ಚನ್ನರಾಯಪಟ್ಟಣ/ಹಿರೀಸಾವೆ: ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯಡಿ ಜೂನ್ ಎರಡನೇ ವಾರದಲ್ಲಿ ಹೈನುಗಾರಿಕೆಗೆ ಹಾಗೂ ಗಣಕಯಂತ್ರ ಬಳಕೆ ಬಗ್ಗೆ ಗ್ರಾಮೀಣ ಭಾಗದವರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ ನಿಗಮದ ಜಿಲ್ಲಾಧಿಕಾರಿ ವಿಜಯಲಕ್ಷ್ಮೀ ತಿಳಿಸಿದರು.
ಹಿರೀಸಾವೆ ಹೋಬಳಿ ಕೇಂದ್ರದಲ್ಲಿನ ಹೆಬ್ಟಾರಮ್ಮ ಮಹಿಳಾ ಮಂಡಳಿಯಿಂದ ಆಯೋಜಿಸಿದ್ದ ಹೊಲಿಗೆ ಮತ್ತು ಕಸೂತಿ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ನಾಲ್ಕು ತಿಂಗಳಿನಿಂದ ಜಿಲ್ಲೆಯ ಮೂರು ಕೇಂದ್ರದಲ್ಲಿ ಉಚಿತವಾಗಿ ಹೊಲಿಗೆ ತರಬೇತಿ ನೀಡಲಾಗುತ್ತಿದೆ ಇದರೊಂದಿಗೆ ಜಿಲ್ಲೆಯ ಒಂದು ಕೇಂದ್ರದಲ್ಲಿ ಕಸೂತಿ ತರಬೇತಿ ನೀಡುವ ಮೂಲಕ ನಿರುದ್ಯೋಗ ಯುವ ಸಮುದಾಯವನ್ನು ಸ್ವಾವಲಂಬಿ ಯನ್ನಾಗಿ ಮಾಡಲಾಗುತ್ತಿದೆ ಎಂದರು.
ಜೂನ್ ಎರಡನೇ ವಾರದಲ್ಲಿ ಇದೇ ಮಾದರಿಯಲ್ಲಿ ಗ್ರಾಮೀಣ ಭಾಗದ ವಿದ್ಯಾವಂತ ನಿರುದ್ಯೋಗ ಯುವಸಮು ದಾಯಕ್ಕೆ ಕಂಪ್ಯೂಟರ್ ತರಬೇತಿ ನೀಡಲಾಗುವುದು. ಇತ್ತೀಚಿನ ದಿವಸ ದಲ್ಲಿ ಹಾಲು ಉತ್ಪಾದನಗೆ ಬಹಳ ಬೇಡಿಕೆ ಇರುವುರಿಂದ ಆಧುನಿಕ ಮಾದ ರಿಯಲ್ಲಿ ಯಾವ ರೀತಿ ಹೈನುಗಾರಿಕೆ ಮಾಡಬಹುದು ಎಂಬುದರ ಬಗ್ಗೆ ತರಬೇತಿ ನೀಡುವುದರೊಂದಿಗೆ ಹೊಲಿಗೆ ತರಬೇತಿಯನ್ನು ಉಚಿತವಾಗಿ ಜಿಲ್ಲೆಯ ಎಂಟು ತಾಲೂಕು ಮತ್ತು ಎಲ್ಲಾ ಹೋಬಳಿ ಕೇಂದ್ರದಲ್ಲಿ ನೋಂದಾ ಯಿತ ಸಂಸ್ಥೆಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸುವುದರ ಜತೆಗೆ ಉದ್ಯೋಗ ಕಲ್ಪಿಸಲಾಗುವುದು. ಆಸಕ್ತ ಯುವಕ, ಯುವತಿಯರು ಕೌಶಲ್ಯಾಭಿವೃದ್ಧಿ ನಿಗ ಮದ ಜಿಲ್ಲಾ ಅಧಿಕಾರಿ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಲಹೆ ನೀಡಿದರು.
ರಾಜ್ಯ ಮಟ್ಟದ ತಂಡದವರು ಮುಂದಿನ ದಿನಗಳಲ್ಲಿ ತರಬೇತಿ ಕೇಂದ್ರ ಗಳಿಗೆ ಭೇಟಿ ನೀಡಲಿದ್ದಾರೆ, ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಸರ್ಕಾರಿ ಇಲಾಖೆ ನೀಡಲಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮಂಡಳಿ ಅಧ್ಯಕ್ಷೆ ಚಿಕ್ಕಮ್ಮ ಹಾಗೂ ಪದಾಧಿಕಾರಿಗಳು, ಕೌಶಲ್ಯಾಭಿ ವೃದ್ಧಿ ಇಲಾಖೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.