Advertisement

ಕರ್ನಾಟಕ: ಸೈಬರ್‌ ಕ್ರೈಂಗೆ ವಿಚಾರಣೆ ಇಲ್ಲ!

09:19 AM Oct 24, 2019 | Team Udayavani |

ಹೊಸದಿಲ್ಲಿ: ಕರ್ನಾಟಕದಲ್ಲಿ ಜನರು ಸೈಬರ್‌ ಅಪರಾಧದ ಸಂತ್ರಸ್ತರಾದರೆ ಅವರಿಗೆ ನ್ಯಾಯ ಸಿಗುವುದು ದೂರದ ಮಾತು. 2017ರಲ್ಲಿ ಯಾವ ಸೈಬರ್‌ ಕ್ರೈಂನಲ್ಲಿಯೂ ಯಾವೊಬ್ಬರಿಗೂ ಶಿಕ್ಷೆಯೇ ಆಗಿಲ್ಲ! ಅಷ್ಟೇ ಯಾಕೆ, ವಿಚಾರಣೆಗೆ ನ್ಯಾಯಾಂಗದ ಮೆಟ್ಟಿಲೂ ಹತ್ತಿಲ್ಲ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ ಅಂಶಗಳಲ್ಲಿ ಈ ವಿಚಾರ ಪ್ರಸ್ತಾವವಾಗಿದೆ.

Advertisement

ದೇಶದಲ್ಲಿ ದಾಖಲಾದ ಒಟ್ಟಾರೆ ಸೈಬರ್‌ ಕ್ರೈಂ ಪ್ರಕರಣಗಳಲ್ಲಿ ಶೇ. 22.6 ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 2017ರಲ್ಲಿ ದಾಖಲಾದ 13,941 ಪ್ರಕರಣಗಳಲ್ಲಿ ಶೇ. 94.6 ರಷ್ಟು ಕೇಸ್‌ಗಳು ವಿಚಾರಣೆಗೆ ಬಾಕಿ ಇವೆ. 2017 ರಲ್ಲಿ ಕರ್ನಾಟಕದಲ್ಲಿ ಒಟ್ಟು 3174 ಪ್ರಕರಣಗಳು ದಾಖಲಾಗಿದ್ದವು. ತನಿಖೆ ಮಾಡುವುದಕ್ಕಾಗಿ ಸೈಬರ್‌ ಕ್ರೈಂ ವಿಭಾಗದ ಬಳಿ 2017 ರಲ್ಲಿ ಒಟ್ಟು 4628 ಕೇಸ್‌ಗಳು ಇದ್ದವು. ಈ ಪೈಕಿ 1542 ಕೇಸ್‌ಗಳ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿ, ಕೇವಲ 130 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಇಡೀ ದೇಶದಲ್ಲಿ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಸೈಬರ್‌ ಕ್ರೈಂ ಪ್ರಕರಣಗಳು ದಾಖಲಾಗಿವೆ. ಅನಂತರದ ಸ್ಥಾನ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕಿದೆ. 2016 ಕ್ಕೆ ಹೋಲಿಸಿದರೆ 2017ರಲ್ಲಿ ಶೇ. 76.96 ರಷ್ಟು ಹೆಚ್ಚು ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 12,317 ಹಾಗೂ 2015 ರಲ್ಲಿ 11,592 ಪ್ರಕರಣಗಳು ದಾಖಲಾಗಿವೆ. ಇನ್ನು ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ 729 ಪ್ರಕರಣಗಳು 2017ರಲ್ಲಿ ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ 1,119 ಕೇಸ್‌ಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next