Advertisement

ಕೋವಿಡ್ ತಡೆಗಟ್ಟುವಲ್ಲಿ ನಮ್ಮಿಂದಾದ ಸಹಕಾರ ನೀಡೋಣ: ಡಾ|ಸತೀಶ್‌ ಬಿ. ಶೆಟ್ಟಿ

11:26 AM Apr 07, 2021 | Team Udayavani |

ಮೀರಾರೋಡ್‌: ಬಂಟರ ಸಂಘ ಮುಂಬಯಿ ಇದರ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ವತಿಯಿಂದ ಸಮಾಜ ಬಾಂಧವರಿಗೆ ಉಚಿತ ಕೋವಿಡ್‌ ಲಸಿಕೆ ನೀಡುವ ಶಿಬಿರವು ಮೀರಾರೋಡ್‌ ತುಂಗಾ ಹಾಸ್ಪಿಟಲ್‌ ಪ್ರಾಯೋಜಕತ್ವದಲ್ಲಿ ಎ. 3ರಂದು ನಡೆಯಿತು. ಬೆಳಗ್ಗೆ 10.30ರಿಂದ ಸಂಜೆ 5ರ ವರೆಗೆ ನಡೆದ ಈ ಕಾರ್ಯಕ್ರಮದಲ್ಲಿ  ಸುಮಾರು 296 ಮಂದಿ ಕೋವಿಡ್‌ ಲಸಿಕೆಯ ಪ್ರಯೋಜನ ಪಡೆದರು.

Advertisement

ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಹಾಗೂ ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರ ನಿರ್ದೇಶನದಂತೆ ನಡೆದ ಈ ಕಾರ್ಯಕ್ರಮದಲ್ಲಿ  ಪರಿಸರದ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಸಮಾಜ ಬಾಂಧವರಿಗೆ ಉಚಿತವಾಗಿ ಕೋವಿಡ್‌ ಲಸಿಕೆಯನ್ನು ನೀಡಲಾಯಿತು. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಮಾಣಿಗುತ್ತು ಶಿವಪ್ರಸಾದ್‌ ಆರ್‌. ಶೆಟ್ಟಿ, ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಡಾ| ಭಾಸ್ಕರ ಕೆ. ಶೆಟ್ಟಿ  ಮತ್ತು ಅವರ ಸಮಿತಿಯ ವೈದ್ಯಕೀಯ ತಂಡ, ಸಂಚಾಲಕ ಗಿರೀಶ್‌ ಆರ್‌. ಶೆಟ್ಟಿ ತೆಳ್ಳಾರ್‌ ಅವರ ನೇತೃತ್ವದಲ್ಲಿ ಹಾಗೂ ಸ್ಥಳೀಯ ಸಮಿತಿಯ ಎಲ್ಲ ಕಾರ್ಯಾಧ್ಯಕ್ಷರ ಸಮ್ಮುಖದಲ್ಲಿ  ಈ ಬೃಹತ್‌ ಶಿಬಿರವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ತುಂಗಾ ಹಾಸ್ಪಿಟಲ್‌ನ ಆಡಳಿತ ನಿರ್ದೇಶಕ ಡಾ| ಸತೀಶ್‌ ಬಿ. ಶೆಟ್ಟಿ  ಮಾತನಾಡಿ, ದೀರ್ಘ‌ ಕಾಲದವರೆಗೂ ಮುಂದುವರಿಯಲಿರುವ ಕೋವಿಡ್‌ ಮಹಾಮಾರಿ ಬಗ್ಗೆ ವಿವರಣೆ ನೀಡಿದರು. ಜನರು ತಮ್ಮ ರಕ್ಷಣೆಯನ್ನು ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಈ ವಿಚಾರದಲ್ಲಿ  ನಿರ್ಲಕ್ಷ್ಯ ತೋರಬಾರದು. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಂಡರೆ ಹೆದರಬೇಕಾದ ಪರಿಸ್ಥಿತಿ ಬರುವುದಿಲ್ಲ. ಕೋವಿಡ್‌ ಲಸಿಕೆಯನ್ನು  ಎಲ್ಲರೂ ಪಡೆಯುವಂತಾಗಲು ನಾವೆಲ್ಲರೂ ಮುಂದಾಗಬೇಕು. ಕೊರೊನಾ ತಡೆಗಟ್ಟುವಲ್ಲಿ ನಮ್ಮಿಂದಾದ ಸಹಕಾರ ನೀಡಲು ಮುಂದಾಗಬೇಕು ಎಂದು ತಿಳಿಸಿ ಶುಭ ಹಾರೈಸಿದರು.

