Advertisement

ಫ್ರೀ ಫ್ಲೋ ಏರ್‌ ಫಿಲ್ಟರ್‌

10:32 PM Jul 18, 2019 | mahesh |

ಎಲ್ಲ ವಾಹನಗಳಲ್ಲೂ ಏರ್‌ ಫಿಲ್ಟರ್‌ ಎಂಬ ಒಂದು ಸಾಧನವಿದೆ. ಇದು ಹೊರಗಿನ ಗಾಳಿಯನ್ನು ಫಿಲ್ಟರ್‌ ಮಾಡಿ ಇಂಧನ ದಹನಕ್ಕೆ ಸೂಕ್ತವಾದ ಗಾಳಿಯನ್ನು ಒದಗಿಸಿಕೊಡುತ್ತದೆ. ಈ ಏರ್‌ ಫಿಲ್ಟರ್‌ನಲ್ಲಿ ಸಾಮಾನ್ಯ ಮತ್ತು ಫ್ರೀ ಫ್ಲೋ ಏರ್‌ ಫಿಲ್ಟರ್‌ ಎಂಬ ವಿಧಗಳಿವೆ.

Advertisement

ಏರ್‌ ಫಿಲ್ಟರ್‌ ಹೇಗಿರುತ್ತದೆ?
ಏರ್‌ಫಿಲ್ಟರ್‌ಗಳಲ್ಲಿ ವಿವಿಧ ಆಕಾರ, ಗಾತ್ರ, ಮಾದರಿಗಳಿಗನುಗುಣವಾಗಿ ಭಿನ್ನವಾಗಿವೆ. ಪೇಪರ್‌, ಹತ್ತಿ, ಫೋಮ್‌, ಹೊರಭಾಗದಲ್ಲಿ ಜಾಲರಿಗಳನ್ನು ಬಳಸಿ ತಯಾರು ಮಾಡಲಾಗುತ್ತದೆ. ಇಂಧನ ದಹನದ ವೇಳೆ ಯಾವುದೇ ಕಣಗಳು ಹೋಗದೆ ಶುದ್ಧ ಗಾಳಿ ಹೋಗುವುದಷ್ಟಕ್ಕೇ ಇದು ಪೂರಕವಾಗಿ ವರ್ತಿಸುತ್ತವೆ.

ಸಾಮಾನ್ಯ ಏರ್‌ಫಿಲ್ಟರ್‌ಗಳು
ಸಾಮಾನ್ಯ ಏರ್‌ಫಿಲ್ಟರ್‌ಗಳಲ್ಲಿ ಫಿಲ್ಟಿಂಗ್‌ಗೆ ಸಾಕಷ್ಟು ವ್ಯವಸ್ಥೆ ಇದ್ದರೂ, ಗಾಳಿಯಲ್ಲಿರುವ ಅತಿ ಸೂಕ್ಷ್ಮ ಕಣಗಳನ್ನು ಅದು ತಡೆಯುವುದಿಲ್ಲ. ಇದರಿಂದ ಏಕಾಏಕಿ ಅಕ್ಸಲರೇಟರ್‌ ವೇಳೆ ಜರ್ಕ್‌ ಸಿಕ್ಕಂತೆ ಅಥವಾ ಟಾಪ್‌ಎಂಡ್‌ ಸ್ಪೀಡ್‌ನ‌ಲ್ಲಿ ಎಂಜಿಗೆ ಪವರ್‌ ಸಿಗದ ರೀತಿ ಭಾಸವಾಗಬಹುದು.

ಹೈ ಏರ್‌ ಫ್ಲೋ ಫಿಲ್ಟರ್‌
ನಿಮ್ಮ ಬಳಿ ಸಾಮಾನ್ಯ ಬೈಕಿದೆ, ಟ್ರಾಫಿಕ್‌ನಲ್ಲಿ ನಿಂತಿದ್ದೀರಿ ಎಂದಿಟ್ಟುಕೊಳ್ಳಿ. ಇದೇ ವೇಳೆ ಅದೇ ರೀತಿಯ ಬೈಕ್‌ ನಿಮ್ಮ ಬಳಿ ಬಂದು ನಿಲ್ಲುತ್ತದೆ. ಸಿಗ್ನಲ್‌ ಓಪನ್‌ ಆಗುತ್ತಿದ್ದಂತೆ ಆ ಸವಾರನ ಬೈಕ್‌ ಹೂಂಕರಿಸಿಕೊಂಡು ಮುನ್ನುಗ್ಗುತ್ತದೆ. ಆ ಬೈಕ್‌ ಮತ್ತು ನಿಮ್ಮ ಬೈಕ್‌ ಒಂದೇ ಕಂಪನಿಯದ್ದಾದರೂ ನಿಮ್ಮ ಬೈಕ್‌ ಅಷ್ಟೊಂದು ಸಾಮರ್ಥ್ಯ ಪ್ರದರ್ಶಿಸಲಾರದು! ಇದಕ್ಕೆ ಒಂದು ಪ್ರಮುಖ ಕಾರಣ ಏರ್‌ಫಿಲ್ಟರ್‌ ಕರಾಮತ್ತು! ಅದೇ ಹೈ ಏರ್‌ ಫ್ಲೋ ಫಿಲ್ಟರ್‌.

