ಬೆಂಗಳೂರು: ನೇತ್ರ ಆರೈಕೆ-ಆಶಾ ಕಿರಣ ಯೋಜನೆಯಡಿ ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯದ ಎಲ್ಲ ಜನರಿಗೂ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸೆ ನಡೆಸುವ ಚಿಂತನೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸಾರಿಗೆ ಇಲಾಖೆ ಸಿಬಂದಿಗೆ ನೇತ್ರ ತಪಾಸಣೆ ಮಾಡಲು ಸಿ-ಕ್ಯಾಂಪ್ ಮತ್ತು ಆಕ್ಟ್ ಫಾರ್ ಹೆಲ್ತ್ ಸಂಸ್ಥೆ ಗಳೊಂದಿಗೆ ಪರಸ್ಪರ ತಿಳಿವಳಿಕೆ ಪತ್ರ ವಿನಿಮಯ ಮಾಡಿಕೊಂಡ ಸಾರಿಗೆ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕ್ರಮದ ಬಳಿಕ ಈ ವಿಷಯ ತಿಳಿಸಿದರು.
ಪ್ರಸ್ತುತ 8 ಜಿಲ್ಲೆಗಳಲ್ಲಿ ಸಮಗ್ರ ನೇತ್ರ ಆರೈಕೆ-ಆಶಾ ಕಿರಣ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಹಾವೇರಿ, ಚಿಕ್ಕಬಳ್ಳಾಪುರ, ಕಲಬುರಗಿ ಮತ್ತು ಚಾಮರಾಜನಗರ ಜಿಲ್ಲೆಗಳ 57 ಲಕ್ಷ ಜನರಿಗೆ ನೇತ್ರ ತಪಾಸಣೆ ಮಾಡಲಾಗಿದೆ. ಈ ಪೈಕಿ 1.75 ಲಕ್ಷ ಜನರಿಗೆ ಉಚಿತ ಕನ್ನಡಕ ನೀಡ ಲಾಗಿದ್ದು, ಚಿತ್ರದುರ್ಗ, ಮಂಡ್ಯ, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೂ ನೇತ್ರ ತಪಾ ಸಣೆ ಪ್ರಗತಿಯಲ್ಲಿದೆ ಎಂದರು.
ಅಗತ್ಯ ಇರುವವರಿಗೆ ಉಚಿತ ಕನ್ನಡ ವಿತರಣೆ ಮತ್ತು ಶಸ್ತ್ರಚಿಕಿತ್ಸೆ ಮಾಡ ಲಾಗುವುದು. ಮುಂದೆ ಎಲ್ಲ ಜಿಲ್ಲೆಗಳಿಗೂ ಇದನ್ನು ವಿಸ್ತರಿಸ ಲಾಗುವುದು ಎಂದರು.
ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಾರಿಗೆ ಇಲಾಖೆಯಲ್ಲಿ 1.10 ಲಕ್ಷ ಸಿಬಂದಿ ಇದ್ದು, ಎಲ್ಲರಿಗೂ ಉಚಿತವಾಗಿ ನೇತ್ರ ತಪಾಸಣೆ ನಡೆಸುತ್ತಿರುವುದು ಶ್ಲಾಘನೀಯ. ಅದಕ್ಕಾಗಿ ಆರೋಗ್ಯ ಇಲಾಖೆಗೆ ಸಾರಿಗೆ ಇಲಾಖೆಯಿಂದ ಬೇಕಾಗುವ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದರು.