Advertisement
ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸಭಾ ಭವನದಲ್ಲಿ ಜು. 14ರಂದು ನಡೆದ ಕೊಲ್ಲೂರು ಹಾಗೂ ಜಡ್ಕಲ್ ಗ್ರಾ.ಪಂ. ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ರೈತರಿಗೆ ಸಾಲ ಮನ್ನಾ ಮಾಡುವುದರ ಮೂಲಕ ಸಿದ್ದರಾಮಯ್ಯ ಅವರ ಸರಕಾರವು ರಾಜ್ಯದಲ್ಲಿ ಹೊಸ ಚೈತನ್ಯದ ಕಾರ್ಯಕ್ರಮ ಹಮ್ಮಿಕೊಂಡಂತಾಗಿದೆ. ಕೊಲ್ಲೂರಿನ ಸಮಗ್ರ ಅಭಿವೃದ್ಧಿಗಾಗಿ ಮುಖ್ಯವಾಗಿ ರಸ್ತೆ, ಸೇತುವೆ ಹಾಗೂ ಭರವಸೆ ನೀಡಿರುವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ರೂ. 6 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ. ಅತೀ ಶೀಘ್ರದಲ್ಲೇ…
91-ಸಿ ಅಡಿ ಈ ವರೆಗೆ 170 ಹಕ್ಕುಪತ್ರಗಳನ್ನು ಈ ಭಾಗದಲ್ಲಿ ನೀಡಲಾಗಿದೆ. ಸುಭಾಸನ ತೊಪುÉ, ಸೊಸೈಟಿ ಗುಡ್ಡೆ, ಮಾರಿಕಟ್ಟೆ ಪ್ರದೇಶ, ಕಾಶೀಹೊಳೆ ಬಾಕಿ ಇದ್ದು ಇಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಜಂಟಿ ಸರ್ವೇ ನಡೆಸಿ ಮುಂದಿನ ದಿನಗಳಲ್ಲಿ ಹಕ್ಕುಪತ್ರ ಒದಗಿಸುವ ಭರವಸೆ ನೀಡಿದರು. ಆಶ್ರಯ, ಅಂಬೇಡ್ಕರ್, ಇಂದಿರಾ ಆವಾಜ್, ಯೋಜನೆಯಡಿ 1,200 ಮನೆ ನಿರ್ಮಾಣಗಳಿಗೆ ಅನುಮತಿ ದೊರೆತಿದ್ದು ಸುಮಾರು 1,866 ಹೆಚ್ಚುವರಿ ಮನೆಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು ಅತೀ ಶೀಘ್ರದಲ್ಲೇ ಸಿಗುವ ಸಾಧ್ಯತೆ ಇದೆ ಎಂದರು.
Related Articles
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಈ ಭಾಗಕ್ಕೆ ಆಮಂತ್ರಿಸಿ ಸಮಾವೇಶ ನಡೆಸಿ, ಕುಮ್ಕಿ ಹಕ್ಕು ರೈತರಿಗೆ ಸಿಗುವ ಬಗ್ಗೆ ಅವರ ಮೇಲೆ ಒತ್ತಡ ಹೇರಲಾಗುವುದು. ಕಾಂಗ್ರೆಸ್ ಸರಕಾರವು ಈ 4 ವರ್ಷದ ಆಡಳಿತ ಅವಧಿಯಲ್ಲಿ ಎಲ್ಲ ವರ್ಗದ ಜನರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಅವರು ಹೇಳಿದರು.
Advertisement
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಶಂಕರ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ತಾ.ಪಂ. ಸದಸ್ಯೆ ಗ್ರೀಷ್ಮಾ ಬಿಡೆ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷೆ ನೇತ್ರಾವತಿ, ಜಡ್ಕಲ್ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ, ಉಪಾಧ್ಯಕ್ಷ ವಿಶ್ವನಾಥನ್, ಕೊಲ್ಲೂರು ದೇಗುಲದ ಉಪಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ವಂಡ್ಸೆ ತಾ.ಪಂ. ಸದಸ್ಯ ಉದಯ ಪೂಜಾರಿ ಅಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ, ಕೆ.ಎಸ್.ಆರ್.ಟಿ.ಸಿ., ಮೆಸ್ಕಾಂ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪಶುಸಂಗೋಪನಾ ಇಲಾಖೆ, ಮೀನುಗಾರಿಕಾ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳಿಂದ ಒದಗಿಸಲಾದ ಸೌಲಭ್ಯ ಗಳ ಮಾಹಿತಿ, ಫಲಾನುಭವಿಗಳಿಗೆ ಸವಲತ್ತು ಮತ್ತು ಹಕ್ಕುಪತ್ರಗಳನ್ನು ವಿತರಿಸಲಾಯಿತು.
ಜಡ್ಕಲ್, ಕೊಲ್ಲೂರು ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರ ಕಿರಣ್ ಗೌರಯ್ಯ. ಸ್ವಾಗತಿಸಿ, ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ ಮೊಲಿ ವಂದಿಸಿದರು.