ದು, ಅಡುಗೆ ಸ್ಟವ್‌ ಅನ್ನು ಫ‌ಲಾನುಭವಿಗಳು ಖರೀದಿಸಬೇಕಾ ಗುತ್ತದೆ. ಇದಕ್ಕಾಗಿ ತೈಲ ಕಂಪನಿಗಳಿಗೆ 1600 ಕೋಟಿ ರೂ. ಅನ್ನು ಕೇಂದ್ರ ಸರಕಾರ ನೀಡುತ್ತಿದೆ. ಸದ್ಯ ಪ.ಜಾ, ಪ.ಪಂ ಕುಟುಂಬಗಳು, ತೀರಾ ಹಿಂದುಳಿದ ವರ್ಗಗಳು, ದ್ವೀಪವಾಸಿ ಗಳು, ಬುಡಕಟ್ಟು ಜನಾಂಗಗಳು, ಚಹಾ ಎಸ್ಟೇಟ್‌ ಮತ್ತು ಪ್ರಧಾನ ಮಂತ್ರಿ ಆವಾಸ ಯೊಜನೆ ಮತ್ತು ಅಂತ್ಯೋದಯ ಯೋಜನೆಯ ಫ‌ಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಒದಗಿಸಲಾಗುತ್ತಿತ್ತು.

ಆಧಾರ್‌ ಲಿಂಕ್‌ ಮುಂದುವರಿಕೆ
ಮೊಬೈಲ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಪರ್ಕಿ ಸಲು ಅಗತ್ಯ ಕಾನೂನು ತಿದ್ದುಪಡಿಗೆ ಕೇಂದ್ರ ಸಂಪುಟ ಸೋಮವಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಕಂಪನಿಗಳು ಆಧಾರ್‌ ಬಳಕೆ ಮಾಡುವುದನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಟೆಲಿಗ್ರಾಫ್ ಕಾಯ್ದೆ ಮತ್ತು ಹಣ ದುರ್ಬಳಕೆ ತಡೆ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಆದರೆ ಲಿಂಕ್‌ ಮಾಡಿಸುವಿಕೆ ಹಿಂದಿನಂತೆಯೇ ಕಡ್ಡಾಯ ವಾಗಿ ರುವುದಿಲ್ಲ. ಬದಲಿಗೆ ಐಚ್ಛಿಕವಾಗಿಯೇ ಮುಂದುವರಿ ಯುತ್ತದೆ. ಹೊಸ ಸಿಮ್‌ ಖರೀದಿ ಮತ್ತು ಬ್ಯಾಂಕ್‌ ಖಾತೆ ತೆರೆಯುವಾಗ ಆಧಾರ್‌ ಅನ್ನು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ರೀತಿ ಗ್ರಾಹಕರು ಒದಗಿಸಬಹುದಾಗಿದೆ. ಸುಪ್ರೀಂ ತೀರ್ಪಿನಿಂದಾಗಿ ಆಧಾರ್‌ ವಿಚಾರದಲ್ಲಿ ಗೊಂದಲ ಉಂಟಾ ಗಿತ್ತು. ಅಷ್ಟೇ ಅಲ್ಲ, ಖಾಸಗಿ ಕಂಪನಿಗಳಿಗೆ ಆಧಾರ್‌ ಮಾಹಿತಿ ಯನ್ನು ಬಳಸಿಕೊಳ್ಳಲು ಕೋರ್ಟ್‌ ನಿರ್ಬಂಧಿಸಿರು ವುದರಿಂದ ಟೆಲಿಕಾಂ ಕಂಪನಿಗಳಿಗೆ ಸಮಸ್ಯೆಯನ್ನೂ ತಂದೊಡ್ಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next