Advertisement

ಉಚಿತ ಆಟೋ ಆಂಬ್ಯುಲೆನ್ಸ್‌ ಸೇವೆ

06:42 PM May 17, 2021 | Team Udayavani |

ಕಲಬುರಗಿ: ಕೊರೊನಾ ಸೋಂಕಿತರು ಮತ್ತು ಸೋಂಕಿನಿಂದ ಸಂಕಷ್ಟದಲ್ಲಿದ್ದರಿಗೆ ಗುಲಬರ್ಗಾ ಎನ್‌ಜಿಒಗಳ ಫೆಡರೇಷನ್‌ ನೆರವಿಗೆ ಧಾವಿಸಿದ್ದು, ಉಚಿತ ಆಟೋ ಆಂಬ್ಯುಲೆನ್ಸ್‌ ಸೇವೆ ಸೇರಿದಂತೆ ಹಲವು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ನಗರದ 22ಕ್ಕೂ ಅಧಿಕ ಎನ್‌ಜಿಒಗಳು ಮಾನವ ಹಕ್ಕುಗಳ ಸಂಘಟನೆಗಳ ಸಹಯೋಗದೊಂದಿಗೆ ಹಲವು ಪರಿಹಾರ ಕಾರ್ಯಗಳನ್ನು ಹಮ್ಮಿಕೊಂಡಿವೆ. ರೋಗಿಗಳಿಗೆ ತುರ್ತು ಸಂದರ್ಭಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಆಕ್ಸಿಜನ್‌ವುಳ್ಳ ಆಟೋ ಆಂಬ್ಯುಲೆನ್ಸ್‌ ಸೇವೆ ಆರಂಭಿಸಲಾಗಿದೆ.

Advertisement

ಈ ಆಂಬ್ಯುಲೆನ್ಸ್‌ಗೆ ನಗರ ಉಪ ಪೊಲೀಸ್‌ ಆಯುಕ್ತ ಡಿ. ಕಿಶೋರಬಾಬು ಹಸಿರು ನಿಶಾನೆ ತೋರುವ ಮೂಲಕ ಶನಿವಾರ ಚಾಲನೆ ನೀಡಿದ್ದಾರೆ. ಈ ಆಟೋ ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್‌ ಸಿಲಿಂಡರ್‌, ಥರ್ಮಾಮೀಟರ್‌, ಆಕ್ಸಿಮೀಟರ್‌, ಸ್ಯಾನಿಟೈಸರ್‌ ಹಾಗೂ ವೈದ್ಯಕೀಯ ಸಿಬ್ಬಂದಿ ಸೌಲಭ್ಯವಿರುತ್ತದೆ. ಉಚಿತ ಸೇವೆಗಾಗಿ ಮೊಹಮ್ಮದ್‌ ಇಕ್ಬಾಲ್‌ (ಮೊ.ನಂ. 96119 92772) ಅವರನ್ನು ಸಂಪರ್ಕಿಸಬಹುದು. ರವಿವಾರ ಒಂದೇ ದಿನದಲ್ಲಿ ಒಂಭತ್ತು ರೋಗಿಗಳು ಉಚಿತ ಆಟೋ ಆಂಬ್ಯುಲೆನ್ಸ್‌ನ ಸೇವೆ ಪಡೆದಿದ್ದಾರೆ ಎನ್ನುತ್ತಾರೆ ಫೆಡರೇಷನ್‌ ಸಂಚಾಲಕರಾದ ಮಾನವ ಹಕ್ಕುಗಳ ಹೋರಾಟಗಾರ ರಿಯಾಜ್‌ ಖತೀಬ್‌.

ಆನ್‌ಲೈನ್‌ ಸಮಾಲೋಚನೆ: ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವುದು, ಅವರ ಅನುಮಾನ ಪರಿಹರಿಸುವ ನಿಟ್ಟಿನಲ್ಲಿ ಆನ್‌ಲೈನ್‌ ಸಮಾಲೋಚನೆ ವ್ಯವಸ್ಥೆ ಮಾಡಲಾಗದೆ. ವಾಟ್ಸಆ್ಯಪ್‌ ಕಾಲ್‌ ಮೂಲಕವೇ ವೈದ್ಯರನ್ನು ಸಂಪರ್ಕಿಸಿ ವೈದ್ಯಕೀಯ ನೆರವು ಪಡೆಯಬಹುದು.

ಇದಕ್ಕಾಗಿ ಒಂಭತ್ತು ವೈದ್ಯರು ಇದ್ದಾರೆ. ಒಂಭತ್ತು ವೈದ್ಯರ ಪೈಕಿ ಆರು ಜನರು ನಿಗದಿತ ಸಮಯದಲ್ಲಿ ಸಲಹೆ-ಸೂಚನೆ ನೀಡಲಿದ್ದಾರೆ. ಇನ್ನು, ಮೂವರು ವೈದ್ಯರನ್ನು ಯಾವುದೇ ಸಮಯದಲ್ಲೂ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್‌ಗಳ ಲಭ್ಯತೆ ಬಗ್ಗೆಯೂ ಜನರಿಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೇ, ಬಡ ರೋಗಿಗಳಿಗೆ ತಕ್ಷಣದ ಅಗತ್ಯತೆಗಾಗಿ ಆಕ್ಸಿಜನ್‌ ಸಿಲಿಂಡರ್‌ನ್ನು ಒದಗಿಸಲಾಗುತ್ತದೆ. ಆಕ್ಸಿಜನ್‌ ರಿಫಿಲ್ಲಿಂಗ್‌ ಮಾಡಿಕೊಡಲಾಗುತ್ತದೆ.

ಆಕ್ಸಿಜನ್‌ಗಾಗಿ ಮೊ.ಸಂಖ್ಯೆ 90363 96949, 93425 45454ಕ್ಕೆ ಸಂಪರ್ಕಿಸಬಹುದು ಎಂದು ರಿಯಾಜ್‌ ಖತೀಬ್‌ ತಿಳಿಸಿದ್ದಾರೆ. ಆಕ್ಸಿಜನ್‌ ಸಿಲಿಂಡರ್‌ ಸೇವೆಯನ್ನು ಕೆಲವರು ದುರುಪಯೋಗ ಮಾಡಿಕೊಂಡಿ ದ್ದಾರೆ. ತುರ್ತು ಸಮಯದಲ್ಲಿ ಪಡೆದ ಸಿಲಿಂಡರ್‌ಗಳನ್ನು ಇದುವರೆಗೆ ತಂದು ಕೊಟ್ಟಿಲ್ಲ.

Advertisement

ಹೀಗಾಗಿ ಈಗ ಮುಂಗಡ ಹಣ ಪಡೆದು ಸಿಲಿಂಡರ್‌ ನೀಡಲಾಗುತ್ತದೆ. ಸಿಲಿಂಡರ್‌ ಮರಳಿ ಕೊಟ್ಟ ನಂತರ ಹಣ ವಾಪಸ್‌ ಕೊಡಲಾಗುತ್ತದೆ ಎಂದು ವಿವರಿಸಿದ್ದಾರೆ. ಬಡವರು -ನಿರ್ಗತಿಕರು, ದುರ್ಬಲ ವರ್ಗದವರಿಗೂ ನೆರವಿನ ಹಸ್ತ ಕಲ್ಪಿಸಲಾಗು ತ್ತಿದೆ. ಊಟ ಮತ್ತು ಆಹಾರದ ಕಿಟ್‌ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಮಕ್ಕ ಳ ಪಾಲನೆ-ಪೋಷಣೆಗೆ ಗಮನ ಕೊಡಿ ಕಲಬುರಗಿ: ಕೊರೊನಾ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅಸಂಖ್ಯಾತ ಮಕ್ಕಳು ತಬ್ಬಲಿಗಳಾಗಿವೆ. ಮತ್ತೂಂದು ಕಡೆ ದಿನನಿತ್ಯದ ದುಡಿಮೆಯೇ ಆಧಾರವಾಗಿ ಇಟ್ಟುಕೊಂಡಿದ್ದ ಬಡ ಕುಟುಂಬಗಳು ಕೊರೊನಾ ವಿರುದ್ಧದ ಹೋರಾಟದ ಜತೆಗೆ ಹಸಿವು ಮತ್ತು ಅಪೌಷ್ಟಿಕತೆ ವಿರುದ್ಧ ಹೋರಾಟ ಮಾಡಬೇಕಾಗಿದೆ.

