Advertisement

ಉಚಿತ ವಿದ್ಯುತ್‌ನ ಮಿತಿ ಮೀರಿದರೆ ಫ‌ುಲ್‌ ಬಿಲ್‌

12:17 PM Jun 23, 2017 | |

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್‌ ಬಳಕೆದಾರರ ಉಚಿತ ವಿದ್ಯುತ್‌ ಬಳಕೆ ಮಿತಿಯನ್ನು 18 ಯೂನಿಟ್‌ನಿಂದ 40 ಯೂನಿಟ್‌ಗೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಆದರೆ ಈ ಮಿತಿ ಮೀರಿದರೆ ಬಳಸಿದ ಅಷ್ಟೂ ಯೂನಿಟ್‌ಗೂ ಶುಲ್ಕ ಪಾವತಿಸಬೇಕಿದೆ. 

Advertisement

ಕಳೆದ 2017ರ ಏಪ್ರಿಲ್‌ 1ರಿಂದಲೇ ಜಾರಿಗೊಳಿಸಿ ಆದೇಶ ಹೊರಡಿಸಿದೆ. 40 ಯೂನಿಟ್‌ಗಿಂತ ಹೆಚ್ಚು ಬಳಸಿದರೆ ಸಂಪೂರ್ಣ ಬಿಲ್‌ ಮೊತ್ತ (ಮೊದಲ ಯೂನಿಟ್‌ನಿಂದ ಬಳಸಿದ ಅಷ್ಟೂ ವಿದ್ಯುತ್‌ಗೆ) ಬಳಕೆದಾರರು ಪಾವತಿಸಬೇಕು ಎಂದು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ (ಕಂದಾಯ) ದೊರೆಸ್ವಾಮಿ ತಿಳಿಸಿದ್ದಾರೆ.

ಒಂದೊಮ್ಮೆ ಮಿತಿಗಿಂತ ಹೆಚ್ಚು ವಿದ್ಯುತ್‌ ಬಳಸಿ ನಂತರ ಶುಲ್ಕ ಪಾವತಿಸದಿದ್ದರೆ ಆ ವಿದ್ಯುತ್‌ ಸಂಪರ್ಕವನ್ನೇ ಕಡಿತಗೊಳಿಸಲಾಗುತ್ತದೆ. ಗ್ರಾಹಕರು ವಿದ್ಯುತ್‌ ಬಿಲ್‌ ಮೊತ್ತವನ್ನು ಬೆಸ್ಕಾಂ ವ್ಯಾಪ್ತಿಯ ಗ್ರಾಮ ವಿದ್ಯುತ್‌ ಪ್ರತಿನಿಧಿಗಳು, ನಗದು ಕೌಂಟರ್‌, ಎಟಿಪಿ, ಅಂಚೆ ಕಚೇರಿ, ಬೆಂಗಳೂರು ಒನ್‌, ತುಮಕೂರು ಒನ್‌ ಹಾಗೂ ದಾವಣಗೆರೆ ಒನ್‌ ಕೇಂದ್ರಗಳಲ್ಲಿ ಪಾವತಿಸಬಹುದು ಎಂದು ಹೇಳಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್‌ ಸಂಪರ್ಕ ಸುಮಾರು ಏಳು ಲಕ್ಷವಿದ್ದು, ಈ ಕುಟುಂಬಗಳು ಬಳಸುವ ವಿದ್ಯುತ್‌ಗೆ ತಗಲುವ ಮೊತ್ತವನ್ನು ಸರ್ಕಾರವೇ ಭರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next