ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅನ್ನು ರಿಸೆಟ್ ಮಾಡಿಕೊಡುವುದಾಗಿ ಹೇಳಿ ಲಕ್ಷಾಂತರ ರೂ. ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ದೇವರಚಿಕ್ಕನಹಳ್ಳಿ ನಿವಾಸಿ ಮಹತಾಬ್ ಆಲಂ ಅವರು ದೂರು ನೀಡಿದ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ವೈಟ್‌ಫೀಲ್ಡ್ ವಿಭಾಗ ಸೆನ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಹತಾಬ್ ಆಲಂ ಅವರ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಬ್ಲಾಕ್ ಆಗಿತ್ತು. ಹೀಗಾಗಿ ಗೂಗಲ್‌ನಲ್ಲಿ ಫೇಸ್‌ಬುಕ್ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದಾಗ ಎರಡು ಮೊಬೈಲ್ ನಂಬರ್‌ಗಳು ಸಿಕ್ಕಿದ್ದು, ಕರೆ ಮಾಡಿದ್ದಾರೆ.
ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ
ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ಲಿಂಕೊಂದನ್ನು ಕಳುಹಿಸುತ್ತೇನೆ. ಅದಕ್ಕೆ ಎರಡು ರೂ. ವರ್ಗಾವಣೆ ಮಾಡುವಂತೆ ಸೂಚಿಸಿದ್ದಾನೆ. ಅದನ್ನು ನಂಬಿದ ಆಲಂ, ಆರೋಪಿ ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ, ತಮ್ಮ ಖಾತೆಗೆ ಲಿಂಕ್ ಇರುವ ಮೊಬೈಲ್ ನಂಬರ್ ಮತ್ತು ಪಿನ್ ಅನ್ನು ಇನಿಷಿಯೇಟ್ ಮಾಡುತ್ತಿದ್ದಂತೆ ಎರಡು ಬ್ಯಾಂಕ್ ಖಾತೆಗಳಿಂದ 1,20 ಲಕ್ಷ ರೂ. ಹಂತ-ಹಂತವಾಗಿ ಕಡಿತಗೊಂಡಿದೆ.
ಈ ಸಂಬಂಧ ಆಲಂ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.