ರಾಮನಗರ: ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಆಭರಣ ಕದಿಯುತ್ತಿದ್ದ ಇಬ್ಬರು ಕಳ್ಳರನ್ನುಗ್ರಾಮಸ್ಥರೇ ಹಿಡಿದು, ಥಳಿಸಿಪೊಲೀಸರಿಗೆ ಒಪ್ಪಿಸಿರುವಘಟನೆ ತಾಲೂಕಿನ ಕೆ.ಜಿ.ಹೊಸ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂಧಿತರು ಒಡಿಶಾ ಮೂಲದವರು. ಮೋಸ ಹೋದ ಕೆ.ಜಿ.ಹೊಸಳ್ಳಿಯ ಸುಧಾಹೇಳುವಂತೆ, ಮನೆ ಬಳಿ ಬಂದ ವ್ಯಕ್ತಿಗಳು ಪೌಡರ್ ಕೊಟ್ಟು ಚಿನ್ನಕ್ಕೆ ತಿಕ್ಕಿ ಒಳಪು ಬರುತ್ತದೆ ಎಂದರು.
ಬಳಿಕ ಅವರಿಂದ ಪೌಡರ್ ತೆಗೆದುಕೊಂಡಿದ್ದು, ಆ ಮೇಲೆ ನನಗೆ ಮಂಕು ಕವಿದಂತಾಗಿ, ಚಿನ್ನದ ಮಾಂಗಲ್ಯ ಸರ ಬಿಚ್ಚಿ ಅವರಿಗೆ ಕೊಟ್ಟೆ. ನಂತರ ಸರವನ್ನು ಅವರು ಯಾವುದೋ ನೀರಿನಲ್ಲಿ ಹಾಕಿ, ಕೊಟ್ಟು ತಕ್ಷಣವೇ ಹೊರಟು ಹೋದರು. ನನಗೆ ಚಿನ್ನದ ತೂಕದಲ್ಲಿ ಅನುಮಾನ ಬಂದು, ಪಕ್ಕದ ಮನೆಯವರಿಗೆ ವಿಷಯ ತಿಳಿಸಿದೆ. 50 ಗ್ರಾಂ ಇದ್ದ ಸರ, ತದ 37 ಗ್ರಾಂ ಆಗಿತ್ತು ಎಂದು ವಿವರಿಸಿದರು.
ಬಳಿಕ ಎಚ್ಚೆತ್ತ ಸ್ಥಳೀಯರು ಆರೋಪಿಗಳಿಗೆ ಹುಡು ಕಾಡಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗೆ ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಆಗಲೇ ಸಬ್ಬಕೆರೆ ಗ್ರಾಮದಲ್ಲಿ ಹೋಗುತ್ತಿರುವ ವಿಷಯ ತಿಳಿದು, ಅವರನ್ನು ಹಿಡಿದು, ಕೆ.ಜಿ.ಹೊಸಳ್ಳಿ ಗ್ರಾಮಕ್ಕೆ ಎಳೆದು ತಂದು,ನಂತರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಮನಗರಗ್ರಾಮಾಂತರ ಠಾಣೆ ಸಬ್‌ಇನ್‌ಸ್ಪೆಕ್ಟರ್ ರಾಮಚಂದ್ರಯ್ಯ ಹಾಗೂ ಸಿಬ್ಬಂದಿ ಆರೋಪಿ ಗಳನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮಸ್ಥರ ಮೇಲೆ ಪೊಲೀಸರ ಆಕ್ರೋಶ: ಸ್ಥಳಕ್ಕೆ ಆಗಮಿಸಿದ ರಾಮನಗರ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ರಾಮಚಂದ್ರಯ್ಯ, ಗ್ರಾಮಸ್ಥರ ಮೇಲೆಯೇ ಏಕಾಏಕಿ ಹರಿಹಾಯ್ದರು. ಇದರಿಂದ ಕುಪಿತ ಗೊಂಡ ಗ್ರಾಮದವರು, ಆರೋಪಿಗಳನ್ನು ಒಪ್ಪಿಸಲು ನಿರಾಕರಿಸಿ, ಪ್ರತಿರೋಧ ವ್ಯಕ್ತಪಡಿಸಿದರು. ಸ್ಥಳಕ್ಕೆ ಎಸ್ಪಿ ಬರಬೇಕು ಎಂದು ಕೆಲಕಾಲ ಪಟ್ಟು ಹಿಡಿದರು.
ಘಟನೆಯ ಗಂಭೀರತೆ ಅರಿತ ರಾಮಚಂದ್ರಯ್ಯ, ಗ್ರಾಮಸ್ಥರನ್ನು ಸಮಾಧಾನಪಡಿಸಿ, ಕೆಲ ಹೊತ್ತಿನ ನಂತರ ದೂರುದಾರರಿಂದ ಮಾಹಿತಿ ಪಡೆದು, ಕಳ್ಳರು ಕದ್ದಿರುವ ಚಿನ್ನ ವಾಪಸ್ ಕೊಡಿಸುವ ಭರವಸೆ ನೀಡಿದರು.
ಬಳಿಕ ಆರೋಪಿಗಳನ್ನು ತಮ್ಮ ಜೀಪಿನಲ್ಲಿಯೇ ಹತ್ತಿಸಿಕೊಂಡು ಠಾಣೆಗೆ ಕರೆತಂದರು. ಈ ಸಂಬಂಧ ಗ್ರಾಮಾಂತರ ತನಿಖೆ ಮುಂದುವರಿದಿದೆ.