Advertisement
ಉಡುಪಿಯ ಸುನೀತಾ ಹಲಗಲಿ ಅವರಿಗೆ ಟೆಲಿಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ಟೈಗರ್ ಗ್ಲೋಬಲ್ ಟ್ರೇಡ್ ಮೊಬೈಲ್ ಆ್ಯಪ್ ಕಂಪೆನಿ ಎಂಬುವುದಾಗಿ ಯಾರೋ ಅಪರಿಚಿತರು ಸಂಪರ್ಕಿಸಿ ಟಿಆರ್ ಟ್ರೇಡ್‌ನ ಷೇರ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುತ್ತದೆ. ಲಾಭಾಂಶದ ಹಣವನ್ನು ಕೇವಲ 48-72 ಗಂಟೆಗಳಲ್ಲಿ ಹಿಂಪಡೆಯಬಹುದು ಎಂಬುವುದಾಗಿ ನಂಬಿಸಿದ್ದರು. ಆರೋಪಿಗಳ ಟೆಲಿಗ್ರಾಮ್ ಗ್ರೂಪ್ ಮತ್ತು ವಾಟ್ಸಾಪ್ ಗ್ರೂಪ್‌ಗೆ ಲಿಂಕ್ ಮೂಲಕ ಸೇರಿಸಿಕೊಂಡು ಹಣ ತೊಡಗಿಸುವಂತೆ ತಿಳಿಸಿದ್ದರು. ಇದನ್ನು ನಂಬಿದ ಸುನೀತಾ ಅವರು ನ.16ರಿಂದ ಡಿ.13ರ ಮಧ್ಯಾವಧಿಯಲ್ಲಿ ಯುಪಿಐ, ಐಎಂಪಿಎಸ್ ಮೂಲಕ ಒಟ್ಟು 51,90,000 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಆದರೆ ಆರೋಪಿಗಳು ಹಣವನ್ನು ಹಾಗೂ ಲಾಭಾಂಶವನ್ನು ನೀಡದೆ ವಂಚಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರೆಡಿಟ್ ಕಾರ್ಡ್ ಉಪಯೋಗಿಸಿಕೊಂಡು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆ ಯಿಂದ ಸಾವಿರಾರು ರೂ.ಹಣ ಎಗರಿಸಿದ ಘಟನೆ ನಡೆದಿದೆ. ಬ್ರಹ್ಮಾವರದ ಸಮೀರ್ ತೋಟಾ ಅವರು ಕೋಟ ಪಡುಕರೆಯ ತನ್ನ ಕಚೇರಿಯಲ್ಲಿರುವಾಗ ಅವರ ಕೆನರಾ ಬ್ಯಾಂಕ್‌ನ ಕ್ರೆಡಿಟ್ ಕಾರ್ಡಿ ನಿಂದ 93,613ರೂ.ಗಳನ್ನು ಅಪರಿಚಿತರು ಅಕ್ರಮವಾಗಿ ವರ್ಗಾಯಿಸಿಕೊಂಡಿ ದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.