Advertisement

ನೊಂದವರಿಗೆ ಉಚಿತ ಕಾನೂನು ನೆರವು

03:11 PM Jun 04, 2019 | Team Udayavani |

ರಾಣಿಬೆನ್ನೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾನಸಿಕ ಅಥವಾ ಬೇರಾವುದೇ ಕಾರಣಕ್ಕೆ ನೂನ್ಯತೆ ಹೊಂದಿದವರು, ಮಹಿಳೆಯರು ಮತ್ತು ಮಕ್ಕಳು ಹಾಗೂ ಅನ್ಯಾಯಕ್ಕೆ ಒಳಗಾದವರು ಉಚಿತ ಕಾನೂನು ಅರಿವು ನೆರವು ಪಡೆದುಕೊಳ್ಳಲು ಅರ್ಹರಿದ್ದು, ತಾಲೂಕು ಕಾನೂನು ಸೇವಾ ಸಮಿತಿಗೆ ಮನವಿ ಮಾಡಿದಲ್ಲಿ ನೆರವು ನೀಡಲಾಗುವುದು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಬಿ.ಜಿ.ಪ್ರಮೋದ ಹೇಳಿದರು.

Advertisement

ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಸರ್ಕಾರದ ವಿವಿಧ ಇಲಾಖೆ ಸಂಯಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಸಾಕ್ಷರತಾ ರಥ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಇನ್ನೂ ಎಲ್ಲರಿಗೂ ಕಾನೂನು ಅರಿಯಲು ಸಾಧ್ಯವಾಗಿಲ್ಲದ ಕಾರಣ ಅವರಿಗೆ ಕಾನೂನು ಅರಿವು ಮತ್ತು ನೆರವು ನೀಡುವುದು ಅವಶ್ಯಕತೆ ಇದೆ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯ ಪ್ರಜೆಗಳು ಕಾನೂನು ಅರಿವು ಪಡೆದುಕೊಂಡು ಮುನ್ನಡೆಯಬೇಕು. ಸಾಕ್ಷರತಾ ರಥ ಯಾತ್ರೆ ಮೂಲಕ ತಾಲೂಕಿನ ಚಿಕ್ಕಕುರವತ್ತಿ, ಚೌಡಯ್ಯದಾನಪುರ, ಹಲಗೇರಿ, ನಿಟ್ಟೂರು, ಕುಪ್ಪೇಲೂರು, ಚಳಗೇರಿ, ಕಮದೋಡು, ಇಟಗಿ, ಮಾಗೋಡ ಸೇರಿದಂತೆ ನಗರದಲ್ಲಿ ಸಂಚರಿಸಿ ಜನರಲ್ಲಿ ಸಭೆ ಮೂಲಕ ಜಾಗೃತಿ ಮೂಡಿಸಲಾಗುವುದು. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಜೀವನ ಸಾಗಿಸಿದ್ದಲ್ಲಿ ಅಪರಾಧ ಪ್ರಕರಣಗಳು ವಿರಳವಾಗುತ್ತವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವಕೀಲ ಸಂಘದ ಅಧ್ಯಕ್ಷ ಎಂ.ಬಿ. ಚಿನ್ನಪ್ಪನವರ ಮಾತನಾಡಿ, ಒಂದು ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಎಲ್ಲರೂ ಉಚಿತ ಕಾನೂನು ಅರಿವು ಮತ್ತು ನೆರವು ಪಡೆಯಲು ಅರ್ಹರಿದ್ದು, ಕೌಟಂಬಿಕ ಹಾಗೂ ಇನ್ನಿತರ ಪ್ರಕರಣಗಳನ್ನು ರಾಜಿ ಮೂಲಕ ಉಚಿತವಾಗಿ ಇತ್ಯರ್ಥ ಪಡೆದುಕೊಳ್ಳಲು ತಾಲೂಕು ಕಾನೂನು ಸೇವಾ ಸಮಿತಿ ನೆರವು ನೀಡಲಿದ್ದು, ಇದರಲ್ಲಿ ಜನರು ಆಸಕ್ತಿ ತೋರಬೇಕಾಗಿದೆ ಎಂದು ಹೇಳಿದರು.

ಪ್ರಧಾನ ದಿವಾಣಿ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮೀತಿ ಸದಸ್ಯ ಕಾರ್ಯದರ್ಶಿ ಪಿ.ಶಿವರಾಜ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ರಾಜೇಶ ಕಮತೆ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಜೆ.ವಿ. ಕುಲಕರ್ಣಿ, 3ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಶರವಣನ್‌ ಎಸ್‌., 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಯೋಗೀಶ ಜಿ., ವಕೀಲ ಸಂಘದ ಉಪಾಧ್ಯಕ್ಷ ಎಂ.ಎನ್‌. ರೊಡ್ಡನವರ, ನ್ಯಾಯವಾದಿ ಕುಮಾರ ಯಳೆಹೊಳಿ, ಕುಮಾರ ಮಡಿವಾಳರ, ಪೌರಾಯುಕ್ತ ಡಾ| ಮಹಾಂತೇಶ .ಎನ್‌, ಸಿಡಿಪಿಒ ಶ್ರೀನಿವಾಸ ಆಲದರ್ತಿ, ಸಿದ್ದಪ್ಪ ಬಸಪ್ಪಳವರ ಇದ್ದರು.

ಸುಶೀಲಾ ಪ್ರಾರ್ಥಿಸಿದರು. ಕುಮಾರ ಯಳೆಹೊಳಿ ನಿರೂಪಿಸಿದರು. ಕುಮಾರ ಮಡಿವಾಳರ ಸ್ವಾಗತಿಸಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next