Advertisement

ಎಲ್ಲ ಯೋಧರಿಗೂ ಇನ್ನು ಉಚಿತ ಆಹಾರ

12:50 AM Jun 19, 2019 | Team Udayavani |

ನವದೆಹಲಿ: ಎಲ್ಲ ಸೈನಿಕರಿಗೂ ಉಚಿತ ಆಹಾರ ಒದಗಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ. ಈ ಹಿಂದೆ ಶಾಂತ ಪ್ರದೇಶದಲ್ಲಿ ನಿಯೋಜನೆ ಗೊಂಡ ಸೇನಾ ಸಿಬ್ಬಂದಿಗೆ ಉಚಿತ ಆಹಾರ ನೀಡು ವುದರ ಬದಲಿಗೆ ದಿನಕ್ಕೆ 117 ರೂ. ಭತ್ಯೆ ನೀಡಲಾಗು ತ್ತಿತ್ತು. ಏಳನೇ ವೇತನ ಆಯೋಗದ ವರದಿ ಜಾರಿ ವೇಳೆ ಮಾಡಿದ ಈ ಬದಲಾವಣೆಗೆ ಸೇನಾ ವಲಯ ದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. 2017ರಲ್ಲಿ ಕೇಂದ್ರ ಸರ್ಕಾರ ಈ ಬದಲಾವಣೆ ತಂದಿತ್ತು. ಆದರೆ ಈಗ, ರಕ್ಷಣಾ ಸಚಿವಾಲಯದ ಪ್ರಕಟಣೆ ಮೂಲಕ ಹಳೆಯ ವ್ಯವಸ್ಥೆಯನ್ನು ಮರು ಜಾರಿಗೊಳಿಸಲಾಗಿದೆ. ಗಡಿ ಪ್ರದೇಶ ಹಾಗೂ ಇತರೆಡೆ ನಿಯೋಜಿಸಿರುವ ಯೋಧರಿಗೆ ಕ್ಯಾಲರಿ ಆಧಾರದಲ್ಲಿ ಆಹಾರ ನೀಡಲಾಗುತ್ತದೆ. ಇದನ್ನೇ ಹೊಸ ನಿಯಮದಲ್ಲೂ ಮುಂದುವರಿಸಲಾಗುತ್ತದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next