Advertisement

ಸಲಹಾ ಕೇಂದ್ರಗಳಲ್ಲಿ ಎಲ್ಲರಿಗೂ ಉಚಿತ ಕಾನೂನು ನೆರವು

04:18 PM Mar 02, 2020 | Suhan S |

ಕುಷ್ಟಗಿ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ತಾಲೂಕು ಕಾನೂನು ಸಲಹಾ ಕೇಂದ್ರವನ್ನು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧಿಧೀಶರಾದ ಬಿ.ಎಸ್‌. ಹೊನ್ನುಸ್ವಾಮಿ ಉದ್ಘಾಟಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶದನ್ವಯ ಕಾನೂನು ಸಲಹಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರಿಗೆ ನೇರವಾಗಿ ಕೋರ್ಟ್‌ಗೆ ಆಗಮಿಸುವುದಕ್ಕೆ ಭಯ ಇರುತ್ತದೆ. ಕಾನೂನು ಸಲಹೆ ಪಡೆಯಲಿಚ್ಛಿಸುವವರಿಗೆ ಅರ್ಜಿ ಅಗತ್ಯವಿಲ್ಲ. ನೇರವಾಗಿ ಕಾನೂನು ಸಲಹಾ ಕೇಂದ್ರಗಳನ್ನು ಸಂಪರ್ಕಿಸಬೇಕು. ಹೀಗಾಗಿ ಈ ಸಲಹಾ ಕೇಂದ್ರಗಳಲ್ಲಿ ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದಾಗಿದೆ.

ಅಪಘಾತದ ಪ್ರಕರಣಗಳಲ್ಲೂ ಪರಿಹಾರದ ವಿಚಾರವಾಗಿ ನೆರವು ಪಡೆಬಹುದಾಗಿದೆ. ಆರೋಪಿಗಳಿಗೆ ಕಾನೂನು ಅರಿವು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕಾನೂನು ಸಲಹಾ ಕೇಂದ್ರ ಅಂತಹವರಿಗೆ ಅರಿವು, ನೆರವು ನೀಡಲಿದೆ. ಆರೋಪಿಗಳಿಗೆ ಕಾನೂನು ನೆರವು ಪಡೆಯಲಿಚ್ಛಿಸುವವರಿಗೆ ಸೂಕ್ತ ಸಲಹೆ ನೀಡಲಿದೆ. ಈ ಸಲಹೆ ಕೇಂದ್ರಕ್ಕೆ ನ್ಯಾಯವಾದಿಯೊಬ್ಬರನ್ನು ನೇಮಿಸಲಿದೆ. ನಮ್ಮ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಕೌಟುಂಬಿಕ ದೌರ್ಜನ್ಯ ನಡೆಯದಂತೆ ತಡೆಯುವುದು ಬಹು ಮುಖ್ಯವಾಗಿದೆ. ಇತ್ತೀಚಿನ ದಿನಮಾನದಲ್ಲಿ ಕುಟುಂಬದ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ ಹೊಂದಾಣಿಕೆ ಮನೋಭಾವ ಕಡಿಮೆಯಾಗುತ್ತಿದೆ. ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಕಾನೂನಿನ ಅರಿವು ಮೂಡಿಸುವುದಾಗಿದೆ ಎಂದರು. ಹೆಚ್ಚುವರಿ ನ್ಯಾಯಾಧಿಧೀಶರಾದ ರಫೀಕ್‌ ಅಹ್ಮದ್‌, ಸಿಪಿಐ ಜಿ. ಚಂದ್ರಶೇಖರ, ಕೋರ್ಟ್‌ ಪಿಸಿ ಮಂಜುನಾಥ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next