Advertisement

ಉಚಿತವಾಗಿ ಉಜ್ವಲ ಗ್ಯಾಸ್‌ ಸಿಲಿಂಡರ್‌ ವಿತರಣೆ

04:18 PM Mar 31, 2020 | Suhan S |

ಮಾಗಡಿ: ಉಜ್ವಲ ಗ್ಯಾಸ್‌ ಸಿಲಿಂಡರ್‌ ಉಚಿತವಾಗಿ ನೀಡಲಿದ್ದು ಅದನ್ನು ಸಮರ್ಪಕವಾಗಿ ಫ‌ಲಾನುಭವಿ ಗಳೇ ಬಳಸಿಕೊಳ್ಳಬೇಕು. ದುರ್ಬಳಕೆಗೆ ಅವಕಾಶವಿಲ್ಲ ಎಂದು ಭಾರತ್‌ ಗ್ಯಾಸ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ರಾಧಾ ಬಾಲಕೃಷ್ಣ ತಿಳಿಸಿದರು.

Advertisement

ಪಟ್ಟಣದಲ್ಲಿ ಭಾರತ್‌ ಗ್ಯಾಸ್‌ ವಿತರಣೆ ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟಸರ್‌ ವಿತರಿಸಿ ಮಾತನಾಡಿ, ಕೇಂದ್ರ ಸರ್ಕಾರ ಉಜ್ವಲ ಗ್ಯಾಸ್‌ ಫ‌ಲಾನುಭವಿಗಳಿಗೆ ಉಚಿತವಾಗಿ ಸಿಲಿಂಡರ್‌ ವಿತರಿಸುವಂತೆ ಆದೇಶ ನೀಡಿದೆ. ಅದರಂತೆ ಫ‌ಲಾನುಭವಿಗಳಿಗೆ ಏಜೆನ್ಸಿ ಯಿಂದ ಸಿಲಿಂಡರ್‌ ನೀಡಲಾಗುವುದು. ಫ‌ಲಾನುಭವಿಗಳು ಪಡೆದ ಸಿಲಿಂಡರ್‌ ಸ್ಟೋವ್‌ಗೆ ಜೋಡಿಸುವ ಮುನ್ನಾ ಸೋಪಿನಿಂದ ತೊಳೆದುಕೊಳ್ಳಬೇಕು. ಗ್ಯಾಸ್‌ ಖಾಲಿಯಾದ ನಂತರ ಮತ್ತೆ ಸೋಪಿನಿಂದ ತೊಳೆದು ವಾಪಸ್‌ಆ ಮಾಡಬೇಕು. ಕೋವಿಡ್ 19 ಹರಡದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಸೂಚನೆ ನೀಡಿದರು.

ನಮ್ಮ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ, ಸಿಬ್ಬಂದಿಗೆ ಗ್ಯಾಸ್‌ ಸಿಲಿಂಡರ್‌ ವಿತರಕರಿಗೆ ಮುಂಜಾಗ್ರತೆ ಕ್ರಮ ಅನುಸರಿಸುವಂತೆ ಈಗಾಗಲೇ ತಿಳಿವಳಿಕೆ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು. ಜ್ವರ, ಕೆಮ್ಮು, ದಮ್ಮು, ನೆಗಡಿ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ನಿರ್ಲಕ್ಷಿಸದೇ ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅನವಶ್ಯಕ ಹೊರಗಡೆ ಬರಬೇಡಿ, ಮನೆಯಲ್ಲೇ ಇದ್ದ, ಕೋವಿಡ್ 19 ನಿರ್ಮೂಲನೆಗೆ ಸರ್ಕಾರ ದೊಂದಿಗೆ ಕೈಜೋಡಿಸುವಂತೆ ತಿಳಿಸಿದರು. ಭಾರತ್‌ ಗ್ಯಾಸ್‌ ಏಜೆನ್ಸಿಯ ವ್ಯವಸ್ಥಾಪಕ ನಿರ್ದೇಶಕಿ ರಾಧಾ ಬಾಲಕೃಷ್ಣ ಅವರು ಗ್ಯಾಸ್‌ ಏಜೆನ್ಸಿ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next