Advertisement

ಕೋವಿಡ್ ಹಿನ್ನೆಲೆ : ಅನಾಥ ಮಕ್ಕಳಿಗೆ ವಿರಕ್ತಮಠದಿಂದ ಉಚಿತ ಶಿಕ್ಷಣ

02:16 PM May 23, 2021 | Team Udayavani |

ಧಾರವಾಡ : ಕೋವಿಡ್ ಮಹಾಮಾರಿಯಿಂದ ತಂದೆ ತಾಯಿ, ಪೋಷಕರನ್ನು ಕಳೆದುಕೊಂಡು ತಬ್ಬಲಿಯಾದ ಮಕ್ಕಳಿಗೆ ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠವು ಆಸರೆಯಾಗಲು ಮುಂದೆ ಬಂದಿದೆ.

Advertisement

ಶ್ರೀ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರು ಧಾರವಾಡ ಜಿಲ್ಲೆಯಲ್ಲಿ ಇರುವ ಇಂತಹ ಮಕ್ಕಳಿಗೆ ಶ್ರೀಮಠದಲ್ಲಿಯೇ ಉಚಿತವಾಗಿ ಊಟ ವಸತಿಯೊಂದಿಗೆ ಅವರಿಗೆ ಪದವಿ ಪೂರ್ವದವರೆಗೂ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ.

ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಎಲ್ಲೆಡೆ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹರಡಿ ಜನರ ಉಸಿರನ್ನು ನಿಲ್ಲಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನತೆ ಧೈರ್ಯ ಕಳೆದುಕೊಳ್ಳದೇ ಆತ್ಮಸ್ಥೈರ್ಯದಿಂದ ಇರಬೇಕು ಎಂದು ಶ್ರೀಗಳು ತಿಳಿಸಿದ್ದಾರೆ. ಜನರು ಈ ಸಾಂಕ್ರಾಮಿಕ ರೋಗವನ್ನು ನಿರ್ಲಕ್ಷ್ಯ ಮಾಡದೇ ಸರಕಾರದ ಕೋವಿಡ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ ರೋಗ ಹರಡದಂತೆ ಸಹಕರಿಸಬೇಕು ಎಂದು ಜನರಲ್ಲಿ ಅವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಶ್ರೀಗಳ ಮೊ.9739373000 ಸಂಪರ್ಕಿಸಲು ಕೋರಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next