Advertisement

ಶಿವಯೋಗ ಮಂದಿರದಲ್ಲಿ ಉಚಿತ ಗುರುಕುಲ ಶಿಕ್ಷಣ

11:12 PM Feb 15, 2020 | Lakshmi GovindaRaj |

ಬಾದಾಮಿ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ 2022-23ನೇ ಸಾಲಿನಿಂದ 6ರಿಂದ 10ನೇ ತರಗತಿಯವರೆಗೆ ಉಚಿತ ಗುರುಕುಲ ಶಾಲೆ ಆರಂಭಿಸಲಾಗುವುದು ಎಂದು ಶ್ರೀಮದ್ವೀರಶೈವ ಶಿವ ಯೋಗಮಂದಿರ ಸಂಸ್ಥೆಯ ಅಧ್ಯಕ್ಷ ಡಾ| ಸಂಗನಬಸವ ಮಹಾ ಸ್ವಾಮಿಗಳು ಹೇಳಿದರು.

Advertisement

ಹಾನಗಲ್‌ ಕುಮಾರ ಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರವೇಶಿಸಲು ಅನುಕೂಲ ವಾಗುವಂತೆ ಉಚಿತ ಶಿಕ್ಷಣ ನೀಡಲಾಗುವುದು. ಇದಕ್ಕಾಗಿ ಪ್ರವೇಶ ಪರೀಕ್ಷೆ ನಡೆಯಲಿದೆ. ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next