Advertisement
ಹೆಲ್ಲಿ ಪಂಚಲ್ (20) ಅವರು ಆ. 30ರಂದು ಸ್ವಿಗ್ಗಿ ಆ್ಯಪ್‌ನಲ್ಲಿ ತಿನಿಸುಗಳನ್ನು ಆರ್ಡರ್ ಮಾಡಿ 358 ರೂ.ಗಳನ್ನು ಯುಪಿಐ ಮೂಲಕ ಪಾವತಿ ಮಾಡಿ ಬಳಿಕ ಆ ತಿನಿಸುಗಳನ್ನು ರದ್ದುಪಡಿಸಿದ್ದರು. ಆದರೆ ಸ್ವಿಗ್ಗಿ ಆ್ಯಪ್‌ನ ಕಸ್ಟಮರ್ ಕೇರ್‌ನವರು ಹಣವನ್ನು ವಾಪಸು ನೀಡುವುದಿಲ್ಲ ಎಂದು ತಿಳಿಸಿದ್ದರು. ಬಳಿಕ ಹೆಲ್ಲಿ ಪಂಚಲ್ ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ನಾವು ಸ್ವಿಗ್ಗಿ ಕಸ್ಟಮರ್ ಕೇರ್‌ನಿಂದ ಮಾತನಾಡುವುದಾಗಿ ತಿಳಿಸಿ, ಎನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಲು ತಿಳಿಸಿದ್ದರು. ಅದರಂತೆ ಮಾಡಿದ ಬಳಿಕ ಎಲ್ಲ ಮಾಹಿತಿಯನ್ನು ಪಡೆದ ಆರೋಪಿಗಳು ಹೆಲ್ಲಿ ಪಂಚಲ್ ಅವರ ಬ್ಯಾಂಕ್ ಆಫ್ ಬರೋಡಾ ಖಾತೆಯಲ್ಲಿದ್ದ 27,951ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Fraud : ಆನ್‌ಲೈನ್ ಮೂಲಕ ಸಾವಿರಾರು ರೂ.ವಂಚನೆ
11:51 PM Aug 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.