ಆದ್ದರಿಂದ ಮಕ್ಕಳ ಪಾಲನೆ ಮತ್ತು ಪೋಷಣೆ ಕಡೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಗಮನ ಕೊಡಬೇಕೆಂದು ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠಲ್‌ ಚಿಕಣಿ ಒತ್ತಾಯಿಸಿದ್ದಾರೆ. ತಳ ಸಮುದಾಯದ ಸಾಕಷ್ಟು ಕುಟುಂಬಗಳು ಹಸಿವಿನಿಂದ ಬಳಲುತ್ತಿವೆ. ಹೀಗಾಗಿ ಆ ಕುಟುಂಬಗಳು ಮತ್ತು ಅವರ ಮಕ್ಕಳಿಗೆ ಪಡಿತರ, ದವಸ ಧಾನ್ಯಗಳ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಜಿಲ್ಲಾ ಕೆಂದ್ರದಲ್ಲಿ ಕೋವಿಡ್‌ ಬಾಧಿತ ಮಕ್ಕಳ ಆರೈಕೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ನಿರ್ಮಿಸಬೇಕೆಂದು ಪ್ರಾದೇಶಿಕ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಜುಲೈ ತಿಂಗಳ ಅಂತ್ಯದೊಳಗೆ ಎಲ್ಲ ಮಕ್ಕಳಿಗೆ ಲಸಿಕೆ ಒದಗಿಸುವ ವ್ಯವಸ್ಥೆ ಮಾಡಬೇಕು. ಮಹಾರಾಷ್ಟ್ರ ಸರ್ಕಾರ ಈಗಾಗಲೇ ಪಿಡಿಯಾಟ್ರಿಕ್‌ ಟಾಸ್ಕ್ ಫೋರ್ಸ್‌ ರಚನೆ ಮಾಡಿ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಟಾಸ್ಕ್ ಫೋರ್ಸ್‌ ರಚಿಸಬೇಕು. ಕೋವಿಡ್‌ ಬಾಧಿತ ಮಕ್ಕಳ ಮಾನಸಿಕ ಸ್ಥಿತಿಗತಿಗಳ ಮಾರ್ಗಸೂಚಿ ಹೊರಡಿಸಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕೋವಿಡ್‌ ಕಾರಣದಿಂದ ಕೃಷಿ ಕೂಲಿ ಕಾರ್ಮಿಕರು, ಅಲೆಮಾರಿ ಸಮುದಾಯ, ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳು ಯಾವುದೇ ಆದಾಯವಿಲ್ಲದೇ ತೊಂದರೆಗೆ ಈಡಾಗಿದ್ದಾರೆ. ಇಂತಹ ಕುಟುಂಬಗಳ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವಂತೆ ಆಗಿದೆ. ಇಂತಹ ಪ್ರತಿ ಕುಟುಂಬಕ್ಕೆ ಸರ್ಕಾರ ಪ್ರತಿ ತಿಂಗಳು ಐದು ಸಾವಿರ ರೂ. ಧನಸಹಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಕೊರೊನಾದಿಂದ ಪೋಷಕರನ್ನು ಕಳೆದುಕೊಂಡಂತ ಮಕ್ಕಳನ್ನು ಅಧಿನ ಕೃತವಾಗಿ ದತ್ತು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕಾನೂನು ಬದ್ಧ ದತ್ತು ಸ್ವೀಕಾರಕ್ಕೆ ಸಂಬಂಧಿ ಸಿದಂತೆ ಹೆಚ್ಚಿನ ಪ್ರಚಾರ ಮಾಡಬೇಕು. ಮಕ್ಕಳ ಪಾಲನೆ ಪೋಷಣೆ ಮತ್ತು ರಕ್ಷಣೆಗೆ ಸಂಬಂ ಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಜವಾಬ್ದಾರಿಯುತ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಕಲಬುರಗಿ: ಗುಲಬರ್ಗಾ ಎನ್‌ಜಿಒಗಳ ಫೆಡರೇಷನ್‌ ಆರಂಭಿಸಿರುವ ಉಚಿತ ಆಟೋ ಆಂಬ್ಯುಲೆನ್ಸ್‌ ಸೇವೆಗೆ ಡಿಸಿಪಿ ಡಿ. ಕಿಶೋರಬಾಬು ಹಸಿರು ನಿಶಾನೆ ತೋರಿದರು. ಕಲಬುರಗಿ: ವಿಜಯಪುರದ ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ವೀರೇಶ ಎಸ್‌.ಡಿ. 10 ಆಕ್ಸಿಜನ್‌ ಕಾನ್ಸ್‌ಂಟ್ರೇಟರ್‌ಗಳನ್ನು ಅಪರ ಡಿಸಿ ಡಾ| ಶಂಕರ ವಣಿಕ್ಯಾಳಗೆ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next