ಶಿರಸಿ: ವೃತ್ತಿ ಬದುಕಿನಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಟವಾದದ್ದು, ನಾವು ಮಾಡುವ ಕಾರ್ಯ ಮಕ್ಕಳಿಗೆ ಪ್ರೇರಪಣೆಯಾಗಿ ಅವರ ಭವಿಷ್ಯ ರೂಪಗೊಳ್ಳು ವಂತಾಗಬೇಕು. ಅಂದಾಗ ಮಾತ್ರ ಶಿಕ್ಷಕರ ಬದುಕು ಸಾರ್ಥಕ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು
ಅವರು ತಾಲೂಕಿನ ಬಂಡಲ ಸರ್ಕಾರಿ ಪ್ರೌಢ ಶಾಲೆಯ 140 ವಿದಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಉಚಿತ ಪಠ್ಯ ಪುಸ್ತಕ ವಿತರಿಸಿ ನಂತರ ಮಾತನಾಡಿದ ಅವರು,
ಹೆಚ್ಚಿನ ಬಡ ಕೂಲಿ ಕಾರ್ಮಿಕರ ಮತ್ತು ಸಣ್ಣ ಕೃಷಿ ಕುಟುಂಬದ ವಿದ್ಯಾರ್ಥಿಗಳು ತುಂಬಿ ಇರುವಂತಹ ಈ ಸರ್ಕಾರಿ ಪ್ರೌಢ ಶಾಲೆಯು ಅನೇಕ ವರ್ಷಗಳಿಂದ ಉತ್ತಮವಾದಂತಹ ಗುಣಾತ್ಮಕ ಶಿಕ್ಷಣ ನೀಡುತ್ತಿದೆ.
ನಾಯಕನು ಶಾಲೆಯ ನಾಲ್ಕು ಕೋಣೆಯಿಂದ ಹುಟ್ಟುತ್ತಾನೆ. ಅದಕ್ಕೆ ಶಿಕ್ಷಕರ ಪರಿಶ್ರಮ ಕೊಡುಗೆಯೂ ಅಷ್ಟೇ ಮಹತ್ವವಾದುದು. ಶಾಲೆಯ ನಾಯಕತ್ವ ವಹಿಸಿ ಜವಾಬ್ದಾರಿಯನ್ನು ನಿಭಾಯಿಸುವಂತಹ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಗುರಿಯು ಸ್ಪಷ್ಟವಾಗುತ್ತದೆ . ವಿದ್ಯಾರ್ಥಿಗಳು ಶಾಲೆಯ ಬೇರೆ ಬೇರೆ ಜವಾಬ್ದಾರಿಗಳನ್ನು ನಿಭಾಯಿಸಿದರೆ ಭವಿಷ್ಯದಲ್ಲಿ ಸಮಾಜದ ರಥವನ್ನು ನಡೆಸುವ ಸಾರಥಿಗಳೂ ಆಗಬಹುದು ಎಂದು ಹೇಳಿದರು.
ಕಡ್ಡಾಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣವನ್ನು ಪಡೆದು ಮುಂದಿನ ದಿನಗಳಲ್ಲಿ ಆದರ್ಶ ವ್ಯಕ್ತಿಗಳಾಗುವುದರ ಮುಖಾಂತರ ದುಷ್ಚಟದಿಂದ ದೂರವಿದ್ದು ಪ್ರತಿಯೊಬ್ಬರು ಕೂಡ ಹಿರಿಯರನ್ನು ತಂದೆ ತಾಯಂದಿರನ್ನು ಗೌರವಿಸುವಂತಹ ವಿದ್ಯಾರ್ಥಿಗಳು ಆಗಬೇಕು, ಮುಂದಿನ ನಿಮ್ಮ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿ ಇದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದವರು, ವಿದ್ಯಾರ್ಥಿಗಳು ಹಾಗೂ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು