Advertisement

ಪುನೀತ್ ಸ್ಮರಣಾರ್ಥ 6ಜನ ವೃದ್ದರಿಗೆ ಉಚಿತ ನೇತ್ರ ಚಿಕಿತ್ಸೆ

02:20 PM Dec 04, 2021 | Team Udayavani |

ಕುಷ್ಟಗಿ: ನಟ, ನೇತ್ರದಾನಿ ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಆರ್ಥಿಕವಾಗಿ ಅಸಹಾಯಕ ಆರು ಜನ ವಯೋವೃದ್ದರಿಗೆ ಉಚಿತ ನೇತ್ರ ಚಿಕಿತ್ಸೆ ಮಾಡಲಾಯಿತು.

Advertisement

ಕುಷ್ಟಗಿ ಇನ್ನರ್ ವ್ಹೀಲ್ ಕ್ಲಬ್, ಶ್ರೀ ರಾಘವೇಂದ್ರ ನೇತ್ರ ಸೇವಾ ಕೇಂದ್ರ ಚಾರಿಟಬಲ್ ಟ್ರಸ್ಟ್, ಡಾ. ಸುಬಾಸ್ ಕಾಖಂಡಕಿ ನೇತ್ರಾಲಯ ಹಾಗೂ ಇಲಕಲ್ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸೆ ನಡೆಯಿತು. ಇನ್ನರ್ ವ್ಹೀಲ್ ಕ್ಲಬ್ ನ ಸದಸ್ಯರು ನೀಡಿದ 25 ಸಾವಿರ ರೂ. ಮೊತ್ತದಲ್ಲಿ ಇಲಕಲ್ ಅಮ್ಮ ಸೇವಾಶ್ರಮದ ಮೂವರು ಹಾಗೂ ಇಲಕಲ್ ಮೂಲದ ಮೂವರು ವಯೋವೃದ್ದರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೇ ವೇಳೆ 25 ಸಾವಿರ ರೂ. ಚಕ್ ನ್ನು ಡಾ.ಸುಶೀಲೇಂದ್ರ ಅವರಿಗೆ ಹಸ್ತಾಂತರಿಸಲಾಯಿತು.

ಈ ವೇಳೆ ನೇತ್ರ ತಜ್ಞ ಡಾ.ಸುಶೀಲೇಂದ್ರ ಕಾಖಂಡಕಿ, ಇನ್ನರ್ ವ್ಹೀಲ್ ಕ್ಲಬ್  ಅಧ್ಯಕ್ಷೆ ಶಾರದಾ ಶೆಟ್ಟರ್, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಮೋದ ಹಂಚಾಟೆ, ರಾಜೇಂದ್ರ ಜುಂಜಾ, ಲತಾ ಕುರ್ಮಾಚಾರ, ಇನ್ನರ್ ವ್ಹೀಲ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಡಾ.ಪಾರ್ವತಿ, ಮೇಘಾ ದೇಸಾಯಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next