ಬೆಂಗಳೂರು: ಹರ್ಬಲ್ ಸೀಡ್ಸ್, ಮ್ಯಾಟ್ರಿ ಮೋನಿ ಮೂಲಕ ಸಾರ್ವಜನಿ ಕರನ್ನು ವಂಚಿಸುತ್ತಿದ್ದ ಇಬ್ಬರು ನೈಜೀರಿಯಾ
ಪ್ರಜೆಗಳನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಪೇಸ್ (26) ಮತ್ತು ಡಿ.ಕಿಂಗ್‌ಸ್ಲೆ (33) ಬಂಧಿತರು. ಆರೋಪಿಗಳಿಂದ 2 ಲ್ಯಾಪ್‌ಟಾಪ್, 3 ಮೊಬೈಲ್, 3 ಡಾಂಗಲ್, 18 ಸಿಮ್ ಕಾರ್ಡ್‌ಗಳು, ಒಂದು ಪಾಸ್ ಪೋರ್ಟ್, ಎರಡು ಸಾವಿರ ಮುಖ ಬೆಲೆಯ ಎರಡು ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕೆಲ ವರ್ಷಗಳ ಹಿಂದೆ ವ್ಯವಹಾರಿಕ ವೀಸಾದಡಿ ಬೆಂಗಳೂರಿಗೆ ಬಂದಿದ್ದು, ಯಲಹಂಕ ಬಳಿಯ ತಿರು ಮೇನಹಳ್ಳಿಯಲ್ಲಿ ನೆಲೆಸಿದ್ದರು. ಆರೋಪಿ ಗಳ ಪೈಕಿ ಪೇಸ್ ಎಂಬಾತ ಪಾಸ್‌ಪೋರ್ಟ್ ಇಲ್ಲದೇ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದಾನೆ. ಇನ್ನು ಮತ್ತೂಬ್ಬ ಆರೋಪಿ ವೀಸಾ ಅವಧಿ ಮುಕ್ತಾಯ ವಾಗಿದ್ದರು ಇಲ್ಲಿಯೇ ನೆಲೆಸಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ. ಆರೋಪಿಗಳು ಯಾವುದೇ ವ್ಯವಹಾರ ನಡೆಸದೆ ಜೀವನ ನಿರ್ವಹಣೆಗಾಗಿ ಈ ರೀತಿಯ ಕಾನೂನು ಬಾಹಿರ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಅನ್ಯ ವ್ಯಕ್ತಿಗಳ ಹೆಸರಿನಲ್ಲಿ ಸಿಮ್‌ಕಾರ್ಡ್‌ಗಳನ್ನು ಖರೀದಿಸಿ ಓಎಲ್ ಎಕ್ಸ್‌ನಲ್ಲಿ ಅಪರಿಚಿತ ಕಾರುಗಳ ಫೋಟೋಗಳನ್ನು ಪ್ರಕಟಿಸುತ್ತಿದ್ದರು. ಇದನ್ನು ನಂಬಿ ಸಂಪರ್ಕಿಸುತ್ತಿದ್ದ ವ್ಯಕ್ತಿಗಳಿಗೆ ಕಾರು ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿವೆ. ನಾವು ಸೂಚಿಸುವ ಖಾತೆಗೆ ಹಣ ಜಮೆ ಮಾಡಿದರೆ ಪಾರ್ಕಿಂಗ್ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಹೇಳಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ನಂತರ ಸಿಮ್ ಕಾರ್ಡ್ ಬಿಸಾಡುತ್ತಿದ್ದರು. ಇದೇ ರೀತಿ ಹರ್ಬಲ್ ಸೀಡ್ಸ್, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಉದ್ಯೋಗ ಹಾಗೂ ಮದುವೆಗೆ ವಧು, ವರರನ್ನು ತೋರಿಸುವುದಾಗಿ ನಂಬಿಸಿ ಅಮಾಯಕ ಸಾರ್ವಜನಿಕರಿಂದ
ಹಣ ವಸೂಲಿ ಮಾಡಿದ್ದರು ಎಂದು ಸೈಬರ್‌ಸ ಪೊಲೀಸರು ತಿಳಿಸಿದ್ದಾರೆ.