Advertisement

ಉಚಿತ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ

09:20 PM Apr 30, 2019 | Team Udayavani |

ಸಂತೆಮರಹಳ್ಳಿ: ದೇಶದಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದು ದಶಕ ಕಳೆದರೂ ಇದು ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಸಿವಿಲ್‌ ನ್ಯಾಯಾಧೀಶ ಎನ್‌.ಶರತ್‌ಚಂದ್ರ ಹೇಳಿದರು.

Advertisement

ಯಳಂದೂರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದಿಂದ ಕಾನೂನು ಅರಿವು ನೆರವು ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಮಾತನಾಡಿದರು.

ಭಾರತ ದೇಶದಲ್ಲಿ ಉಚಿತವಾಗಿ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಇದಕ್ಕೆ ವಿಶ್ವಬ್ಯಾಂಕಿನ ಕಾರ್ಲ್ಸನ್‌ ಅವರೂ ಕೂಡ ಇದನ್ನು ಶ್ಲಾ ಸಿದ್ದಾರೆ. ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಕೇವಲ ಸರ್ಕಾರಿ ಹುದ್ದೆಗೆ ಶಿಕ್ಷಣ ಮೀಸಲಲ್ಲ.

ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮಾನದಂಡವಾಗಿದೆ. ಆದರೂ ಕೂಡ ಇನ್ನೂ ಅನೇಕ ಮಕ್ಕಳು ಶಾಲೆಯಿಂದ ಹಿಂದುಳಿದಿದ್ದಾರೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಪೋಷಕರೂ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಅಧಿಕಾರಿ ಮಹೇಶ್‌ ಮಾತನಾಡಿ, 2009ರಲ್ಲಿ ಸಂವಿಧಾನದ 86ನೇ ತಿದ್ದುಪಡಿ ಮೂಲಕ ಕಡ್ಡಾಯ ಶಿಕ್ಷಣ ನೀತಿ ದೇಶದಲ್ಲಿ ಜಾರಿಯಾಯಿತು. ನಮ್ಮ ರಾಜ್ಯದಲ್ಲಿ 2012ರ ಏಪ್ರಿಲ್‌ ತಿಂಗಳಿನಿಂದ ಈ ನೀತಿ ಅಳವಡಿಸಿಕೊಳ್ಳಲಾಯಿತು ಎಂದರು.

Advertisement

ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಿದೆ. ಇದಕ್ಕಾಗಿ ಸರ್ಕಾರ ಸುಸಜ್ಜಿತ ಶಾಲೆ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಬ್ಯಾಗ್‌, ಸಮವಸ್ತ್ರ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದರೊಂದಿಗೆ ಆರ್‌ಟಿಇ ಕಾಯ್ದೆಯ ಮೂಲಕ ಖಾಸಗಿ ಶಾಲೆಗಳಲ್ಲೂ ಶೇ.25 ರಷ್ಟು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಇಷ್ಟಿದ್ದರೂ ಯಳಂದೂರು ತಾಲೂಕಿನಲ್ಲಿ 29 ಮಕ್ಕಳು ಶಾಲೆಯಿಂದ ಇನ್ನೂ ಕೂಡ ಹೊರಗುಳಿದಿದ್ದಾರೆ. ಇವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವಲ್ಲಿ ಇಲಾಖೆ ಶ್ರಮ ಪಡುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಇರುವ ಇಂತಹ ಅಮೂಲ್ಯವಾದ ಕಾಯ್ದೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಕೀಲ ಸಂಘದ ಅಧ್ಯಕ್ಷ ಕೆ.ಬಿ. ಶಶಿಧರ್‌, ಉಪಾಧ್ಯಕ್ಷ ಕಾಂತರಾಜು, ವಕೀಲರಾದ ಎಂ.ಮಾದೇಶ್‌, ಜಯಶಂಕರ್‌, ಶ್ರೀನಿವಾಸ್‌, ಹರಿಶ್ಚಂದ್ರ, ರಂಗಸ್ವಾಮಿ, ಗುರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next