Advertisement

ಬಿ.ಪಿ.ಎಲ್‌. ಕುಟುಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ

10:58 PM Jan 26, 2021 | Team Udayavani |

ಕಾಸರಗೋಡು: ವಿದ್ಯುತ್‌ ವಲಯದಲ್ಲಿ ಬೃಹತ್‌ ಮುನ್ನಡೆಗೆ ಹಾದಿ ತೆರೆಯುವ ಮೂಲಕ ಅನೇಕ ಯೋಜನೆಗಳನ್ನು ವಿದ್ಯುತ್‌ ಇಲಾಖೆ 5 ವರ್ಷಗಳ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ ಸೌರಶಕ್ತಿ ಯೋಜನೆಗಳು ನನಸಾಗುತ್ತಿರುವುದರ ಜತೆಗೆ ಸದ್ರಿ ಜಾರಿಯಲ್ಲಿರುವ ಅನೇಕ ಯೋಜನೆಗಳನ್ನು ಸುಧಾರಿತಗೊಳಿಸಿ ಜನತೆಗೆ ಸೇವೆಗಳನ್ನು ತ್ವರಿತ ಮತ್ತು ಪರಿಣಮಕಾರಿಯಾಗಿ ಒದಗಿಸಲು ಕೆ.ಎಸ್‌. ಇ.ಬಿ.ಗೆ ಸಾಧ್ಯವಾಗಿದೆ.

5 ವರ್ಷಗಳ ಅವಧಿಯಲ್ಲಿ ಜಿಲ್ಲೆಯ 4,900 ಬಿ.ಪಿ.ಎಲ್‌. ಕುಟಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ ಒದಗಿಸಲಾಗಿದೆ. ಫಿಲಮೆಂಟ್‌ ರಹಿತ ಕೇರಳ ಯೋಜನೆಯ ಮೊದಲ ಹಂತವಾಗಿ 3,91,700 ಎಲ್‌.ಇ.ಡಿ.ದೀಪಗಳನ್ನು ಗ್ರಾಹಕರ ಕೈಗೆ ತಲಪಿಸಲು ಸಾಧ್ಯವಾಗಿದೆ. ನಿಲಾವ್‌ (ಬೆಳದಿಂಗಳು) ಯೋಜನೆ ಪ್ರಕಾರ ಕಾಸರಗೋಡು ಜಿಲ್ಲೆಯ ಬೀದಿ ದೀಪಗಳನ್ನು ಎಲ್‌.ಇ.ಡಿ. ಬೆಳಕಾಗಿ ಮಾರ್ಪಡಿಸಲಾಗಿದೆ. ಸೌರ ಯೋಜನೆ ಅಂಗವಾಗಿ ಪೈವಳಿಕೆಯಲ್ಲಿ 50 ಮೆಗಾ ವಾಟ್‌ ಸೋಲಾರ್‌ ಒವರ್‌ ಪ್ಲಾಂಟ್‌ ಸಿದ್ಧಗೊಂಡಿರುವ ಜತೆಯಲ್ಲೇ ಪುರಪ್ಪುರ ಸೋಲಾರ್‌ ಯೋಜನೆ ಪ್ರಗತಿಯಲ್ಲಿದೆ. ಕೋವಿಡ್‌ ಸೋಂಕಿನ ಅವಧಿಯಲ್ಲೂ ವಿದ್ಯುತ್‌ ಸೇವೆ ಮೊಟಕುಗೊಳ್ಳದೆ, ವಿದ್ಯುತ್‌ ಶುಲ್ಕ ಪಾವತಿ ಸಹಿತ ಎಲ್ಲ ಸೇವೆಗಳನ್ನೂ ಆನ್‌ಲೈನ್‌ ಆಗಿಸಲಾಗಿದೆ.

4 ಉಪ ಕೇಂದ್ರಗಳು,  1 ವಿಭಾಗೀಯ ಕಚೇರಿ :

5 ವರ್ಷದ ಅವಧಿಯಲ್ಲಿ ಕಾಸರಗೊಡು ಜಿಲ್ಲೆಯಲ್ಲಿ 4 ಸಬ್‌ ಸ್ಟೇಷನ್‌ಗಳನ್ನು ನಿರ್ಮಿ ಸಲಾಗಿದೆ. ಅಂಬಲತ್ತರ ವೆಳ್ಳುಡದಲ್ಲಿ ಸೋಲಾರ್‌ ಪಾರ್ಕ್‌ನಿಂದ ವಿದ್ಯುತ್‌ ವಿತರಣೆ ನಿಟ್ಟಿನಲ್ಲಿ ಅಂಬಲತ್ತರದಲ್ಲಿ 220/ 33 ಕೆ.ವಿ.ಸಬ್‌ ಸ್ಟೇಷನ್‌ ಸ್ಥಾಪಿಸಲಾಗಿದೆ.

Advertisement

ಮಲೆನಾಡ ಪ್ರದೇಶಗಳ ವೋಲ್ಟೇಜಜ್ ಕ್ಷಾಮ ಮತ್ತು ಸತತ ವಿದ್ಯುತ್‌ ಮೊಟಕು ಸಮಸ್ಯೆಗಳಿಗೆ ಪರಿಹಾರವಾಗಿದೆ. 12.7 ಕೋಟಿ ರೂ. ವೆಚ್ಚದಲ್ಲಿ ರಾಜಪುರಂನಲ್ಲಿ 33 ಕೆ.ವಿ. ಸಬ್‌ ಸ್ಟೇಷನ್‌ ಮೂಲಕ ಸುಮಾರು 30 ಸಾವಿರ ಬಳಕೆದಾರರಿಗೆ ಪ್ರಯೋಜನ ಲಭಿಸಿದೆ. 6 ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡು ಪೇಟೆ 33 ಕೆ.ವಿ. ಸಬ್‌ ಸ್ಟೇಷನ್‌, ಕಾಂಞಂಗಾಡ್‌ 33 ಕೆ.ವಿ. ಸಬ್‌ ಸ್ಟೇಷನ್‌ ಜಿಲ್ಲೆಯ ವಿದ್ಯುತ್‌ ಇಲಾಖೆಗೆ ಗರಿಮೆಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next