Advertisement

ಉಚಿತ ಜ್ಯೋತಿಷ್ಯ ಶಿಬಿರಕೆ ಚಾಲನೆ

11:06 AM Jan 02, 2020 | Team Udayavani |

ಹುಬ್ಬಳ್ಳಿ: ಜ್ಯೋತಿಷ್ಯದ ಕುರಿತು ಜನರಲ್ಲಿ ಹೆಚ್ಚಿನ ಆಸಕ್ತಿ ಮೂಡಿರುವುದರಿಂದ ಕೆಲವರು ಇದನ್ನು ಹಣ ಮಾಡಿಕೊಳ್ಳುವ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸುರೇಶ ಜೈನ್‌ ಹೇಳಿದರು.

Advertisement

ಇಲ್ಲಿನ ವಿಶ್ವೇಶ್ವರ ನಗರದ ವರದಿಸಿದ್ಧ ವಿನಾಯಕ ಮಂದಿರದಲ್ಲಿ ಶ್ರೀ ಪರಮಾತ್ಮ ಮಹಾಸಂಸ್ಥಾನದಿಂದ ಜ.1ರಿಂದ ಫೆಬ್ರವರಿ 1ರ ವರೆಗೆ ಆಯೋಜಿಸಿರುವ ಉಚಿತ ಜ್ಯೋತಿಷ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಋಷಿಮುನಿಗಳು ನೀಡಿದ ಜ್ಯೋತಿಷ್ಯ ಶಾಸ್ತ್ರ ಇಂದು ದೇಶ-ವಿದೇಶಗಳಲ್ಲಿ ನಂಬುಗೆಗೆ ಅರ್ಹವಾಗಿದೆ. ಸಂಕಷ್ಟ ನಿವಾರಣೆ ಮತ್ತು ಮುಂದಾಗುವ ಗಂಡಾಂತರಗಳನ್ನು ತಪ್ಪಿಸಲು ಹಾಗೂ ಅದಕ್ಕೆ ಸೂಕ್ತ ಮತ್ತು ಸರಳ ಪರಿಹಾರಗಳನ್ನು ಪಡೆಯಲು ಜ್ಯೋತಿಷ್ಯಶಾಸ್ತ್ರ ದಾರಿದೀಪವಾದ ಅನೇಕ ಉದಾಹರಣೆಗಳಿವೆ. ನಂಬಿಕೆಗೆ ಅರ್ಹವಾದ ಭಾರತೀಯ ಜ್ಯೋತಿಷ್ಯಶಾಸ್ತ್ರದ ಸದುಪಯೋಗ ಪಡೆದುಕೊಳ್ಳಬೇಕು. ಜ್ಯೋತಿಷ್ಯ ಹಣ ಮಾಡುವ ಸಾಧನವಾಗಬಾರದು ಎಂದು ಹೇಳಿದರು.

ಶ್ರೀ ಪರಮಾತ್ಮಾಜಿ ಮಹಾರಾಜ ಸಾನ್ನಿಧ್ಯ ವಹಿಸಿ, ಜ್ಯೋತಿಷ್ಯಕ್ಕಾಗಿ ಸಾವಿರಾರು ರೂಪಾಯಿ ಹಣಕೊಟ್ಟು ಜನರು ಜ್ಯೋತಿಷಿಗಳನ್ನು ಭೇಟಿಯಾಗಬೇಕಾದ ಇಂದಿನ ದಿನದಲ್ಲಿ, ಉಚಿತವಾಗಿ ಜ್ಯೋತಿಷ್ಯವನ್ನು ಹೇಳುವ ವ್ಯವಸ್ಥೆಯನ್ನು ಮಾಡಿ, ಜನಸಾಮಾನ್ಯರಿಗೆ ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರಾಮಕೃಷ್ಣ ಹೆಗಡೆ, ಸಿ.ಸಿ ದೀಕ್ಷಿತ್‌, ಭಾರತಿ ಪಾಟಿಲ, ಜಿ. ಮಂಗಳಮೂರ್ತಿ, ವಸಂತ ಕೇಣಿ, ರಮೇಶ ಕುಲಕರ್ಣಿ, ರಾಮಭದ್ರನ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next