Advertisement

ದೇಶಭಕ್ತಿ ಬಜೆಟ್ ನಲ್ಲಿ ಉಚಿತ ಕೋವಿಡ್ ಲಸಿಕೆ ಘೋಷಿಸಿದ ದೆಹಲಿ ಸರ್ಕಾರ

02:15 PM Mar 09, 2021 | Team Udayavani |

ನವದೆಹಲಿ : ದೆಹಲಿ ಸರ್ಕಾರ ‘ದೇಶ ಭಕ್ತಿ ಬಜೆಟ್’ ಮಂಡನೆ ಮಾಡಿದ್ದು, ರಾಜ್ಯದಲ್ಲಿ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡಲಾಗುವುದು ಎಂದು ಘೋಷಣೆ  ಮಾಡಿದೆ.

Advertisement

ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿರುವ ಉಪ ಮುಖ್ಯಮಂತ್ರಿ ಮನಿಶ್ ಸಿಸೋದಿಯಾ, ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಸಿಗಲಿದೆ. ಇದಕ್ಕಾಗಿ 50 ಕೋಟಿಯನ್ನು ಮೀಸಲಿಟ್ಟಿದ್ದೇವೆ ಎಂದರು.

ಇದೇ ವೇಳೆ ಮಾತನಾಡಿದ ಡಿಸಿಎಂ ಸಿಸೋದಿಯಾ, ಲಸಿಕೆ ಹಾಕುವ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಯೋಜನೆಯನ್ನು ರೂಪಿಸಲಾಗಿದೆ. ಸದ್ಯ ಪ್ರತಿ ದಿನ 45000 ಕೊರೊನಾ ಲಸಿಕೆ ಹಾಕುತ್ತಿದ್ದು, ಇದನ್ನು 60000 ಕ್ಕೆ ಏರಿಸಲಾಗುವುದು ಎಂದಿದ್ದಾರೆ.

ದೇಶಾದ್ಯಂತ ಕೋವಿಡ್ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದ್ದು, ಕಳದೆ 24 ಗಂಟೆಗಳಲ್ಲಿ ಬರೋಬ್ಬರಿ 2 ಮಿಲಿಯನ್ ಜನ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next