ಕೋಲಾರ: ನಗರದ ಶ್ರೀರಮಣ ಮಹರ್ಷಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕೋಲಾರ, ಬೆಂಗಳೂರು ಮಾರುತಿ ಮೆಡಿಕಲ್ಸ್ ಸಹಕಾರ ದಿಂದ ಉಚಿತ ನೋಟ್ ಪುಸ್ತಕ, ಮಾಸ್ಕ್ ವಿತರಿಸಲಾಯಿತು. ಶಿಕ್ಷಕ ಹಾಗೂ ರೋಟರಿ ನಿಯೋಜಿತ ಅಧ್ಯಕ್ಷ ಬಿ.ಶಿವ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀರಮಣ ಮಹರ್ಷಿ ಶಾಲೆ ಅನುದಾನಿತವಾಗಿದ್ದು, 1ರಿಂದ 7ರವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.
ಮಕ್ಕಳಿಗೆ ದಾನಿಗಳ ಸಹಕಾರ, ಸ್ವತಃ ಶಾಲಾ ಶಿಕ್ಷಕರೇ ತಮ್ಮ ವೈಯಕ್ತಿಕ ಸಂಬಳದಿಂದ ಮಕ್ಕಳಿಗೆ ಶಾಲಾ ವಾಹನ, ಪುಸ್ತಕ, ಸಮವಸ್ತ್ರ ಎಲ್ಲವೂ ಸಂಪೂರ್ಣ ಉಚಿತವಾಗಿ 15 ವರ್ಷಗಳಿಂದ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೋಟರಿ ಸಂಸ್ಥೆಯ ಸಂಪೂರ್ಣ ಸಹಕಾರ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಜಿಲ್ಲೆ 3190 ವಲಯ ಪಾಲಕ ಎಸ್.ವಿ. ಸುಧಾಕರ್ ಮಾತನಾಡಿ, ನಿಜಕ್ಕೂ ಈ ಶಾಲೆಯ ಶಿಕ್ಷಕರ ಕಾರ್ಯ ಅಭಿನಂದನಾರ್ಹವಾದದ್ದು, ಯಾವುದೇ ಮೂಲ ಸೌಲಭ್ಯಗಳಿಲ್ಲದಿದ್ದರೂ ಇಷ್ಟು ವಿದ್ಯಾರ್ಥಿಗಳೊಂದಿಗೆ ಶಾಲೆಯನ್ನು ಮುನ್ನಡೆಸುತ್ತಿದ್ದಿರ, ನಮ್ಮ ಸ್ನೇಹಿತರು, ರೋಟರಿ ಸಹಭಾಗಿತ್ವದಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ:- ಅಕ್ರಮ ವಲಸಿಗರಿಗೆ ದಾಖಲೆ ಕೊಡಿಸುವ ಜಾಲವೇ ಇದೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಕೋಲಾರ ರೋಟರಿ ಕ್ಲಬ್ ಅಧ್ಯಕ್ಷ ರಾಮನಾಥ್, ರೋಟರಿ 3190 ಸಹಾಯಕ ರಾಜ್ಯಪಾಲ ಎಚ್. ರಾಮಚಂದ್ರಪ್ಪ, ಶಾಲಾ ಸಿಬ್ಬಂದಿ ವರ್ಗ ಕ್ರಿಯಾಶೀಲತೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷ ಟಿ.ಜಿ.ಆರ್ .ಬಾಲಾಜಿ, ಕಾರ್ಯದರ್ಶಿ ಎಂ.ಎನ್. ರಾಮಚಂದ್ರೇಗೌಡ, ಶಾಲಾ ಮುಖ್ಯ ಶಿಕ್ಷಕ ಎಂ.ಪ್ರಕಾಶ್, ಯುವಜಾಗೃತಿ ದಳದ ಅಧ್ಯಕ್ಷ ಶಮ್ಸ್, ಸಮೃದ್ಧಿ ಶ್ರೀನಾಥ್, ಶಾಲಾ ಸಿಬ್ಬಂದಿ ಶಂಕರನಾಗ್, ರೇಖಾಮಣಿ, ವನಿತಾ ಉಪಸ್ಥಿತರಿದ್ದರು.