ಬಂಟರ ಸಂಘದ ಪಾದೇಶಿಕ ಸಮಿತಿಯ ಸಮನ್ವಯಕ ಶಶಿಧರ್‌ ಕೆ. ಶೆಟ್ಟಿ ಇನ್ನಂಜೆ ಮಾತನಾಡಿ, ಜೀವ ರಕ್ಷಣೆ ಲಸಿಕೆಯ ಪ್ರಯೋಜನವು ಎಲ್ಲರಿಗೂ ದೊರೆಯುವಂತಾಗಲಿ. ಈ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಬರಲಿ ಎಂದರು.

ಸಂಚಾಲಕರಾದ ಗಿರೀಶ್‌ ಆರ್‌. ಶೆಟ್ಟಿ ತೆಳ್ಳಾರ್‌ ಮಾತನಾಡಿ, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಹಾಗೂ ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿಯವರ ನಿರ್ದೇಶನದಂತೆ ನಡೆದ ಈ ಕಾರ್ಯಕ್ರಮದಿಂದ ಸಮಾಜ ಬಾಂಧವರಲ್ಲಿ ಮಾಹಾಮಾರಿಯ ಅತಂಕವನ್ನು ಕಡಿಮೆಗೊಳಿಸುವಲ್ಲಿ ಸಹಕಾರ ನೀಡಿದಂದಾಗಿದೆ. ಇದನ್ನು ಇನ್ನೂ ವಿಸ್ತರಿಸಿ ಎಲ್ಲರೂ ಇದರ ಪ್ರಯೋಜನ ಪಡೆಯುವಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದರು.

Advertisement

ಡಾ| ಸತೀಶ್‌ ಬಿ. ಶೆಟ್ಟಿ ಮತ್ತು ಅವರ ಸಿಬಂದಿ ವರ್ಗ ಹಾಗೂ ಡಾ| ಭಾಸ್ಕರ ಶೆಟ್ಟಿಯವರನ್ನು ಪ್ರಾದೇಶಿಕ ಸಮಿತಿ ವತಿಯಿಂದ ಸಂಘದ ಪ್ರಾದೇಶಿಕ ಸಮಿತಿಯ ಪಶ್ಚಿಮ ವಲಯದ ಸಮನ್ವಯಕ ಶಶಿಧರ್‌ ಕೆ. ಶೆಟ್ಟಿ ಇನ್ನಂಜೆ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್‌ ಶೆಟ್ಟಿ, ಸಂಚಾಲಕ ಗಿರೀಶ್‌ ಶೆಟ್ಟಿ  ತೆಳ್ಳಾರ್‌, ಉಪ ಕಾರ್ಯಾಧ್ಯಕ್ಷ ಉದಯ ಶೆಟ್ಟಿ  ಪೆಲತ್ತೂರು, ಕೋಶಾಧಿಕಾರಿ ದಾಮೋದರ ಶೆಟ್ಟಿ, ಜತೆ ಕೋಶಾಧಿಕಾರಿ ರಮೇಶ್‌ ಶೆಟ್ಟಿ ಸಿದ್ದಕಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಎಸ್‌. ಶೆಟ್ಟಿ  ಸಚ್ಚೇರಿಗುತ್ತು, ಮಹಿಳಾ ವಿಭಾಗದ ಸಲಹಾ ಸಮಿತಿಯ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್‌ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದರ್ಶ್‌ ಶೆಟ್ಟಿ ಅವರು ಗೌರವಿಸಿದರು.

ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿಯ ಉಪಕಾರ್ಯಾಧ್ಯಕ್ಷ ಕುತ್ಯಾರ್‌ ಕಿಶೋರ್‌ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಲಹಾ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ಕಾಶಿಮೀರಾ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷೆ ಅಮಿತಾ. ಕೆ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್‌ ಶೆಟ್ಟಿ, ಸದಸ್ಯ ನೋಂದಣಿ ವಿಭಾಗ ಕಾರ್ಯಾಧ್ಯಕ್ಷ ಬಾಬಾ ಪ್ರಸಾದ್‌ ಅರಸ, ಪ್ರಸಾರ ಹಾಗೂ ತಾಂತ್ರಿಕ ವಿಭಾಗದ ಕಾರ್ಯಾಧ್ಯಕ್ಷ ವೈ. ಟಿ. ಶೆಟ್ಟಿ  ಹೆಜಮಾಡಿ, ಕ್ಯಾಟರಿಂಗ್‌ ವಿಭಾಗದ ಕಾರ್ಯಾಧ್ಯಕ್ಷ ಅಶೋಕ್‌ ಶೆಟ್ಟಿ  ಎಂಟಿಎನ್‌ಎಲ್‌, ಭಜನ ಸಮಿತಿ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ  ಮೂಡುಬೆಳ್ಳೆ, ಉದ್ಯೋಗ ವಿಭಾಗ ಕಾರ್ಯಾಧ್ಯಕ್ಷ ಸಾಯಿ ಪ್ರಸಾದ್‌ ಪೂಂಜ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ವಸಂತಿ ಎಸ್‌. ಶೆಟ್ಟಿ, ಕಾರ್ಯದರ್ಶಿ ಸುಜಾತಾ ಪಿ. ಶೆಟ್ಟಿ, ಕೋಶಾಧಿಕಾರಿ ಶಿಲ್ಪಾ ಸಿ. ಶೆಟ್ಟಿ, ಜತೆ ಕಾರ್ಯದರ್ಶಿ ಶರ್ಮಿಳಾ ಪಿ. ಶೆಟ್ಟಿ, ಜತೆ ಕೋಶಾಧಿಕಾರಿ ಶೀಲಾ ಎಂ ಶೆಟ್ಟಿ, ಲತಾ ಪಿ. ಶೆಟ್ಟಿ, ಮಮತಾ ವಿ. ಶೆಟ್ಟಿ, ವೃಷಭ ಶೆಟ್ಟಿ, ಸುಶಾಂತ್‌ ಶೆಟ್ಟಿ, ನಿಧಿ ಶೆಟ್ಟಿ, ಕಲ್ಪಕ್‌ ಶೆಟ್ಟಿ, ನಿರೀಕ್ಷಾ ಶೆಟ್ಟಿ, ವೈದ್ಯಕೀಯ ಸಮಿತಿಯ ಡಾ| ಪ್ರತಾ ಗೌರೀಶ್‌ ಶೆಟ್ಟಿ, ಡಾ| ಗೌರೀಶ್‌ ಶೆಟ್ಟಿ, ಡಾ| ಸ್ವರೂಪ್‌ ರೈ, ಕರುಣಾಕರ ಶೆಟ್ಟಿ ಕುಕ್ಕುಂದೂರು, ಗುಣಪಾಲ್‌ ಶೆಟ್ಟಿ ಕುಕ್ಕುಂದೂರು, ಸುರೇಶ್‌ ಶೆಟ್ಟಿ ಪಯ್ನಾರು ಮೊದಲಾದವರು ಸಹಕರಿಸಿದರು.

45 ವರ್ಷಕ್ಕಿಂತ ಹೆಚ್ಚು  ವಯೋಮಿತಿಯವರಿಗೆ ಲಸಿಕೆ ಕಾರ್ಯ ಯೋಜನೆ ವಿಸ್ತರಿಸಿ, ಸಮಾಜದ ಎಲ್ಲ ಬಾಂಧವರಿಗೂ ಕೋವಿಡ್‌ ಲಸಿಕೆಯ ಪ್ರಯೋಜನ ನೀಡುವ ಪ್ರಯತ್ನ ಮುಂದುವರಿಯಲಿದೆ. ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿದರೆ ಹೆದರುವ ಅಗತ್ಯ ಇರುವುದಿಲ್ಲ. ಬಂಟರ ಸಂಘದ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯು ಸಮಾಜ ಬಾಂಧವರ ಆಶೋತ್ತರಗಳಿಗೆ ಸ್ಪಂದಿಸಲು ಸದಾ ಸಿದ್ಧವಿದೆ. ಮಾಣಿಗುತ್ತು ಶಿವಪ್ರಸಾದ್‌ ಆರ್‌. ಶೆಟ್ಟಿ, ಕಾರ್ಯಾಧ್ಯಕ್ಷರು, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿ

ಯೋಜನೆಯ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಲಸಿಕೆ ಪಡೆದ ಬಳಿಕವೂ ರೋಗ ಲಕ್ಷಣಗಳು ಕಂಡು ಬಂದರೆ ಅಪಾಯದಿಂದ ಪಾರಾಗಬಹುದು. ಮಾಸ್ಕ್ ಕಡ್ಡಾಯ ವಾಗಿ ಧರಿಸುವುದರಿಂದ ಆಗುವ ಪ್ರಯೋಜನ ಹಾಗೂ ರೋಗ ಹರಡುವುದರ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಸಾಮಾಜಿಕ ಅಂತರದಿಂದಲೂ  ರೋಗದ ಅಪಾಯವನ್ನು ತಪ್ಪಿಸಬಹುದು. ಡಾ| ಭಾಸ್ಕರ ಕೆ. ಶೆಟ್ಟಿ, ಕಾರ್ಯಾಧ್ಯಕ್ಷರು, ವೈದ್ಯಕೀಯ ವಿಭಾಗ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next