Advertisement
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಆಸ್ಪತ್ರೆಯಲ್ಲಿ 4 ವರ್ಷಗಳಿಂದ ಹಲವಾರು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡುಬಂದಿದ್ದೇವೆ. ಡಿ.31ರಂದು ತಮ್ಮ ಜನ್ಮದಿನ ವನ್ನು ಬೆಂಬಲಿಗರು ಸಂಭ್ರಮದಿಂದ ಆಚರಿಸುತ್ತಿದ್ದರು.
Related Articles
Advertisement
ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಹಸನಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿರುವಒಕ್ಕಲುತನ ಹುಟ್ಟುವಳಿ ಮಾರಾಟಸಹಕಾರ ಸಂಘದಲ್ಲಿ ತೆರೆಯಲಾಗಿರುವತೊಗರಿ ಖರೀದಿ ಕೇಂದ್ರಕ್ಕೆ ಜಿಲ್ಲಾ ಧಿಕಾರಿಡಾ| ರಾಗಪ್ರಿಯ ಸೋಮವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದಅವರು, ತೊಗರಿ ಖರೀದಿಗೆಸಂಬಂಧಿಸಿದ ಕೇಂದ್ರಗಳಲ್ಲಿ ರೈತರು ತಮ್ಮಹೆಸರು ನೋಂದಾಯಿಸಿಕೊಳ್ಳಬೇಕು. ಈವೇಳೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಬೇಕು. ತೊಗರಿ ಖರೀದಿಕುರಿತು ವ್ಯಾಪಕವಾಗಿ ಪ್ರಚಾರಕೈಗೊಳ್ಳಬೇಕು. ಆ ಮೂಲಕ ರೈತರುಈ ಯೋಜನೆಯ ಹೆಚ್ಚಿನ ಲಾಭಪಡೆಯುವಂತಾಗಬೇಕು ಎಂದು ಸೂಚಿಸಿದರು.
ಪ್ರತಿ ಕ್ವಿಂಟಲ್ ತೊಗರಿಗೆ ಕೇಂದ್ರ ಸರ್ಕಾರದ ಬೆಂಬಲೆ ಬೆಲೆಯೋಜನೆಯಡಿ 6,000 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಪ್ರತಿರೈತರಿಂದ ಎಕರೆಗೆ 7.5 ಕ್ವಿಂಟಲ್‌ನಂತೆಗರಿಷ್ಠ 20 ಕ್ವಿಂಟಲ್ ತೊಗರಿಯನ್ನುಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಎಪಿಎಂಸಿ ಅಧಿಕಾರಿಗಳು ಸ್ಥಳದಲ್ಲಿದ್ದರು. ಇದೇ ಸಂದರ್ಭದಲ್ಲಿ ರೈತರು ಹಲವು ಬೇಡಿಕೆ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.