ತುಮಕೂರು: ಸರ್ಕಾರವು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನ ಸಾಮಾನ್ಯರ ಆರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ತುರ್ತು ವೈದ್ಯಕೀಯ ಸೇವೆ ಒದಗಿಸಲು ಜಿಲ್ಲೆಯಲ್ಲಿ ಟೆಲಿಮೆಡಿಸನ್ ಸೇವೆಯನ್ನು ಜಾರಿಗೊಳಿಸಿದೆ.
ಕೋವಿಡ್ ಸೋಂಕು ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ರೋಗಿಗಳುವೈದ್ಯಕೀಯ ಸಲಹೆಅಥವಾಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಲು ಭಯಭೀತರಾಗಿರುವುದನ್ನು ಮನಗಂಡಸರ್ಕಾರವು ರೋಗಿಗಳಿಗೆ ಈ ಸೇವೆ ಯನ್ನು ಉಚಿತವಾಗಿ ನೀಡಲು ಮುಂದಾಗಿದೆ.
ಏನಿದು ಟೆಲಿ ಮೆಡಿಸನ್ ಸೇವೆ: ಜಿಲ್ಲೆ ಯಲ್ಲಿರುವ ಸಾರ್ವಜನಿಕರು, ಹೊರರೋಗಿಗಳ ವಿಭಾಗಕ್ಕೆಬರುವ ಸಾಮಾನ್ಯ ಕಾಯಿಲೆಗಳಿಗೆ ಕೇಂದ್ರ ಸರ್ಕಾರದ ಇ-ಸಂಜೀವಿನಿ ಕಾರ್ಯಕ್ರಮದಡಿ ಮನೆಯ ಲ್ಲಿಯೇ ಕುಳಿತು ತಮ್ಮ ಅಂತರ್ಜಾಲಸಂಪರ್ಕ ಹೊಂದಿರುವ ಮೊಬೈಲ್,ಕಂಪ್ಯೂಟರ್ ಬಳಸಿ ಜಾಲತಾಣ e-sanjeevaniopd.in ಮೂಲಕ ನೋಂದಾ ಯಿಸಿಕೊಂಡು ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಉಚಿತವಾಗಿ ವೈದ್ಯಕೀಯ ಸಲಹೆ ಮತ್ತು ಸೇವೆಗಳನ್ನು ಪಡೆಯಬಹುದಾಗಿದೆ.
ವೀಡಿಯೋ ಕಾಲ್ ಮೂಲಕ ಸಲಹೆ: ಸಂದರ್ಶನದಲ್ಲಿ ಲಭ್ಯವಿರುವ ತಜ್ಞ ವೈದ್ಯರು ವೀಡಿಯೋ ಕಾಲ್ ಮೂಲಕ ರೋಗಿಯ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಸೂಕ್ತ ಚಿಕಿತ್ಸೆ ಸೂಚಿಸುವರು.ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈಸೇವೆಯು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 1-45ರಿಂದ ಸಂಜೆ4-30 ಗಂಟೆ ರವರೆಗೆ ಲಭ್ಯವಿದ್ದು, ಜನಸಾಮಾನ್ಯರು ಈ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಮೆಡಿಸಿನ್, ಮಕ್ಕಳ ರೋಗ ತಜ್ಞರು, ಪ್ರಸೂತಿ ಸ್ರ್ತೀರೋಗ ತಜ್ಞರು ಸೇರಿದಂತೆ ಸುಮಾರು 20 ತಜ್ಞ ವೈದ್ಯರು ಇ- ಸಂಜೀವಿನಿಕಾರ್ಯಕ್ರಮಕ್ಕೆನೋಂದಾಯಿಸಿಕೊಂಡಿದ್ದಾರೆ.
ಉಚಿತ ವೈದ್ಯಕೀಯ ಸಲಹೆ: ಜಿಲ್ಲಾ ಸ್ಪತ್ರೆಯ ಫಿಜಿಷಿಯನ್ ಡಾ. ಮಂಜುನಾಥ್ ಗುಪ್ತ ಅವರು ಟೆಲಿಮೆಡಿಸನ್ ಸೇವೆಯಡಿ ನೋಂದಾಯಿಸಿಕೊಂಡಸುಮಾರು 25 ಮಂದಿ ರೋಗಿಗಳಿಗೆ ಉಚಿತ ವೈದ್ಯಕೀಯ ಸಲಹೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದರು.