Advertisement

ಜೀವನದಲ್ಲಿ ನೈತಿಕತೆ ಮುಖ್ಯ

05:11 PM Nov 10, 2020 | Suhan S |

ಕೆಜಿಎಫ್: ವಚನಕಾರರು ಹೇಳಿದಂತೆ ನಾವು ಜೀವನದಲ್ಲಿನೈತಿಕತೆಬೆಳೆಸಿಕೊಂಡರೆ ನ್ಯಾಯಾಲಯ ಮತ್ತು ಪೊಲೀಸ್‌ ಠಾಣೆಗಳಿಗೆ ಬೀಗ ಹಾಕಬೇಕಾಗುತ್ತದೆ ಎಂದು ನ್ಯಾ.ದಯಾನಂದ ವಿ.ಹಿರೇಮಠ ಹೇಳಿದರು.

Advertisement

ನಗರದ ನ್ಯಾಯಾಲಯದಲ್ಲಿ ಸೋಮ ವಾರ ಕಾನೂನು ಅರಿವು ಶಿಬಿರದಲ್ಲಿ ಮಾತನಾಡಿ, ನ್ಯಾಯಾಲಯದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂದು ಪ್ರಮಾಣ ಮಾಡುತ್ತಾರೆ. ಆದರೆ ಮೊದಲ ವಾಕ್ಯದಿಂದಲೇ ಸುಳ್ಳನ್ನು ಹೇಳಲು ಶುರು ಮಾಡುತ್ತಾರೆ. ಇಂತಹವರಿಂದ ಎಂತಹ ನೈತಿಕತೆ ನಿರೀಕ್ಷಿಸಲು ಸಾಧ್ಯ. ವಚನಕಾರರು ಹೇಳಿದಂತೆ ಕಳಬೇಡ, ಕೊಲಬೇಡ, ಹುಸಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಮುನಿಯಬೇಡ ಎಂಬ ತತ್ವವನ್ನು ನಾವೆಲ್ಲರೂ ಅನುಸರಿಸಿಕೊಂಡು ಹೋಗಬೇಕು ಎಂದರು.

ಸಂವಿಧಾನದಲ್ಲಿ ಹಲವಾರು ಕಾನೂನುಗಳನ್ನು ಜಾರಿಗೆ ತರುತ್ತಾರೆ. ಎಲ್ಲಾಕಾನೂನಿನ ತಿಳುವಳಿಕೆಯನ್ನು ನಾವು ಹೊಂದಬೇಕು ಎಂಬುವುದು ಆಶಯವಾಗಿದೆ. ಸಣ್ಣಪುಟ್ಟ ವ್ಯಾಜ್ಯಗಳಿಗೂನ್ಯಾಯಾಲಯಗಳಿಗೆ ಎಡತಾಕುವ ಕೆಲಸ ಆಗುತ್ತಿದೆ. ಕಾನೂನಿನ ಅರಿವು ಇದ್ದರೆ ಅವುಗಳನ್ನು ನ್ಯಾಯಾಲಯದ ಹೊರಗೆಯೇ ನ್ಯಾಯ ಪಡೆಯಬಹುದು ಎಂದರು.

ನ್ಯಾ.ಮಹೇಶ್‌ ಎಸ್‌.ಪಾಟೀಲ್‌ ಮಾತನಾಡಿದರು. ನ್ಯಾಯಾಧೀಶರಾದ ರೂಪಾ, ಕಿರಣ್‌, ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ನಾಗರಾಜ್‌ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಜ್ಯೋತಿಬಸು ನಿರೂಪಣೆ ಮಾಡಿದರು.

ಗ್ರಾಮಾಭಿವೃದ್ಧಿ ಯೋಜನೆಗೆ ಸರ್ಕಾರ ಸಾಥ್‌ :

Advertisement

ಮುಳಬಾಗಿಲು: ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸರ್ಕಾರವು ಕೈಜೋಡಿಸುವುದಾಗಿ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

ಸೋಮವಾರ ನಗರದ ಗ್ರಾಮಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವವರ ಉತ್ತೇಜಿಸಲು ಜ್ಞಾನತಾಣ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟ್ಯಾಪ್‌ ವಿತರಿಸಿ ಮಾತನಾಡಿದರು. ತಾಪಂ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಮಾದರಿಯಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಕೋವಿಡ್ ಸಂದರ್ಭದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟು ಮಕ್ಕಳು ತಂತ್ರಜ್ಞಾನದ ಮೂಲಕ ಶಿಕ್ಷಣ ಪಡೆಯಲು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೂಂಡಿರುವುದು ಶ್ಲಾಘನೀಯ ಎಂದರು.

ತಹಶೀಲ್ದಾರ್‌ ರಾಜಶೇಖರ್‌ ಮಾತನಾಡಿ, ತಾಲೂಕಿನಲ್ಲಿ ಬೇರೆ ಬೇರೆ ಕಾರ್ಯಕ್ರಮಗಳ ಜೊತೆಗೆಕೆರೆಯ ಹೂಳೆತ್ತುವಿಕೆಕಾರ್ಯಕ್ರಮದಿಂದ ಅಂತರ್ಜಲ ಮಟ್ಟ ಹೆಚಿಸಿc ರೈತರಿಗೆ ಉಪಯೋಗಕಾರಿಯಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿಯ‌  ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌.ಜೆ ಮಾತನಾಡಿ, ನೋವಿನ ಕುಟುಂಬಗಳನ್ನು ಅರ್ಥೈಸಿ ದುಶ cಟಕ್ಕೆ ಒಳಗಾದವರನ್ನು ಮನವೊಲಿಸಿ ಕುಟುಂಬ ಪರಿವರ್ತನೆ ಮಾಡಬೇಕೆಂದು ತಿಳಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಾಸುದೇವ್‌, ಶಿಕ್ಷಣ ಇಲಾಖೆ ಸಂಯೋಜಕ ಅಂಜನ್‌ ಕುಮಾರ್‌, ತಾಲೂಕುಕುರಿ ಮಂಡಳಿ ಅಧ್ಯಕ್ಷ ವೆಂಕಟೇಶ್‌ಗೌಡ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next