ಸಮಸ್ಯೆಗಳು
ಇದನ್ನು ಕೆ ಆ್ಯಂಡ್‌ ಎನ್‌, ಎಸ್‌ ಆ್ಯಂಡ್‌ ಎಸ್‌, ಟಿಬಿಆರ್‌ ಇತ್ಯಾದಿ ಕಂಪೆನಿಗಳು ತಯಾರಿಸುತ್ತವೆ. ಕಡಿಮೆ ಗುಣಮಟ್ಟದ ಹೈ ಏರ್‌ ಫ್ಲೋ ಫಿಲ್ಟರ್‌ಗಳನ್ನು ಅಳವಡಿಸಿದರೆ, ಅದರ ನೇರ ಪರಿಣಾಮ ಎಂಜಿನ್‌ ಮೇಲಾಗುತ್ತದೆ. ಹೆಚ್ಚು ಧೂಳಿನ ಕಣಗಳು ಒಳಗಡೆ ಹೋಗಿ, ದಹನ ವ್ಯವಸ್ಥೆಗೆ ಹಾನಿಯಾಗುತ್ತದೆ. ನಿರ್ದಿಷ್ಟ ಫಿಲ್ಟರ್‌ ಕ್ಲೀನಿಂಗ್‌ ಸ್ಪ್ರೆ ಮುಖಾಂತರ ಶುಚಿಗೊಳಿಸಿದರಷ್ಟೇ ಪ್ರಯೋಜನ ಮತ್ತು ಬಾಳಿಕೆ ಬರುತ್ತದೆ. ಎಂಜಿನ್‌ ಸಾಮರ್ಥ್ಯ ಅತಿ ಹೆಚ್ಚಿರಬೇಕೆನ್ನುವ ಆಸೆಯಿದ್ದವರು ಇಂತಹ ಫಿಲ್ಟರ್‌ ಉಪಯೋಗಿಸುತ್ತಾರೆ.

Advertisement

ಏನು ಪ್ರಯೋಜನ?
ಹೈ ಏರ್‌ ಫ್ಲೋ ಫಿಲ್ಟರ್‌ನ ಪ್ರಯೋಜನವೆಂದರೆ ಅದರ ಸಾಮರ್ಥ್ಯ ವೃದ್ಧಿ. ಸಾಮಾನ್ಯ ಫಿಲ್ಟರ್‌ ಎಷ್ಟು ಪ್ರಮಾಣದಲ್ಲಿ ಗಾಳಿಯನ್ನು ಎಂಜಿನ್‌ ಒಳಗೆಳೆದುಕೊಳ್ಳಲು ಅನುವು ಮಾಡುತ್ತದೋ, ಅದರ ದುಪ್ಪಟ್ಟು ಪ್ರಮಾಣದಲ್ಲಿ ಗಾಳಿ ಒಳಗೆಳೆದುಕೊಳ್ಳಲು ಹೈ ಏರ್‌ ಫ್ಲೋ ಫಿಲ್ಟರ್‌ಗಳು ಅನುವು ಮಾಡುತ್ತವೆ. ಹೆಚ್ಚು ಗಾಳಿ ದಹಿಸುವಂತೆ ಮಾಡುತ್ತವೆ. ಇದರಿಂದ ಎಂಜಿನ್‌ ಒಳಗೆ ಉತ್ತಮ ದಹನಾನುಕೂಲಿ ವಾತಾವರಣ ನಿರ್ಮಾಣವಾಗುತ್ತದೆ. ವಾಹನದ ಶಕ್ತಿ ಗರಿಷ್ಠ ಸಾಮರ್ಥ್ಯಕ್ಕೇರುತ್ತದೆ. ಜತೆಗೆ ಟಾರ್ಕ್‌ ವೃದ್ಧಿಯಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಇಂಧನ ದಕ್ಷತೆಯೂ ಸುಧಾರಣೆಯಾಗುತ್ತದೆ. ಸಾಮಾನ್ಯ ಏರ್‌ಫಿಲ್ಟರ್‌ಗಳಿಗಿಂತ ಹೆಚ್ಚು ಸಮಯ ಬಾಳಿಕೆ ಬರುತ್ತದೆ. ವರ್ಷಕ್ಕೂ ಹೆಚ್ಚು ಸಮಯ ಬಳಕೆ ಮಾಡಿದರೂ ಹೊಸದರಂತೆ ಇರುವುದು.

ಈಶ

Advertisement

Udayavani is now on Telegram. Click here to join our channel and stay updated with the latest news.

Next