Advertisement

ಉಚಿತ ದಸರಾ ದರ್ಶನಕ್ಕೆ ಅವಕಾಶ: ಸೋಮಣ್ಣ

06:14 PM Oct 04, 2019 | Suhan S |

ಮೈಸೂರು: ಅರಣ್ಯ ವ್ಯಾಪ್ತಿಯ ಹಾಡಿ ಗಳಲ್ಲಿ ವಾಸಿಸುವ ಗಿರಿಜನರೂ ಸೇರಿದಂತೆ ಗ್ರಾಮೀಣ ಭಾಗದ ಬಡಜನರಿಗೆ ಈಬಾರಿ ಕೆಎಸ್ಸಾರ್ಟಿಸಿ ಯಿಂದ ಉಚಿತವಾಗಿ ದಸರಾ ದರ್ಶನಕ್ಕೆ ಅವಕಾಶ ಕಲ್ಪಿಸಿರು ವುದು ಒಳ್ಳೆಯ ಬೆಳವಣಿಗೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

Advertisement

ದಸರಾ ದರ್ಶನ ಉಪ ಸಮಿತಿ ವತಿಯಿಂದ ಗುರುವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ದಸರಾದರ್ಶನ ಬಸ್‌ಗಳಿಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಸಿರು ನಿಶಾನೆ ತೋರಿಮಾತನಾಡಿದರು. ಹಳೇ ಮೈಸೂರು ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಸೇರಿ ಐದು ಜಿಲ್ಲೆಗಳ 31 ತಾಲೂಕುಗಳ ಆದಿವಾಸಿಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಈ ದಸರಾ ದರ್ಶನ ಸೌಲಭ್ಯ ಒದಗಿಸಲಾಗಿದೆ. ಕಳೆದ ಬಾರಿ ಇದ್ದ ರಿಯಾಯಿತಿ ಪಾಸ್‌ ರದ್ದುಪಡಿಸಿ ಉಚಿತವಾಗಿ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದರು.

ದಸರೆಗೆ ಜನರನ್ನು ಕರೆತರಲು ಮೈಸೂರು ಜಿಲ್ಲೆಯ ಪ್ರತಿ ತಾಲೂಕಿಗೆ 9 ಬಸ್‌ ಹಾಗೂ ಇತರೆ ಜಿಲ್ಲೆಗಳ ಪ್ರತಿ ತಾಲೂಕಿಗೆ 6 ಬಸ್‌ಗಳಂತೆ ಒಟ್ಟು 210 ಬಸ್‌ ಬಿಡಲಾಗಿದೆ. ಒಟ್ಟು 11,150 ಬಡ ಜನರಿಗೆ ದಸರಾ ದರ್ಶನ ಮಾಡಿಸುವ ಉದ್ದೇಶಿಸಿದ್ದು, ದಸರೆಗೆ ಬರುವ ಮೈಸೂರಿನಲ್ಲಿ ಅರಮನೆ, ಮೃಗಾಲಯ, ರೈತ ದಸರಾ ಹಾಗೂ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next